‘ಲವ್ ಜಿಹಾದ್’ ಬಗ್ಗೆ ಕರೆ ನೀಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಕಾಂಗ್ರೆಸ್ ನಾಯಕ ಕೆ.ಕೆ. ಮಿಶ್ರಾ ಅವರ ಹಾಸ್ಯಾಸ್ಪದ ಕರೆ

ಭೋಪಾಲ್ (ಮಧ್ಯಪ್ರದೇಶ) – ದೀಪಾವಳಿಯ ಮುನ್ನಾದಿನದಂದು, ಮಾಜಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹಿಂದೂಗಳಿಗೆ ಕರೆ ನೀಡಿದ್ದರು, ‘ಹಿಂದೂ ಹುಡುಗಿ ಬೇರೆ ಧರ್ಮದ ವ್ಯಕ್ತಿಯೊಂದಿಗೆ ಮದುವೆಯಾಗಲು ಪ್ರಯತ್ನಿಸುತ್ತಿದ್ದರೆ, ಮೊದಲು ಅವಳಿಗೆ ಬುದ್ಧಿ ಹೇಳಿ. ಅವಳು ಕೇಳದಿದ್ದರೆ, ಅವಳ ಕಾಲುಗಳನ್ನು ಮುರಿದು ಹಾಕಿ’; ಆದರೆ ನೀವು ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ರಾಮ್‌ಲಾಲ್ ಅವರ ಸೋದರ ಸೊಸೆ, ಭಾಜಪ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಮಗಳು ಮತ್ತು ಶಾಹನವಾಜ್ ಹುಸೇನ್ ಅವರ ಪತ್ನಿ ಸೇರಿದಂತೆ ಡಜನ್ ಗಟ್ಟಲೆ ಭಾಜಪ ನಾಯಕರ ಮನೆಯ ಹೆಣ್ಣು ಮಕ್ಕಳ ಕಾಲುಗಳನ್ನು ಮುರಿಯಲು ಹೋಗುತ್ತೀರಾ? ಏಕೆಂದರೆ ಈ ಎಲ್ಲ ಮಹಿಳೆಯರು ‘ನಿಮ್ಮ ಭಾಷೆಯಲ್ಲಿ’ ಅನ್ಯಧರ್ಮೀಯರನ್ನು (ಮುಸ್ಲಿಮರನ್ನು) ಮದುವೆಯಾಗಿದ್ದಾರೆ, ಎಂದು ಕಾಂಗ್ರೆಸ್ ನಾಯಕ ಕೆ.ಕೆ. ಮಿಶ್ರಾ ಅವರು ‘ಎಕ್ಸ್’ ನಲ್ಲಿ ಬರೆದು (ಪೋಸ್ಟ್ ಮಾಡಿ) ಪ್ರಶ್ನಿಸಿದ್ದಾರೆ.
ಕೆ.ಕೆ. ಮಿಶ್ರಾ ಅವರು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಸವಾಲು ಹಾಕಿ, ಅನ್ಯಧರ್ಮೀಯರು ಯಾರು? ನೀವು ಅವರ ಧಣಿ(ಗಂಡ)ಯರ ಕಾಲುಗಳನ್ನು ಮಾತ್ರವಲ್ಲ, ಕೈಗಳನ್ನೂ ಸಹ ಮುರಿಯಿರಿ. ನಿಮ್ಮಲ್ಲಿ ಧೈರ್ಯ ಇದೆಯೇ? ಅಥವಾ ನೀವು ಕೇವಲ ಮಾತನಾಡುವಿರಾ? ಎಂದಿದ್ದಾರೆ.
ಸಂಪಾದಕೀಯ ನಿಲುವುಸಾಧ್ವಿ ಪ್ರಜ್ಞಾಸಿಂಗ್ ನೀಡಿದ ಕರೆ ಜೀರ್ಣವಾಗದ ಕಾರಣವೇ ಕಾಂಗ್ರೆಸ್ ನಾಯಕರು ಲವ್ ಜಿಹಾದಿ ಮುಸ್ಲಿಮರನ್ನು ಬೆಂಬಲಿಸಲು ಈ ರೀತಿಯ ಕರೆಗಳನ್ನು ನೀಡಿದ್ದಾರೆ. ಸಾಧ್ವಿಯವರ ಕರೆ ಯಾರಿಗಾಗಿ ಎಂಬುದನ್ನು ಹಿಂದೂಗಳಿಗೆ ತಿಳಿದಿದೆ. ಆದ್ದರಿಂದ, ಕಾಂಗ್ರೆಸ್ಸಿನವರು ಇಂತಹ ಎಷ್ಟು ಹಾಸ್ಯಾಸ್ಪದ ಕರೆಗಳನ್ನು ನೀಡಿದರೂ, ಯಾವುದೇ ಪ್ರಯೋಜನವಾಗುವುದಿಲ್ಲ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !