ಚೀನಾ ಜಗತ್ತಿನಾದ್ಯಂತ ಇರುವ ಯುವಕರಿಗಾಗಿ ‘ಕೆ ವೀಸಾ’ ಪ್ರಾರಂಭಿಸಲಿದೆ!

ಬೀಜಿಂಗ್ (ಚೀನಾ) – ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ‘ಎಚ್ 1-ಬಿ’ ವೀಸಾಕ್ಕಾಗಿ $1 ಲಕ್ಷ (ಸುಮಾರು ₹88 ಲಕ್ಷ) ಶುಲ್ಕವನ್ನು ಹೆಚ್ಚಿಸಿದ ನಂತರ ಭಾರತ ಸೇರಿದಂತೆ ಹಲವು ದೇಶಗಳ ಯುವಕರಿಗೆ ತೊಂದರೆಯಾಗಿದೆ. ಅದರಲ್ಲೂ ಭಾರತೀಯರಿಗೆ ಇದು ಹೆಚ್ಚಿನ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ, ಚೀನಾವು ಜಗತ್ತಿನಾದ್ಯಂತ ಇರುವ ಯುವಕರನ್ನು, ವಿಶೇಷವಾಗಿ ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿನ ಯುವಕರನ್ನು ಆಕರ್ಷಿಸಲು ‘ಕೆ ವೀಸಾ’ ವಿಭಾಗವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ನಿರ್ಧಾರವು ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ.
🚨 China hits back at US H-1B fee hike 🚨
🇨🇳 After US hiked visa fees to $100K, China unveils ‘K-Visa’ — launching 1 Oct 2025
🎓 For grads from top Chinese & global institutions
📜 No invitation needed
⏳ Long-term stay + academic, tech, cultural accessUS closes doors. China… pic.twitter.com/zm3T7Y1aCm
— Sanatan Prabhat (@SanatanPrabhat) September 22, 2025
ಯಾರು ಅರ್ಜಿ ಸಲ್ಲಿಸಬಹುದು?
ಚೀನಾ ಅಥವಾ ವಿದೇಶಗಳಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಸಂಸ್ಥೆಗಳಿಂದ ಉನ್ನತ ಪದವಿ ಪಡೆದವರು ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಚೀನಾದ ಅಧಿಕಾರಿಗಳು ನಿಗದಿಪಡಿಸಿರುವ ಅರ್ಹತೆಗಳು ಮತ್ತು ಅಗತ್ಯತೆಗಳನ್ನು ಪೂರೈಸಬೇಕು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಬೇಕು.
‘ಕೆ ವೀಸಾ’ದ ಪ್ರಮುಖ ವೈಶಿಷ್ಟ್ಯಗಳು!
1. ಕೆ ವೀಸಾದ ಪ್ರವೇಶ ಸಿಂಧುತ್ವ ದೀರ್ಘಾವಧಿಯದ್ದಾಗಿರುತ್ತದೆ ಮತ್ತು ಚೀನಾದಲ್ಲಿ ವಾಸಿಸುವ ಅವಧಿಯನ್ನು ವಿಸ್ತರಿಸುವುದು ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಿರುತ್ತವೆ.
2. ಇತರ ಹಲವು ಕೆಲಸದ ವೀಸಾಗಳಂತೆ, ಈ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಸಂಬಂಧಿತ ಸಂಸ್ಥೆಯಿಂದ ‘ಆಮಂತ್ರಣ ಪತ್ರ’ ಪಡೆಯುವ ಅಗತ್ಯವಿಲ್ಲ.
3. ಚೀನಾಕ್ಕೆ ಪ್ರವೇಶಿಸಿದ ನಂತರ, ‘ಕೆ ವೀಸಾ’ ಹೊಂದಿರುವವರಿಗೆ ಉದ್ಯಮಿಗಳು ಮತ್ತು ವೃತ್ತಿಪರರು ಚೀನಾದ ಶಿಕ್ಷಣ, ಸಂಸ್ಕೃತಿ ಮತ್ತು ತಂತ್ರಜ್ಞಾನದಲ್ಲಿ ಶೈಕ್ಷಣಿಕ ವಿನಿಮಯಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುತ್ತದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !