ದೇಶದಲ್ಲಿ ನಿರುದ್ಯೋಗ ಇರುವಾಗ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ಶತಕೋಟಿ ಡಾಲರ್ ಖರ್ಚು ಮಾಡುವುದಕ್ಕೆ ವಿರೋಧ!
(ಜೆನ್-ಝಿ ಎಂದರೆ ವರ್ಷ1996 ರಿಂದ 2010 ರ ಅವಧಿಯಲ್ಲಿ ಜನಿಸಿದ ಪೀಳಿಗೆ)

ರಬಾತ್ (ಮೊರೊಕ್ಕೊ) – ಉತ್ತರ ಆಫ್ರಿಕಾದ ದೇಶ ಮೊರೊಕ್ಕೊದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಸುಧಾರಣೆಗಳ ಬೇಡಿಕೆಗಳಿಂದಾಗಿ ನಡೆಯುತ್ತಿರುವ ‘ಜೆನ್-ಝಿ’ ಚಳುವಳಿ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ರಾಜಧಾನಿ ರಬಾತ್‌ನಲ್ಲಿ ಪ್ರತಿಭಟನಾಕಾರರು ಒಂದು ಬ್ಯಾಂಕನ್ನು ಸುಟ್ಟರು, ಹಾಗೂ ಮಾರಾಕೇಶ್ ನಗರದ ಒಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಈ ಹಿಂಸಾಚಾರದಲ್ಲಿ 40 ಪೊಲೀಸ್ ವಾಹನಗಳು ಮತ್ತು 20 ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಹಾಗೂ 260 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು 20 ಆಂದೋಲನಕಾರರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರ ಯುವಕರು ‘ಟಿಕ್‌ಟಾಕ್’ ಮತ್ತು ‘ಡಿಸ್ಕಾರ್ಡ್’ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಒಟ್ಟುಗೂಡಿದರು. ಅಗಾದಿರ್ ನಗರದಲ್ಲಿ ಪೊಲೀಸರ ಗುಂಡಿನ ದಾಳಿಯಿಂದ 3 ಯುವಕರು ಮೃತಪಟ್ಟಿದ್ದು, 354 ಜನರು ಗಾಯಗೊಂಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸರಕಾರದ ಪ್ರಕಾರ, ಆಂದೋಲನಕಾರರಲ್ಲಿ ಶೇ. 7೦ರಷ್ಟು ಜನರು ಅಪ್ರಾಪ್ತರಾಗಿದ್ದಾರೆ.
ಪ್ರತಿಭಟನೆಗಳ ಹಿಂದಿನ ಕಾರಣಗಳು!
1. ಮೊರೊಕ್ಕೊದಲ್ಲಿ ನಿರುದ್ಯೋಗದ ಪ್ರಮಾಣ ಶೇ. 12.8 ರಷ್ಟಿದೆ. ಅದರಲ್ಲಿಯೂ ಯುವಕರಲ್ಲಿ ನಿರುದ್ಯೋಗವು ಶೇ. 35.8 ರಷ್ಟಿದೆ. ಶೇ. 19 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.
2. ದೇಶದಲ್ಲಿ ಪ್ರತಿ 1 ಸಾವಿರದ 430 ಜನರಿಗೆ ಒಬ್ಬ ವೈದ್ಯರಿದ್ದಾರೆ. ಈ ಪ್ರಮಾಣವು ಜಾಗತಿಕ ಸರಾಸರಿಗಿಂತ ಎರಡೂವರೆ ಪಟ್ಟು ಕಡಿಮೆ ಇದೆ. ದೇಶದಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಕೊರತೆಯೂ ಇದೆ.
೩. ಆದಾಗ್ಯೂ, ಮೊರೊಕ್ಕೊದ ಸರಕಾರವು 2030 ರಲ್ಲಿ ನಡೆಯಲಿರುವ ‘ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ’ ಹಾಗೂ ‘ಆಫ್ರಿಕಾ ಕಪ್ ಆಫ್ ನೇಶನ್ಸ್’ಗಾಗಿ 1೦ ಶತಕೋಟಿ ಡಾಲರ್‌ಗಳನ್ನು (ಸುಮಾರು 8.8 ಲಕ್ಷ ಕೋಟಿ ರೂಪಾಯಿಗಳು) ಖರ್ಚು ಮಾಡಲಿದೆ. ಇದನ್ನು ಈ ಯುವಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers