|

ರಾಂಚಿ (ಜಾರ್ಖಂಡ್) – ರಾತು ರಸ್ತೆಯಲ್ಲಿರುವ ‘ಆರ್.ಆರ್. ಸ್ಪೋರ್ಟಿಂಗ್ ಕ್ಲಬ್’ 85 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ದುರ್ಗಾ ಪೂಜಾ ಮಂಟಪವನ್ನು ಚರ್ಚ್ ನಂತೆ ನಿರ್ಮಿಸಲಾಗಿದೆ. ಈ ಮಂಟಪದಲ್ಲಿ ಯೇಸುಕ್ರಿಸ್ತರ ಮೂರ್ತಿಗಳು ಮತ್ತು ಶಿಲುಬೆಯ ಚಿಹ್ನೆಗಳನ್ನಿರಿಸಲಾಗಿದೆ. ವಿಶ್ವ ಹಿಂದೂ ಪರಿಷತ್ (ವಿಹಿಂಪ) “ಈ ರೀತಿಯ ಅಲಂಕಾರ ಹಿಂದೂಗಳ ಶ್ರದ್ಧೆಗೆ ಅವಮಾನವಾಗಿದ್ದು, ಕೂಡಲೇ ಇವನ್ನು ಬದಲಾಯಿಸಬೇಕು” ಎಂದು ಆಗ್ರಹಿಸಿದೆ. ವಿಕ್ಕಿ ಯಾದವ್ ಪ್ರಸ್ತುತ ‘ಆರ್.ಆರ್. ಸ್ಪೋರ್ಟಿಂಗ್ ಕ್ಲಬ್’ನ ಮುಖ್ಯಸ್ಥರಾಗಿದ್ದು, ಅವರು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸದಸ್ಯರಾಗಿದ್ದಾರೆ.
Ranchi: Durga Puja pandal made like the Vatican with Jesus & Mary pics sparks row.
VHP: “Insult & conversion ploy.”
Only Hindus dilute their Dharma in the name of ‘secularism.’ Shameful!
🎥 Courtesy: @TheInfactNews pic.twitter.com/hnGktJbll9
— Sanatan Prabhat (@SanatanPrabhat) September 27, 2025
ದೇವಾಲಯದಂತೆ ಮಂಟಪ ಮಾಡಿ! – ವಿಹಿಂಪ
ವಿಹಿಂಪದ ಜಾರ್ಖಂಡ್ ಮತ್ತು ಬಿಹಾರ ರಾಜ್ಯ ಕ್ಷೇತ್ರ ಮಂತ್ರಿ ಡಾ. ಬೀರೇಂದ್ರ ಸಾಹು ಅವರು ಈ ಬಗ್ಗೆ ಮಾತನಾಡಿ, ತಾಯಿ ಭಗವತಿ ಯಾವುದೇ ಚರ್ಚ್‌ನಲ್ಲಲ್ಲ, ದೇವಸ್ಥಾನದಲ್ಲಿ ಮಾತ್ರ ಆಸೀನಳಾಗುತ್ತಾಳೆ. ಚರ್ಚ್‌ನಂತೆ ಮಂಟಪ ನಿರ್ಮಿಸುವ ಮೂಲಕ ಹಿಂದೂಗಳ ಶ್ರದ್ಧೆ ಮತ್ತು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಲಾಗುತ್ತಿದೆ. ಇದು ಜಾರ್ಖಂಡ್‌ನಲ್ಲಿ ಮತಾಂತರವನ್ನು ಉತ್ತೇಜಿಸುವ ಪಿತೂರಿಯಾಗಿದೆ. ದುರ್ಗಾ ಪೂಜೆಯ ಆಯೋಜಕರು ದೇವಿಯ ಪ್ರತಿಷ್ಠಾಪನೆಯ ಮಂಟಪವನ್ನು ದೇವಸ್ಥಾನದಂತೆ ರಚಿಸಬೇಕೆಂದು ಮನವಿ ಮಾಡಿದ್ದಾರೆ.
