
ತೇಲ್ ಅವಿವ್ (ಇಸ್ರೇಲ್) – ಇಸ್ರೇಲ್‌ನ ರಕ್ಷಣಾ ಸಚಿವರಾದ ಇಸ್ರೇಲ್ ಕಟ್ಜ್ ಅವರು ಸೆಪ್ಟೆಂಬರ್ 8 ರಂದು ಹಮಾಸ್‌ಗೆ “ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಇಲ್ಲದಿದ್ದರೆ ಗಾಜಾ ಮತ್ತು ನಿಮ್ಮ ನಾಶಕ್ಕೆ ಸಿದ್ಧರಾಗಿ” ಎಂದು ಎಚ್ಚರಿಕೆ ನೀಡಿದರು. ಕಟ್ಜ್ ಅವರು ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿ, ಗಾಜಾ ನಗರದ ಆಕಾಶದಲ್ಲಿ ಒಂದು ಶಕ್ತಿಶಾಲಿ ಬಿರುಗಾಳಿ ಅಪ್ಪಳಿಸಲಿದೆ. “ಇದು ಗಾಜಾ ಮತ್ತು ವಿದೇಶಗಳ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸಿಸುತ್ತಿರುವ ಹಮಾಸ್ ಭಯೋತ್ಪಾದಕರಿಗೆ ಅಂತಿಮ ಎಚ್ಚರಿಕೆ ಆಗಿದೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಮತ್ತು ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ” ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್ 8ರ ಬೆಳಗಿನಿಂದ ಇಸ್ರೇಲಿ ಸೇನೆಯು ನಡೆಸಿದ ದಾಳಿಯಲ್ಲಿ 50 ಜನರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಗಾಜಾ ನಗರದ ಅನೇಕ ಎತ್ತರದ ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
ನಿರ್ಣಾಯಕವಾಗಿ ಸೋಲಿಸಲು ಸಿದ್ಧತೆ!
ಕಟ್ಜ್ ಅವರು, “ಇಸ್ರೇಲ್ ಡಿಫೆನ್ಸ್ ಫೋರ್ಸಸ್” ತಮ್ಮ ಯೋಜಿತ ಕೆಲಸವನ್ನು ಮಾಡುತ್ತಿದೆ. ಗಾಜಾವನ್ನು ನಿರ್ಣಾಯಕವಾಗಿ ಸೋಲಿಸಲು ಯುದ್ಧವನ್ನು ವಿಸ್ತರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಡೊನಾಲ್ಡ್ ಟ್ರಂಪ್ ಅವರು ಹಮಾಸ್‌ಗೆ “ಕೊನೆಯ ಎಚ್ಚರಿಕೆ” ಎಂದು ನೀಡಿದ ಹೇಳಿಕೆಯ ನಂತರ ಕಟ್ಜ್ ಅವರ ಈ ಹೇಳಿಕೆ ಬಂದಿದೆ.
ಅಮೆರಿಕದ ಹೊಸ ಪ್ರಸ್ತಾವ!
ಟ್ರಂಪ್ ಅವರು, “ಇಸ್ರೇಲಿಗಳು ನನ್ನ ಷರತ್ತುಗಳನ್ನು ಒಪ್ಪಿಕೊಂಡಿದ್ದಾರೆ. ಹಮಾಸ್ ಕೂಡ ಒಪ್ಪಿಕೊಳ್ಳುವ ಸಮಯ ಬಂದಿದೆ. ಒಪ್ಪಿಕೊಳ್ಳದಿದ್ದರೆ ಆಗುವ ಪರಿಣಾಮಗಳ ಬಗ್ಗೆ ನಾನು ಹಮಾಸ್‌ಗೆ ಎಚ್ಚರಿಕೆ ನೀಡಿದ್ದೇನೆ. ಇದು ನನ್ನ ಕೊನೆಯ ಎಚ್ಚರಿಕೆ” ಎಂದು ಹೇಳಿದ್ದರು. ಅಮೆರಿಕದ ಸುದ್ದಿ ಸಂಸ್ಥೆ ‘ಆಕ್ಸಿಯೋಸ್’ ಪ್ರಕಾರ, ಶ್ವೇತಭವನದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಕಳೆದ ವಾರ ಹಮಾಸ್‌ಗೆ ಗಾಜಾದಲ್ಲಿ ಒತ್ತೆಯಾಳು ಮತ್ತು ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೊಸ ಪ್ರಸ್ತಾವವನ್ನು ಕಳುಹಿಸಿದ್ದಾರೆ. ಈ ಪ್ರಸ್ತಾವದ ಪ್ರಕಾರ, ಇಸ್ರೇಲ್‌ನ ಜೈಲುಗಳಲ್ಲಿರುವ 2 ರಿಂದ 3 ಸಾವಿರ ಪ್ಯಾಲೆಸ್ತೀನ್ ಕೈದಿಗಳ ಬದಲಾಗಿ ಗಾಜಾದ ಎಲ್ಲಾ ಇಸ್ರೇಲಿ ಒತ್ತೆಯಾಳುಗಳ ತಕ್ಷಣದ ಬಿಡುಗಡೆ ಮತ್ತು ಗಾಜಾದಲ್ಲಿ ಕದನ ವಿರಾಮ ಏರ್ಪಡಲಿದೆ.
ಮತ್ತೊಂದೆಡೆ, ಹಮಾಸ್ ಬೆಂಬಲಿತ ಸುದ್ದಿ ಮಾಧ್ಯಮ ‘ಅಲ್-ಜಝೀರಾ’ ಪ್ರಕಾರ, ಕದನ ವಿರಾಮಕ್ಕಾಗಿ ಮಾತುಕತೆ ನಡೆಸಲು ಹಮಾಸ್ ನಾಯಕರು ಕೂಡ ಸಿದ್ಧರಿದ್ದಾರೆ. ಆದರೆ, ಹಮಾಸ್ ಯುದ್ಧದ ಅಂತ್ಯದ ಸ್ಪಷ್ಟ ಘೋಷಣೆ, ಗಾಜಾ ಪಟ್ಟಿಯಿಂದ ಸಂಪೂರ್ಣ ನಿರ್ಗಮನ ಮತ್ತು ಗಾಜಾ ಪಟ್ಟಿಯ ನಿರ್ವಹಣೆಗಾಗಿ ಸ್ವತಂತ್ರ ಪ್ಯಾಲೆಸ್ತೀನ್ ಸಮಿತಿಯನ್ನು ಸ್ಥಾಪಿಸುವಂತೆ ಒತ್ತಾಯಿಸಿದೆ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!