ಭಿವಂಡಿಯಲ್ಲಿ ಮುಸ್ಲಿಂ ವ್ಯಕ್ತಿಯಿಂದ ಪತ್ನಿಯ ಬರ್ಬರ ಹತ್ಯೆ: ತಲೆಯನ್ನು ಕಣಿವೆಗೆ ಎಸೆದ – Muslim Man Killed Wife

ಭಿವಂಡಿ (ಠಾಣೆ ಜಿಲ್ಲೆ) – ಆಗಸ್ಟ್ 30ರಂದು ಇಲ್ಲಿನ ಈದ್ಗಾ ಕೊಳಚೆ ಪ್ರದೇಶದ ಸಮೀಪದ ಜೌಗು ಪ್ರದೇಶದಲ್ಲಿ ಮಹಿಳೆಯೊಬ್ಬರ ತಲೆ ಪತ್ತೆಯಾಗಿತ್ತು. ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ಆ ಮಹಿಳೆಯು ಹತ್ಯೆಗೀಡಾಗಿದ್ದು, ಆಕೆಯ ಹೆಸರು ಪರ್ವೀನ್ ಅಲಿಯಾಸ್ ಮುಸ್ಕಾನ್ (ವಯಸ್ಸು 26 ವರ್ಷ) ಎಂದು ತಿಳಿದುಬಂದಿದೆ. ಆಕೆಯನ್ನು ಹತ್ಯೆ ಮಾಡಿದ ಪತಿ ತಹಾ ಇಮ್ತಿಯಾಜ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಭಿವಂಡಿ ನ್ಯಾಯಾಲಯವು ಸೆಪ್ಟೆಂಬರ್ 11ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಅನ್ಸಾರಿ ಪತ್ನಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈಯಕ್ತಿಕ ಅನುಮಾನಗಳಿಂದಾಗಿ ಅವರಿಬ್ಬರ ನಡುವೆ ಜಗಳ ಹಾಗೂ ಹೊಡೆದಾಟ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಆಕೆ ಮನೆಯಿಂದ ಹೊರಗೆ ಹೋಗಿದ್ದಳು. ಮರಳಿ ಬಂದ ಮರುದಿನವೇ ಆತ ಹತ್ಯೆ ಮಾಡಿದ್ದಾನೆ. ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಿ, ಕಣಿವೆಯಲ್ಲಿ ನೀರಿನ ಮಟ್ಟ ಹೆಚ್ಚಿದ್ದ ಕಾರಣ ಅಲ್ಲಿ ಎಸೆದಿದ್ದಾನೆ. ಆಕೆಯ ದೇಹ ಇನ್ನೂ ಪತ್ತೆಯಾಗಿಲ್ಲ.

ಸಂಪಾದಕೀಯ ನಿಲುವು

ಇಂತಹ ಕ್ರೂರ ಮತ್ತು ವಿಕೃತ ಮನಸ್ಥಿತಿಯವರಿಗೆ ಜೀವಾವಧಿ ಶಿಕ್ಷೆ ನೀಡಬೇಕು!