ಆಯೋಜಕರು ಚರ್ಚ್ ಅಥವಾ ಮದರಸಾದ ಕಾರ್ಯಕ್ರಮಗಳಲ್ಲಿ ಹಿಂದೂ ದೇವರ ಚಿತ್ರ ಹಾಕಲಿ! – ವಿನೋದ್ ಬನ್ಸಲ್, ರಾಷ್ಟ್ರೀಯ ವಕ್ತಾರರು, ವಿಹಿಂಪ
ವಿಹಿಂಪದ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿ, “ಇದೆಲ್ಲವೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಮತಾಂತರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಾಡಲಾಗಿದೆ. ಆಯೋಜನಾ ಸಮಿತಿಗೆ ಜಾತ್ಯತೀತತೆಯ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ, ಅವರು ರಾಂಚಿಯ ಚರ್ಚ್ ಅಥವಾ ಮದರಸಾದ ಕಾರ್ಯಕ್ರಮಗಳಲ್ಲಿ ಯಾವುದಾದರೂ ಹಿಂದೂ ದೇವರ ಚಿತ್ರವನ್ನು ಹಾಕಲಿ. ಮಂಟಪದ ಪ್ರವೇಶ ದ್ವಾರದಲ್ಲಿ ಕ್ರೈಸ್ತ ಸಂಕೇತಗಳನ್ನು ಇರಿಸಲಾಗಿದ್ದು, ಒಳಗೆ ಮದರ್ ಮೇರಿ ಮತ್ತು ಇತರ ಕ್ರೈಸ್ತ ಚಿತ್ರಗಳನ್ನು ಹಾಕಲಾಗಿದೆ. ಶೀಘ್ರದಲ್ಲೇ ವಿಹಿಂಪದ ಜಾರ್ಖಂಡ್ ಶಾಖೆಯು ಈ ವಿಷಯದ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುತ್ತದೆ. ದುರ್ಗಾ ಪೂಜಾ ಆಯೋಜಕರು ಧಾರ್ಮಿಕ ಭಾವನೆಗಳನ್ನು ಗೌರವಿಸಿ ಮಂಟಪದಿಂದ ಕ್ರೈಸ್ತ ಚಿಹ್ನೆಗಳು ಮತ್ತು ಚಿತ್ರಗಳನ್ನು ತೆಗೆದುಹಾಕಬೇಕು” ಎಂದು ಹೇಳಿದರು.
‘ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ!’ – ಆಯೋಜಕರ ಸ್ಪಷ್ಟೀಕರಣಆಯೋಜನಾ ಸಮಿತಿಯು, “ನಾವು ಸಹ ಸನಾತನಿಗಳು. 2022 ರಲ್ಲಿ ಕೋಲಕಾತಾದಲ್ಲಿ ಇದೇ ರೀತಿಯ ಮಂಟಪವನ್ನು ನಿರ್ಮಿಸಲಾಗಿತ್ತು, ಅದೇ ಮಾದರಿಯಲ್ಲಿ ಈ ಮಂಟಪವನ್ನು ನಿರ್ಮಿಸಲಾಗಿದೆ. ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದೆ. ಸಂಪಾದಕೀಯ ನಿಲುವುಇದು ಹಿಂದೂಗಳ ಉತ್ಸವವಾಗಿರುವುದರಿಂದ ಹಿಂದೂಗಳು ಮಾತ್ರ ಜಾತ್ಯತೀತರು ಹಾಗೂ ಎಲ್ಲಾ ಧರ್ಮಗಳನ್ನು ಗೌರವಿಸುವುದರಿಂದ ಹಿಂದೂಗಳು ಇಂತಹ ರಚನೆಯನ್ನು ಮಾಡಲು ಧೈರ್ಯ ಮಾಡುತ್ತಾರೆ. ಆದರೆ ಇತರ ಧರ್ಮೀಯರು ಹಿಂದೂಗಳ ಧಾರ್ಮಿಕ ಸ್ಥಳಗಳು ಮತ್ತು ಶ್ರದ್ಧಾ ಕೇಂದ್ರಗಳ ಮೇಲೆ ಆಕ್ರಮಣ ಮಾಡುತ್ತಾರೆ ಮತ್ತು ಹಿಂದೂಗಳನ್ನು ಮತಾಂತರಗೊಳಿಸುತ್ತಾರೆ! ಹೀಗಿದ್ದರೂ ಕೂಡ ಹಿಂದೂಗಳು ‘ಜಾತ್ಯತೀತೆ’ಯನ್ನು ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ! |
ಸಂಪಾದಕೀಯ ನಿಲುವುಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶತ್ರುಗಳು! ಬೇರೆ ಪಂಥದವರು ತಮ್ಮ ಧಾರ್ಮಿಕ ಉತ್ಸವಗಳಲ್ಲಿ ಎಂದಾದರೂ ಈ ರೀತಿ ಮಾಡುತ್ತಾರೆಯೇ? ಹಿಂದೂಗಳಿಗೆ ಧರ್ಮಶಿಕ್ಷಣ ಮತ್ತು ಧರ್ಮಾಭಿಮಾನ ಇಲ್ಲದ ಕಾರಣ, ಪದೇ-ಪದೇ ತಮ್ಮ ಶ್ರದ್ಧಾ ಕೇಂದ್ರಗಳಿಗೆ ಅವಮಾನ ಮಾಡುತ್ತಾರೆ. ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !