|
(‘ಜೆನ್-ಜಿ’ ಎಂದರೆ 1996 ರಿಂದ 2010 ರ ಅವಧಿಯಲ್ಲಿ ಜನಿಸಿದ ಪೀಳಿಗೆ)

ಲೇಹ್ (ಲಡಾಖ) – ಇಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಹಿಂಸಾತ್ಮಕ ಆಂದೋಲನದಲ್ಲಿ, ಇತ್ತೀಚೆಗೆ ಪೊಲೀಸರ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2 ನೇಪಾಳಿ ಪ್ರಜೆಗಳನ್ನು ಬಂಧಿಸಲಾಗಿದೆ. ಇದರ ಜೊತೆಗೆ, ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಪರಿಸರವಾದಿ ಮತ್ತು ನಾಯಕ ಸೋನಮ್ ವಾಂಗ್ ಚುಕ್ ಅವರನ್ನು ಸೆಪ್ಟೆಂಬರ್ 26 ರ ಮಧ್ಯಾಹ್ನ ಬಂಧಿಸಲಾಗಿದೆ.
ಅವರು ಲೇಹ್ ನ ಆಂದೋಲನವನ್ನು ನೇಪಾಳದ ‘ಜೆನ್-ಜಿ’ ಚಳವಳಿಗೆ ಹೋಲಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸುಮಾರು 60 ಜನರನ್ನು ಬಂಧಿಸಲಾಗಿದೆ. ಈ ಆಂದೋಲನದಲ್ಲಿ ನೇಪಾಳಿ ಜನರ ಭಾಗವಹಿಸುವಿಕೆ ಕಂಡುಬಂದಿರುವುದರಿಂದ, ಈ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇರುವುದು ಬಹಿರಂಗವಾಗಿದೆ.
ವಾಂಗ್ ಚುಕ್ ಅವರ ಸರಕಾರೇತರ ಸಂಸ್ಥೆಯ (NGO) ವಿದೇಶಿ ನಿಧಿ ಪರವಾನಗಿ ರದ್ದು
1. ಸೆಪ್ಟೆಂಬರ್ 25 ರಂದು, ಅವರ ಸರಕಾರೇತರ ಸಂಸ್ಥೆಯ (NGO) ‘ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ’ ಅಂದರೆ ‘ಫಾರಿನ್ ಕಾಂಟ್ರಿಬ್ಯೂಷನ್ (ರೆಗ್ಯುಲೇಶನ್) ಆಕ್ಟ್’ (FCRA) ಅಡಿಯಲ್ಲಿ ವಿದೇಶಿ ನಿಧಿ ಪಡೆಯುವ ಪರವಾನಗಿಯನ್ನು ರದ್ದುಪಡಿಸಲಾಗಿದೆ.
2. ಸೆಪ್ಟೆಂಬರ್ 24 ರಂದು, ವಾಂಗ್ ಚುಕ್ ಅವರು ಆಂದೋಲನವನ್ನು ಹಿಂಪಡೆದು, ಲೇಹ್ ನಲ್ಲಿನ ಪ್ರತಿಭಟನೆಗಳು ‘ಜೆನ್-ಜಿ ಕ್ರಾಂತಿ’ ಎಂದಿದ್ದರು ಮತ್ತು ನಿರುದ್ಯೋಗ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದರಿಂದ ಯುವಕರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದ್ದರು.
ಆಂದೋಲನದಲ್ಲಿ ಹಿಂಸಾಚಾರ!
ಆಂದೋಲನದಿಂದ ಉಂಟಾಗಿದ್ದ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 50 ಜನರು ಗಾಯಗೊಂಡಿದ್ದರು. ಆಂದೋಲನಕಾರರು ಲೇಹ್ ನಲ್ಲಿರುವ ಭಾಜಪ ಕಚೇರಿಗೂ ಬೆಂಕಿ ಹಚ್ಚಿದ್ದರು. ‘ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು’ ಎಂಬ ಬೇಡಿಕೆಗಾಗಿ ಕಳೆದ 35 ದಿನಗಳಿಂದ ಉಪವಾಸ ಮಾಡುತ್ತಿದ್ದ ವಾಂಗ್‌ಚುಕ್ ಅವರು ಸೆಪ್ಟೆಂಬರ್ 24 ರಂದು ತಮ್ಮ ಉಪವಾಸವನ್ನು ಹಿಂಪಡೆದಿದ್ದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !