
ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚಿನ ಆರೋಪಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿರುವ ನಕ್ಸಲ್ ಬೆಂಬಲಿಗ ವರವರ ರಾವ್ ನ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವು ‘ವಿವೇಕ್ ವಿಚಾರ ಮಂಚ್’ ಎಂಬ ರಾಷ್ಟ್ರಪ್ರೇಮಿ ಸಂಘಟನೆಯ ಕಾರ್ಯಕರ್ತರ ವಿರೋಧದಿಂದಾಗಿ ರದ್ದುಗೊಂಡಿದೆ.
ಅಕ್ಟೋಬರ್ ೧೬ ರಂದು ‘ಸಿವಿಲೈಜೇಷನ್ ಸೆಮಿನಾರ್’ ಅಡಿಯಲ್ಲಿ ‘ಆ್ಯನ್ ಎಲೆಕ್ಟ್ರಿಕ್ ವೈರ್ ಈಸ್ ಬೆಟರ್ ದ್ಯಾನ್ ಅ ಪೊಯೆಟ್: ದಿ ಪೊಯೆಟ್ರಿ ಆಫ್ ವರವರ ರಾವ್’ ಎಂಬ ಕಾರ್ಯಕ್ರಮವನ್ನು ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವರವರ ರಾವ್ ನನ್ನು ಸನ್ಮಾನಿಸುವ ಯೋಜನೆಯಿತ್ತು. ಕೋರೆಗಾಂವ್ ಭೀಮಾ ಘಟನೆಯ ಎಲ್ಗಾರ್ ಪರಿಷತ್ತಿನಲ್ಲಿ ಪ್ರಸ್ಥಾಪಿತ ಆಡಳಿತ ವ್ಯವಸ್ಥೆಯ ವಿರುದ್ಧ ನಾಗರಿಕರನ್ನು ಪ್ರಚೋದಿಸಿದ ಆರೋಪದ ಮೇಲೆ ವರವರ ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ ತಾತ್ಕಾಲಿಕ ಜಾಮೀನು ದೊರೆತಿದೆ.
ನಕ್ಸಲಿಸಂನ ಬೆಂಬಲಿಗರಾಗಿರುವ ಮತ್ತು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ‘ವಿವೇಕ್ ವಿಚಾರ ಮಂಚ್’ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಮಂಚ್‌ನಿಂದ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯಲ್ಲಿ ಆಯೋಜಕರ ಕುರಿತು ತನಿಖೆ ನಡೆಸುವಂತೆ ಸಹ ಬೇಡಿಕೆ ಇಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಕಾರ್ಯಕ್ರಮವನ್ನು ರದ್ದುಗೊಳಿಸಿತು. ‘ವಿವೇಕ್ ವಿಚಾರ ಮಂಚ್’ ನ ರಾಜ್ಯ ಸಂಚಾಲಕ ಸಾಗರ ಶಿಂದೆ, ಮುಂಬಯಿ ಮಹಾನಗರ ಸಂಚಾಲಕ ಜಯವಂತ ತಾಂಬೆ ಮತ್ತು ನ್ಯಾಯವಾದಿ ಸಂದೀಪ ಜಾಧವ್ ಅವರು ಈ ಕಾರ್ಯಕ್ರಮವನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein