
ಧಾರಾಶಿವ್, ಸೆಪ್ಟೆಂಬರ್ 10 (ವಾರ್ತೆ) – ಮರಾಠಾ ಮೀಸಲಾತಿಗಾಗಿ ಮನೋಜ್ ಜಾರಂಗೆ-ಪಾಟೀಲ್ ಅವರ ನಾಯಕತ್ವದಲ್ಲಿ ಮುಂಬಯಿನ ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯ ನಂತರ, ಮಹಾರಾಷ್ಟ್ರ ಸರಕಾರವು ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳಲ್ಲಿ ‘ಕುಣಬಿ’ ಎಂದು ಜಾತಿ ಉಲ್ಲೇಖ ಇರುವ ಮರಾಠಾ ಸಮುದಾಯದ ಜನರಿಗೆ ಮೀಸಲಾತಿಯ ಲಾಭ ನೀಡುವುದಾಗಿ ಘೋಷಿಸಿದೆ.

ಇದರ ಪರಿಣಾಮವಾಗಿ, ಮರಾಠವಾಡದ ಛತ್ರಪತಿ ಸಂಭಾಜಿನಗರ, ಧಾರಾಶಿವ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಪರ್ಭಾನಿ ಮತ್ತು ಬೀಡ್ ಜಿಲ್ಲೆಗಳಲ್ಲಿನ ಮರಾಠಾ ಸಮುದಾಯದ ಜನರು, ತಮ್ಮ ಹಳೆಯ ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳನ್ನು ಮೋಡಿ ಲಿಪಿ ಬಲ್ಲವರಿಂದ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಹಳೆಯ ದಾಖಲೆಗಳು ಮೋಡಿ ಲಿಪಿಯಲ್ಲಿರುವುದರಿಂದ, ಮರಾಠವಾಡದಲ್ಲಿ ಮೋಡಿ ಲಿಪಿ ಬಲ್ಲವರ ಮನೆಗಳ ಮುಂದೆ ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಜನಸಮೂಹ ಹೆಚ್ಚಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