ಸಾರ್ವಜನಿಕ ರಸ್ತೆಗಳು ಮತ್ತು ಸರಕಾರಿ ಆಸ್ತಿಯಲ್ಲಿ ಅನುಮತಿಯಿಲ್ಲದೆ ನಮಾಜ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ! : Basanagowda Patil Yatnal

ಭಾಜಪದ ಅಮಾನತುಗೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಆಗ್ರಹ

ಬೆಂಗಳೂರು – ಸರಕಾರವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದ ಪ್ರಕಾರ, ಖಾಸಗಿ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಸರಕಾರಿ ಆಸ್ತಿ, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಖಾಸಗಿ ಅಥವಾ ಸಾಂಸ್ಥಿಕ ಕಾರ್ಯಗಳಿಗಾಗಿ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ, ಸಮಾಜದ ಎಲ್ಲಾ ವರ್ಗಗಳಿಗೂ ಸಮಾನವಾಗಿ ತಟಸ್ಥತೆ ಮತ್ತು ನಿಷ್ಪಕ್ಷಪಾತವನ್ನು ಅನ್ವಯಿಸುವುದು ಅವಶ್ಯಕವಾಗಿದೆ. ಸರಿಯಾದ ಅಧಿಕೃತ ಅಧಿಕಾರಿಗಳ ಅನುಮತಿಯನ್ನು ಪಡೆಯದೆ ಜನರು ಸಾರ್ವಜನಿಕ ರಸ್ತೆಗಳು ಮತ್ತು ಸರಕಾರಿ ಆವರಣಗಳಲ್ಲಿ ನಮಾಜ್ ಮಾಡುತ್ತಿರುವುದು ಕಂಡುಬಂದಿದೆ. ಸರಕಾರವು ಅನುಮತಿಯಿಲ್ಲದೆ ನಮಾಜ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಬೇಕು ಎಂದು ಭಾಜಪದ ಅಮಾನತುಗೊಂಡ ಶಾಸಕ ಬಸವರಾಜ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಅವರು ಆ ಪತ್ರವನ್ನು ‘ಎಕ್ಸ್’ (X) ನಲ್ಲಿ ಪ್ರಸಾರ ಮಾಡಿದ್ದಾರೆ.

ಈ ಪತ್ರದಲ್ಲಿ,

. ಸಾರ್ವಜನಿಕ ರಸ್ತೆಗಳು ಮತ್ತು ಸರಕಾರಿ ಆವರಣಗಳಲ್ಲಿ ನಮಾಜ್ ದಂತಹ ಕೃತ್ಯಗಳಿಂದಾಗಿ ವಾಹನಗಳು ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ, ಜನರಿಗೆ ಅನಾನುಕೂಲತೆ ಎದುರಾಗುತ್ತದೆ ಮತ್ತು ಪಾದಚಾರಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ.

. ಇದರಿಂದ ಭಾರತೀಯ ಸಂವಿಧಾನದ ವಿಧಿ ೧೯ ಮತ್ತು ೨೧ರ ಅಡಿಯಲ್ಲಿ ನಾಗರಿಕರಿಗೆ ದೊರೆತಿರುವ ಮುಕ್ತ ಸಂಚಾರ ಮತ್ತು ಸುರಕ್ಷತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸರಕಾರಿ ಕಚೇರಿಗಳು ಅಥವಾ ಯಾವುದೇ ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ ಮಾಡಲು ಯಾವುದೇ ವಿಶೇಷ ಅವಕಾಶ ಇರಬಾರದು.

. ಸಾರ್ವಜನಿಕ ಆಸ್ತಿಯ ಮೇಲೆ ಇತರ ಸಾಂಸ್ಥಿಕ ಕಾರ್ಯಗಳಿಗೆ ನಿರ್ಬಂಧವಿದ್ದಾಗ, ಅಂತಹ ಪದ್ಧತಿಗಳಿಗೆ ಅನುಮತಿ ನೀಡುವುದು ಎಂದರೆ ಆಯ್ದ ಕ್ರಮವನ್ನು ಕೈಗೊಳ್ಳುವುದು ಮತ್ತು ಇದರಿಂದ ಸರಕಾರದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ.

. ರಸ್ತೆಗಳು, ಕಾಲುದಾರಿಗಳು ಅಥವಾ ಸರಕಾರಿ ಆವರಣಗಳಲ್ಲಿ ಪೂರ್ವ ಅಧಿಕೃತ ಅನುಮತಿಯಿಲ್ಲದೆ ನಮಾಜ್ ಮಾಡದಂತೆ ಇಡೀ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ನನ್ನ ವಿನಮ್ರ ವಿನಂತಿ.

ಸಂಪಾದಕೀಯ ನಿಲುವು

ಮೂಲತಃ ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗಿದೆ? ಅನುಮತಿಯಿಲ್ಲದೆ ಯಾರೂ ಎಲ್ಲಿಯೂ ನಮಾಜ್ ಮಾಡಬಾರದು ಎಂಬುದು ಸ್ಪಷ್ಟವಿದೆ. ರಸ್ತೆಯ ಮೇಲೆ ನಮಾಜ್ ಮಾಡಲು ಯಾವುದೇ ಕಾರಣಕ್ಕೂ ಅನುಮತಿ ಸಿಗುವುದಿಲ್ಲ; ಏಕೆಂದರೆ ಅದು ಸಂಚಾರಕ್ಕಾಗಿ ಮೀಸಲಾಗಿರುತ್ತದೆ. ಆದರೂ ಯಾರಾದರೂ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಆಡಳಿತವು ಸ್ವತಃ ಕ್ರಮ ಕೈಗೊಳ್ಳಬೇಕು!