
ರಾಂಚಿ (ಜಾರ್ಖಂಡ್) – ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿರ ವಾದದ ಕುರಿತು ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿದ ನಂತರ, ನ್ಯಾಯವಾದಿ ಮತ್ತು ನ್ಯಾಯಮೂರ್ತಿಗಳ ನಡುವೆ ವಾಗ್ವಾದ ನಡೆಯಿತು. ‘ನಾನು ನನ್ನದೇ ಆದ ರೀತಿಯಲ್ಲಿ ವಾದ ಮಂಡಿಸಬಹುದು. ಯಾವುದೇ ನ್ಯಾಯವಾದಿರಿಗೆ ಅಪಮಾನ ಮಾಡಲು ಪ್ರಯತ್ನಿಸಬೇಡಿ. ದೇಶದ ನ್ಯಾಯಾಲಯಗಳಲ್ಲಿ ವಾತಾವರಣವು ಉದ್ವಿಗ್ನವಾಗಿದೆ. ಮಿತಿ ಮೀರಬೇಡಿ. ನಾನು ೪೦ ವರ್ಷಗಳಿಂದ ವಕಾಲತ್ತು ಮಾಡುತ್ತಿದ್ದೇನೆ’, ಎಂದು ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿನ ಓರ್ವ ನ್ಯಾಯವಾದಿರು ನ್ಯಾಯಮೂರ್ತಿಗಳಿಗೇ ಖಾರವಾಗಿ ಹೇಳಿದರು. ಅಕ್ಟೋಬರ್ ೧೬ ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ.
೧. ಅಕ್ಟೋಬರ್ ೧೬ ರಂದು ನ್ಯಾಯಮೂರ್ತಿ ರಾಜೇಶ್ ಕುಮಾರ್ ಅವರು ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸುವ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ನ್ಯಾಯವಾದಿರ ಕಕ್ಷಿದಾರರ ಮನೆಯಲ್ಲಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದರಿಂದಾಗಿ ಉಂಟಾದ ತೊಂದರೆಯ ಬಗ್ಗೆ ತಿಳಿಸಲಾಯಿತು. ಈ ಬಗ್ಗೆ ನ್ಯಾಯಮೂರ್ತಿ ರಾಜೇಶ್ ಕುಮಾರ್ ನೀಡಿದ ನಿರ್ಧಾರವನ್ನು ನ್ಯಾಯವಾದಿರು ಒಪ್ಪಿಕೊಂಡರು. ನಂತರ ಮತ್ತೊಂದು ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಆ ಸಮಯದಲ್ಲಿ ನ್ಯಾಯವಾದಿರಾದ ಮಹೇಶ್ ತಿವಾರಿ ಅವರ ವಾದ ಮಂಡನೆಯ ವಿಧಾನದ ಬಗ್ಗೆ ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿದ ನಂತರ ವಾಗ್ವಾದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ತಿವಾರಿ ಅವರು ಮೇಲಿನ ಹೇಳಿಕೆಗಳನ್ನು ನೀಡಿದರು.
೨. ನ್ಯಾಯವಾದಿ ತಿವಾರಿ ಅವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣದಡಿಯಲ್ಲಿ ಕ್ರಮ ಪ್ರಾರಂಭಿಸಲಾಗಿದೆ. ಅಕ್ಟೋಬರ್ ೧೭ ರಂದು ಜಾರ್ಖಂಡ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ತರ್ಲೋಕ ಸಿಂಗ್ ಚೌಹಾಣ್ ಸೇರಿದಂತೆ ೫ ನ್ಯಾಯಮೂರ್ತಿಗಳ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು. ನ್ಯಾಯವಾದಿ ತಿವಾರಿ ಅವರಿಗೆ ೩ ವಾರಗಳಲ್ಲಿ ತಮ್ಮ ಹೇಳಿಕೆಯನ್ನು ಮಂಡಿಸಲು ಆದೇಶ ನೀಡಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ ೧೧ ರಂದು ನಡೆಯಲಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram