|

ಕೊಲ್ಹಾಪುರ, ೧೮ ಅಕ್ಟೋಬರ್ (ವಾರ್ತೆ) – ಕಾ. ಗೋವಿಂದ ಪಾನಸರೆ ಹತ್ಯೆ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಧೀಶರು ತಮ್ಮ ಮೊದಲಿನ ಆದೇಶವನ್ನು ಪುನರ್ ಪರಿಶೀಲಿಸಿ ಜಾಮೀನು ರದ್ದು ಮಾಡುವುದು, ಇದು ಕಾನೂನಿನ ದೃಷ್ಟಿಯಿಂದ ಅನುಮತಿಗೆ ಯೋಗ್ಯವಲ್ಲ, ಎಂದು ಮುಂಬಯಿ ಉಚ್ಚ ನ್ಯಾಯಾಲಯದ ಕೊಲ್ಹಾಪುರ ‘ಸರ್ಕ್ಯೂಟ್ ಬೆಂಚ್’ನ ನ್ಯಾಯಮೂರ್ತಿ ಶಿವಕುಮಾರ್ ಡಿಗೇ ಅವರು ಮಹತ್ವದ ಅವಲೋಕನವನ್ನು ದಾಖಲಿಸಿದ್ದಾರೆ. (‘ಸರ್ಕ್ಯೂಟ್ ಬೆಂಚ್’ ಎಂದರೆ ನ್ಯಾಯಾಲಯದ ಒಂದು ತಾತ್ಕಾಲಿಕ ಸ್ಥಳ, ಅಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನಿರ್ದಿಷ್ಟ ಅವಧಿಯಲ್ಲಿ ಬಂದು ಮೊಕದ್ದಮೆಗಳನ್ನು (ಪ್ರಕರಣಗಳನ್ನು) ನಡೆಸುತ್ತಾರೆ) ಡಾ. ತಾವಡೆ ಅವರ ಕುರಿತಾಗಿ ನೀಡಲಾದ ಸವಿಸ್ತಾರ ತೀರ್ಪಿನಲ್ಲಿ ಈ ಅತ್ಯಂತ ಮಹತ್ವದ ಅವಲೋಕನವನ್ನು ದಾಖಲಿಸಲಾಗಿದೆ. ಕಾ. ಪಾನಸರೆ ಹತ್ಯೆ ಪ್ರಕರಣದಲ್ಲಿ ಡಾ. ವೀರೇಂದ್ರಸಿಂಗ್ ತಾವಡೆ ಅವರೊಂದಿಗೆ ಸರ್ವಶ್ರೀ ಅಮೋಲ್ ಕಾಳೆ ಮತ್ತು ಶರದ್ ಕಳಸಕರ್ ಅವರಿಗೆ ಅಕ್ಟೋಬರ್ ೧೪ ರಂದು ಜಾಮೀನು ಮಂಜೂರು ಮಾಡಲಾಗಿದೆ.
ಡಾ. ವೀರೇಂದ್ರಸಿಂಗ್ ತಾವಡೆ ಅವರಿಗೆ ೨೦೧೮ ರಲ್ಲಿ ಕೊಲ್ಹಾಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನನ್ನು ಕೊಲ್ಹಾಪುರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಸ್. ತಾಂಬೆ ಅವರು ಜುಲೈ ೧೬, ೨೦೨೪ ರಂದು ರದ್ದು ಮಾಡಿದ್ದರು. ಈ ನಿರ್ಧಾರದ ವಿರುದ್ಧ ರಕ್ಷಣಾ ಪಕ್ಷದ ಪರವಾಗಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅದರ ಮೇಲೆ ಅಕ್ಟೋಬರ್ ೧೪ ರಂದು ನ್ಯಾಯಮೂರ್ತಿ ಶಿವಕುಮಾರ್ ಡಿಗೇ ಅವರು ಡಾ. ತಾವಡೆ ಅವರಿಗೆ ಜಾಮೀನು ನೀಡಿದ್ದಾರೆ.
ನ್ಯಾಯಮೂರ್ತಿ ಶಿವಕುಮಾರ್ ಡಿಗೇ ಅವರು ತೀರ್ಪು ನೀಡುವಾಗ ದಾಖಲಿಸಿದ ಅವಲೋಕನಗಳು :
೧. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ರದ್ದು ಮಾಡಲು ನೀಡಿದ ನಿರ್ಧಾರವು ಕಾನೂನಿನ ದೃಷ್ಟಿಯಿಂದ ಅನುಮತಿಗೆ ಯೋಗ್ಯವಾಗಿಲ್ಲ.
