ನಾಯಕನ ಮನಸ್ಸಿನ ವಿವಾಹಕ್ಕೆ ಸಂಬಂಧಿಸಿದ ವಿಚಾರಗಳನ್ನು ‘ಮನಾಚೆ ಶ್ಲೋಕ್’ ಎಂದು ತೋರಿಸಲಾಗಿದೆ!

  • ಚಲನ ಚಿತ್ರಕ್ಕೆ ‘ಮನಾಚೆ ಶ್ಲೋಕ್’ ಎಂದು ಹೆಸರಿಟ್ಟಿದ್ದಕ್ಕೆ ಹಿಂದೂಗಳಿಂದ ಆಕ್ಷೇಪ, ಹೆಸರು ಬದಲಾಯಿಸುವಂತೆ ಬೇಡಿಕೆ

  • ಚಲನ ಚಿತ್ರದ ಮೂಲಕ ಅನೈತಿಕ ಸಂಬಂಧಗಳಿಗೆ ಪ್ರೋತ್ಸಾಹ!

‘ಮನಾಚೆ ಶ್ಲೋಕ್’ (ಮನಸ್ಸಿನ ಶ್ಲೋಕಗಳು) ಚಲನಚಿತ್ರದ ಭಿತ್ತಿಪತ್ರ

ಮುಂಬಯಿ, ಅಕ್ಟೋಬರ್ ೫ (ವಾರ್ತೆ) – ‘ಮನಾಚೆ ಶ್ಲೋಕ್’ ಎಂಬ ಮರಾಠಿ ಚಲನಚಿತ್ರದ ಟ್ರೇಲರ್ (ಚಿತ್ರದ ಸಂಕ್ಷಿಪ್ತ ಭಾಗಗಳನ್ನು ತೋರಿಸುವ ಜಾಹೀರಾತು) ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದು ಅಕ್ಟೋಬರ್ ೧೦ ರಂದು ಪ್ರದರ್ಶನಗೊಳ್ಳಲಿದೆ. ‘ಟ್ರೇಲರ್’ನಿಂದ ಈ ಚಲನಚಿತ್ರವು ವಿವಾಹ ಸಂಬಂಧಗಳನ್ನು ಜೋಡಿಸುವ ಒಂದು ಕೌಟುಂಬಿಕ ಕಥೆಯ ಮೇಲೆ ಆಧಾರಿತವಾಗಿದೆ ಎಂದು ಕಂಡುಬರುತ್ತದೆ. ಈ ಚಲನ ಚಿತ್ರದ ನಾಯಕನ ಹೆಸರು ಶ್ಲೋಕ್ ಆಗಿದ್ದು, ಅವನ ಮನಸ್ಸಿನ ವಿವಾಹದ ಕುರಿತ ವಿಚಾರಗಳ ಪ್ರತಿಬಿಂಬವಾಗಿ ಚಲನ ಚಿತ್ರಕ್ಕೆ ‘ಮನಾಚೆ ಶ್ಲೋಕ್’ ಎಂದು ಹೆಸರಿಡಲಾಗಿದೆ. ಇದರಿಂದ ಸಮಸ್ತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ.

ಈ ಚಲನ ಚಿತ್ರದ ನಿರ್ಮಾಪಕರು ಶ್ರೇಯಸ್ ಜಾಧವ್ ಮತ್ತು ಸಂಜಯ ದಾವರಾ ಆಗಿದ್ದು, ಚಲನ ಚಿತ್ರಕಥೆ ಬರೆದು ನಿರ್ದೇಶನವನ್ನು ನಟಿ ಮೃಣ್ಮಯಿ ದೇಶಪಾಂಡೆ ಮಾಡಿದ್ದಾರೆ. ಚಲನ ಚಿತ್ರದ ಜಾಹೀರಾತಿನಲ್ಲಿ ನಟಿ ‘ನನ್ನ ವಿವಾಹಕ್ಕೆ ವಿರೋಧವಿದೆ, ಪ್ರೀತಿಯಲ್ಲಿ ಬೀಳುವುದಕ್ಕಲ್ಲ’ ಎಂದು ಹೇಳುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ನಾಯಕನಿಗೆ ‘ನೀನು ನನ್ನ ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದೀಯಾ’ ಎನ್ನುತ್ತಾನೆ. ಈ ಎರಡೂ ಸಂಭಾಷಣೆಗಳು ಅನೈತಿಕ ಸಂಬಂಧಗಳಿಗೆ ಪ್ರೋತ್ಸಾಹ ನೀಡುವಂತಿವೆ. ಇದು ಒಂದು ರೀತಿಯಲ್ಲಿ ಹಿಂದೂ ಸಂಸ್ಕೃತಿ ಮತ್ತು ನೈತಿಕತೆಯ ಎಲ್ಲೆಗಳನ್ನು ಮೀರಿದ್ದಾಗಿದೆ. ಇಂತಹ ಚಲನ ಚಿತ್ರಕ್ಕೆ ಚೈತನ್ಯದಾಯಕ ಸಂತ ಸಾಹಿತ್ಯದ ಉಲ್ಲೇಖ ನೀಡಿರುವುದಕ್ಕೆ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದೂಗಳ ಶ್ರದ್ಧಾ ಕೇಂದ್ರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸ್ ಸ್ವಾಮಿ ಅವರಿಗೆ ಪ್ರಭು ಶ್ರೀರಾಮನ ಪ್ರೇರಣೆಯಿಂದ ‘ಮನಾಚೆ ಶ್ಲೋಕ್’ ಹೊಳೆದವು. ಅದರ ರಚನೆಯು ಸರಳ ಮತ್ತು ಸುಲಭವಾಗಿದೆ. ವ್ಯಕ್ತಿಯು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ‘ಮನಾಚೆ ಶ್ಲೋಕ’ದಲ್ಲಿ ಹೇಳಲಾಗಿದೆ. ಆದರೆ, ಈ ಚಲನ ಚಿತ್ರದಲ್ಲಿ ಇಂತಹ ‘ಮನಾಚೆ ಶ್ಲೋಕ’ಗಳ ಅಪಹಾಸ್ಯ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಇಂದಿಗೂ ಮನೆಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಮನಾಚೆ ಶ್ಲೋಕಗಳನ್ನು ಕಲಿಸಲಾಗುತ್ತದೆ. ಈ ಚಲನ ಚಿತ್ರದಿಂದ ಸಂತ ಸಾಹಿತ್ಯದ ವಿಡಂಬನೆಯಾಗಿ ಅದರ ಅವಮಾನವಾಗುತ್ತಿದೆ. ಆದ್ದರಿಂದ, ಆಕ್ರೋಶಿತ ಹಿಂದೂಗಳು ಇದನ್ನು ವಿರೋಧಿಸಿ, ಚಲನ ಚಿತ್ರದ ಹೆಸರು ಬದಲಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ –

