ಛತ್ತೀಸ್‌ಗಢದಲ್ಲಿ ಕ್ರೈಸ್ತ ಮಿಷನರಿಗಳಿಂದ ಹಿಂದೂಗಳನ್ನು ಮತಾಂತರ ಮಾಡುವ ವಿಧಾನದಲ್ಲಿ ಬದಲಾವಣೆ!

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದ ಅನೇಕ ನಗರಗಳು ಮತ್ತು ಗ್ರಾಮಗಳಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರದ ವಿಧಾನವನ್ನು ಬದಲಾಯಿಸಿರುವುದು ಕಂಡುಬಂದಿದೆ. ಈಗ ಕ್ರೈಸ್ತ ಮಹಿಳಾ ಪ್ರಚಾರಕರು ತಮ್ಮ ನಿಜವಾದ ಗುರುತನ್ನು ಮರೆಮಾಚಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ. ಆ ಮಹಿಳಾ ಪ್ರಚಾರಕರು ಮೊದಲು ಅನಾರೋಗ್ಯದಿಂದ ಬಳಲುತ್ತಿರುವ, ಕಷ್ಟದಲ್ಲಿರುವ ಮತ್ತು ಮುಗ್ಧ ಹಿಂದೂ ಮಹಿಳೆಯರೊಂದಿಗೆ ನಿಕಟ ಸಂಪರ್ಕ ಸಾಧಿಸಿ, ಅವರ ವಿಶ್ವಾಸ ಗಳಿಸುತ್ತಾರೆ ಮತ್ತು ನಂತರ ಅವರನ್ನು ಪ್ರಾರ್ಥನಾ ಸಭೆಗೆ ಕರೆದೊಯ್ದು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಪ್ರೇರೇಪಿಸುತ್ತಾರೆ.
1. ಛತ್ತೀಸ್‌ಗಢದ ಕೊರ್ಬಾ ಮತ್ತು ಜಾಂಗೀರ್ ಜಿಲ್ಲೆಗಳಲ್ಲಿ ಪ್ರಾರ್ಥನಾ ಸಭೆಗಳ ಹೆಸರಿನಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಮಹಿಳೆಯರು ಮತ್ತು ಹುಡುಗಿಯರನ್ನು ಕ್ರೈಸ್ತ ಧರ್ಮ ಸ್ವೀಕರಿಸಲು ಪ್ರೇರೇಪಿಸಲಾಗುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮತಾಂತರಗೊಂಡ ಮಹಿಳೆಯರು ಮತ್ತು ಹುಡುಗಿಯರು ಈಗ ‘ನನ್’ ಆಗುತ್ತಿಲ್ಲ, ಬದಲಿಗೆ ತಮ್ಮ ಹಿಂದಿನ ಹೆಸರು ಮತ್ತು ಗುರುತನ್ನು ಹಾಗೆಯೇ ಉಳಿಸಿಕೊಂಡು ಸಮಾಜದಲ್ಲಿ ರಹಸ್ಯವಾಗಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ.
2. ಇದಕ್ಕಾಗಿ ಕ್ರೈಸ್ತ ಮಹಿಳಾ ಪ್ರಚಾರಕರು ಬಡ ಹಿಂದೂ ಮಹಿಳೆಯರೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಾರೆ. ಅವರ ಸಮಸ್ಯೆಗಳು ‘ಪ್ರಾರ್ಥನೆ’ಯ ಮೂಲಕ ಪರಿಹಾರವಾಗಬಹುದು ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಆಮಿಷಗಳನ್ನು ಒಡ್ಡುತ್ತಾರೆ. ನಂತರ ಆ ಮಹಿಳೆಯರನ್ನು ಚರ್ಚ್‌ಗೆ ಕರೆದೊಯ್ದು ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ‘ಪ್ರಭುವಿನ (ಯೇಸುವಿನ) ಆಶೀರ್ವಾದದಿಂದ ಅವರ ರೋಗಗಳು ಮತ್ತು ತೊಂದರೆಗಳು ಮಾಯವಾಗುತ್ತವೆ’ ಎಂದು ಅವರಿಗೆ ಭರವಸೆ ನೀಡಲಾಗುತ್ತದೆ.