೨. ‘ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯನ್ನು ಘಟನೆ ನಡೆದು ಮೂರೂವರೆ ವರ್ಷಗಳ ನಂತರ ದಾಖಲಿಸಲಾಗಿದೆ. ಆದ್ದರಿಂದ, ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯು ಅರ್ಜಿದಾರರ ಜಾಮೀನು ರದ್ದುಗೊಳಿಸಲು ಆಧಾರವಾಗಲು ಸಾಧ್ಯವಿಲ್ಲ’, ಎಂದು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ ಎಸ್. ಕಿಲೋರ ಅವರು ತೀರ್ಪಿನಲ್ಲಿ ಈ ಹಿಂದೆ ತಿಳಿಸಿದ್ದರು ಮತ್ತು ಈ ಪ್ರಕರಣದ ಇತರ ಶಂಕಿತರಿಗೆ ಇದೇ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿತ್ತು.
೩. ೨೦೧೮ ರಲ್ಲಿ ಡಾ. ವೀರೇಂದ್ರಸಿಂಗ ತಾವಡೆ ಅವರಿಗೆ ಜಾಮೀನು ಮಂಜೂರು ಮಾಡಿದಾಗ, ‘ಎರಡು ಪರಸ್ಪರ ವಿರೋಧಿ ಆರೋಪಪಟ್ಟಿಗಳಿವೆ ಮತ್ತು ಆ ಆಧಾರದ ಮೇಲೆ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ’, ಎಂದು ಆ ಸಮಯದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಮುಖ ಅವಲೋಕನವನ್ನು ದಾಖಲಿಸಿತ್ತು.
೪. ತಮ್ಮದೇ ನ್ಯಾಯಾಲಯವು ನೀಡಿದ ತೀರ್ಪನ್ನು ನ್ಯಾಯಾಲಯವು ಪುನರ್ ಪರಿಶೀಲಿಸಲು ಸಾಧ್ಯವಿಲ್ಲ.
ಈ ಕುರಿತು ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಅವರು, “ನಾವು ನ್ಯಾಯಾಲಯದ ಗಮನಕ್ಕೆ ಪದೇ ಪದೇ ತಂದ ಮುಖ್ಯ ವಿಷಯ ಇದೇ ಆಗಿತ್ತು. ಈ ತೀರ್ಪಿನಿಂದ ನಾವು ಮಾಡಿದ ವಾದಕ್ಕೆ ದೃಢೀಕರಣ ದೊರೆತಿದೆ. ಜಾಮೀನಿನ ಈ ನಿರ್ಧಾರವು ನ್ಯಾಯವಾದಿಗಳ ಸಾಮೂಹಿಕ ಪ್ರಯತ್ನ ಮತ್ತು ಅವರು ಮಾಡಿದ ವಾದಗಳಿಂದ ದೊರೆತಿದೆ, ಇದರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ನಿತಿನ್ ಪ್ರಧಾನ್ ಅವರ ಮುಖ್ಯ ಪಾತ್ರವಿತ್ತು. ಡಾ. ತಾವಡೆ ಅವರೊಂದಿಗೆ ಸರ್ವಶ್ರೀ ಅಮೋಲ ಕಾಳೆ ಮತ್ತು ಶರದ್ ಕಳಸಕರ್ ಅವರ ಜಾಮೀನು ಅರ್ಜಿಯ ಮೇಲೆ ವಾದ ಮಾಡುವಾಗ ಮಾಜಿ ನ್ಯಾಯಮೂರ್ತಿ ಮತ್ತು ನ್ಯಾಯವಾದಿ ಪುಷ್ಪಾ ಗನೇಡಿವಾಲಾ, ಹಾಗೆಯೇ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ (ಸೌ.) ಸಿದ್ಧವಿದ್ಯಾ ಅವರೂ ಪ್ರಮುಖವಾಗಿ ಭಾಗಿಯಾಗಿದ್ದರು. ಮುಂಬಯಿ ಉಚ್ಚ ನ್ಯಾಯಾಲಯದ ಕೊಲ್ಹಾಪುರ ‘ಸರ್ಕ್ಯೂಟ್ ಬೆಂಚ್’ ನಮಗೆ ನ್ಯಾಯ ನೀಡಿದ್ದರೂ, ಡಾ. ವೀರೇಂದ್ರಸಿಂಗ್ ತಾವಡೆ ಅವರು ೧ ವರ್ಷ ೩ ತಿಂಗಳು ಕಾರಾಗೃಹದಲ್ಲಿ ಇರಬೇಕಾಯಿತು, ಇದರ ಭರ್ತಿಯನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ,” ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”