೧. ಪ್ರಚಾರಕ್ಕಾಗಿ ಏನೇ ಬೇಕಾದರೂ ಮಾಡುವ ನಿರ್ದೇಶಕರು, ನಿರ್ಮಾಪಕರು, ನಟರು ‘ಮನಾಚೆ ಶ್ಲೋಕ್’ ಎಂಬ ಹೆಸರನ್ನು ಬಳಸುವ ಮೊದಲು ಸಾಧು-ಸಂತರ ಕಾರ್ಯದ ಮಾಹಿತಿ ಮತ್ತು ಜನರ ಶ್ರದ್ಧೆಯನ್ನು ಪರಿಗಣಿಸುವುದು ಅಪೇಕ್ಷಿತವಾಗಿತ್ತು.

೨. ಮೂರ್ಖತನದ ಪರಮಾವಧಿ. ಇಂತಹ ಚಿತ್ರಗಳನ್ನು ಮರಾಠಿ ಪ್ರೇಕ್ಷಕರ ಮುಂದೆ ತರಲು ನಾಚಿಕೆಯಾಗಬೇಕು.

೩. ಮನಸ್ಸನ್ನು ಸ್ಥಿರಗೊಳಿಸಲು ಮನಾಚೆ ಶ್ಲೋಕಗಳಿವೆ. ಆ ಹೆಸರನ್ನು ಬಳಸಿಕೊಂಡು ಅದಕ್ಕೆ ವಿರುದ್ಧವಾದ ವಿಷಯಗಳನ್ನು ತೋರಿಸುವ ಚಲನ ಚಿತ್ರಕ್ಕೆ ವಿರೋಧವಿದೆ.

೪. ಈ ಅಸಂಬದ್ಧ ಹೆಸರನ್ನು ಚಲನ ಚಿತ್ರಕ್ಕೆ ನೀಡುವುದಕ್ಕೆ ವಿರೋಧವಿದೆ. ಎಲ್ಲರೂ ತೀವ್ರವಾಗಿ ವಿರೋಧಿಸಿ ಹೆಸರು ಬದಲಾಯಿಸಲು ಒತ್ತಾಯಿಸಬೇಕು. ಮನಾಚೆ ಶ್ಲೋಕ್ ಎಂಬುದು ಶ್ರದ್ಧೆಯ ಮತ್ತು ಸಮಸ್ತ ಮರಾಠಿ ಜನರ ಶ್ರದ್ಧಾಪೂರ್ವಕ ಭಾವನೆಯ ವಿಷಯವಾಗಿದೆ.

೫. ಚಲನ ಚಿತ್ರದ ಕಥೆ ಬರೆದವರು ಮತ್ತು ಅದರಲ್ಲಿ ಕೆಲಸ ಮಾಡಿದವರು ಬಾಲ್ಯದಲ್ಲಿ ಮನಾಚೆ ಶ್ಲೋಕಗಳನ್ನು ಓದಿರಬಹುದು ಅಥವಾ ಕೇಳಿರಬಹುದು ಅಲ್ಲವೇ? ಹಾಗಾದರೆ ಇಂತಹ ಬುದ್ಧಿ ಏಕೆ ಬರುತ್ತದೆ?

ಸಂಪಾದಕೀಯ ನಿಲುವು

ಹಿಂದೂಗಳು ಸಹಿಷ್ಣುಗಳಾಗಿರುವುದರಿಂದಲೇ ಯಾರಾದರೂ ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಾರೆ! ಈ ಚಲನ ಚಿತ್ರದ ಲೇಖಕರು, ನಿರ್ದೇಶಕರು ಮತ್ತು ನಿರ್ಮಾಪಕರು ಇತರ ಧರ್ಮೀಯರ ವಿಚಾರದಲ್ಲಿ ಇಂತಹ ಧೈರ್ಯವನ್ನು ಎಂದಿಗೂ ತೋರಿಸುವುದಿಲ್ಲ ಎಂಬುದನ್ನು ಗಮನಿಸಿ!