3. ರೋಗ ಮತ್ತು ಕಷ್ಟಗಳು ದೂರವಾಗುತ್ತವೆ ಎಂಬ ಆಶಯದಿಂದ ಆ ಸಂತ್ರಸ್ತ ಮಹಿಳೆಯರು ನಿಯಮಿತವಾಗಿ ಚರ್ಚ್‌ಗೆ ಹೋಗಲು ಪ್ರಾರಂಭಿಸುತ್ತಾರೆ. ಅಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಆಧುನಿಕ ವಿಧಾನದಲ್ಲಿ ಮಾಡಿದರೂ, ಅದರ ಶ್ರೇಯಸ್ಸನ್ನು ‘ಪ್ರಭುವಿನ ಕೃಪೆ’ಗೆ ನೀಡಲಾಗುತ್ತದೆ. ಇವರಲ್ಲಿ ಸುಮಾರು 90 ಪ್ರತಿಶತ ಹಿಂದೂ ಮಹಿಳೆಯರು ಮತಾಂತರಗೊಳ್ಳುತ್ತಾರೆ ಮತ್ತು 10 ಪ್ರತಿಶತ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗದ ಕಾರಣ ಅವರು ಮತಾಂತರಗೊಳ್ಳುವುದಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ.
4. 3 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಸಹ ಶಿಕ್ಷಣದ ಹೆಸರಿನಲ್ಲಿ ಚರ್ಚ್‌ನ ವಸತಿಗೃಹಗಳಲ್ಲಿ ಇಡಲಾಗುತ್ತದೆ. ಅಲ್ಲಿ ಅವರಿಗೆ ಶಿಕ್ಷಣದ ಜೊತೆಗೆ ಕ್ರೈಸ್ತ ಧರ್ಮದ ತರಬೇತಿ ನೀಡಲಾಗುತ್ತದೆ.
5. ರಾಜ್ಯದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿಜಯ ಶರ್ಮಾ ಅವರು ಈ ಮತಾಂತರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಅವರು, ‘ಪ್ರಾರ್ಥನಾ ಸಭೆ’ಗಳ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ. ಈ ಸಭೆಗಳನ್ನು ನಿಯಂತ್ರಿಸಲು ಹೊಸ ಕಾನೂನಿನಲ್ಲಿ ಪ್ರತ್ಯೇಕ ನಿಬಂಧನೆ (ತರತೂಜು) ಮಾಡಲಾಗುವುದು. (ಮತಾಂತರ ವಿರೋಧಿ ಕಾನೂನಿನಲ್ಲಿ ಕೇವಲ ನಿಬಂಧನೆ ಮಾಡುವ ಬದಲು, ಆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪರಿಣಾಮಕಾರಿ ವ್ಯವಸ್ಥೆ ಇರಬೇಕು! – ಸಂಪಾದಕರು)
ಪಾದ್ರಿಯ ದಾವೆ!
‘ಪ್ರಾರ್ಥನೆ’ಯ ಮೂಲಕ ಸತ್ತವರನ್ನು ಸಹ ಜೀವಂತಗೊಳಿಸಬಹುದು!
ಕೊರ್ಬಾ ಜಿಲ್ಲೆಯ ಕೊಠಾರಿ ಗ್ರಾಮದ ಪಾಸ್ಟರ್ ಬಾಬುಲಾಲ್ ಮಿರಿ ಅವರು, ಪ್ರಾರ್ಥನೆಯ ಮೂಲಕ ಸತ್ತ ವ್ಯಕ್ತಿಯನ್ನು ಸಹ ಜೀವಂತಗೊಳಿಸಬಹುದು ಎಂದು ಹೇಳಿಕೊಂಡಿದ್ದಾರೆ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”