ಸಾರ್ವಜನಿಕ ಆಸ್ಪತ್ರೆಗಳಲ್ಲಿ ದೋಷಪೂರಿತ ಪ್ಯಾರಸಿಟಮೋಲ್ ಮಾತ್ರೆಗಳ ಪೂರೈಕೆ

ಆಹಾರ ಮತ್ತು ಔಷಧ ಆಡಳಿತದಿಂದ ಪರಿಶೀಲನೆ !

ಮುಂಬಯಿ – ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಪ್ಯಾರಸಿಟಮೋಲ್ ಮಾತ್ರೆಗಳನ್ನು ಪೂರೈಕೆ ಮಾಡಲಾಗಿದೆ. ಕರ್ನಾಟಕ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಎಂಬ ಸಂಸ್ಥೆಯು ಈ ದೋಷಪೂರಿತ ಮಾತ್ರೆಗಳನ್ನು ಪೂರೈಸಿದೆ. ಈ ಮಾತ್ರೆಗಳು ಮಹಾರಾಷ್ಟ್ರ ವೈದ್ಯಕೀಯ ಪ್ರಾಧಿಕಾರವು ನಿರ್ದೇಶಿಸಿದ ಮಾನದಂಡಗಳ ಪ್ರಕಾರ ಇಲ್ಲ. ಈ ಕುರಿತು ಮಹಾರಾಷ್ಟ್ರ ಟೈಮ್ಸ್ ವರದಿ ಮಾಡಿದೆ.

೧. ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೆಲವೊಮ್ಮೆ ಔಷಧಗಳ ಕೊರತೆ ಉಂಟಾಗುತ್ತದೆ. ಎರಡು ವರ್ಷಗಳ ಹಿಂದೆ, ಪ್ಯಾರಸಿಟಮೋಲ್ ಮಾತ್ರೆಗಳ ವಿಷಯದಲ್ಲೂ ಇದೇ ಪರಿಸ್ಥಿತಿ ಇತ್ತು.

೨. ಆ ಸಮಯದಲ್ಲಿ ರೋಗಿಗಳಿಗೆ ತೊಂದರೆಯಾಗಬಾರದು ಎಂದು, ಮಹಾರಾಷ್ಟ್ರ ವೈದ್ಯಕೀಯ ಔಷಧ ಪ್ರಾಧಿಕಾರವು ಅಕ್ಟೋಬರ್ ೨೦೨೩ ರಲ್ಲಿ ಟೆಂಡರ್ ಇಲ್ಲದೆ ಈ ಮಾತ್ರೆಗಳನ್ನು ಲಭ್ಯವಾಗುವಂತೆ ಮಾಡಿತ್ತು.

೩. ಮಾರ್ಚ್ ೨೦೨೫ ರಲ್ಲಿ, ಆಹಾರ ಮತ್ತು ಔಷಧ ಆಡಳಿತವು ವೈದ್ಯಕೀಯ ವಿಶ್ಲೇಷಣಾ ಪರೀಕ್ಷೆಗಾಗಿ ಈ ಮಾತ್ರೆಗಳ ಮಾದರಿಗಳನ್ನು ಸಂಗ್ರಹಿಸಿತ್ತು. ಬಣ್ಣ ಮತ್ತು ಔಷಧಗಳಲ್ಲಿರುವ ರಾಸಾಯನಿಕಗಳ ಬಗ್ಗೆ ಕೆಲವು ಪ್ರಶ್ನೆಗಳಿದ್ದವು. ‘R 23002’ ಮತ್ತು ‘R 23007’ ಎಂಬ ಎರಡು ಬ್ಯಾಚ್‌ಗಳ ಮಾತ್ರೆಗಳು ದೋಷಪೂರಿತ ಎಂದು ಕಂಡುಬಂದಿವೆ.

೪. ಈ ಮಾತ್ರೆಗಳ ಬಳಕೆಯನ್ನು ನಿಲ್ಲಿಸಲು ನಾಲ್ಕು ತಿಂಗಳು ಕಳೆದರೂ ಇನ್ನೂ ಆದೇಶ ನೀಡಿಲ್ಲ ಎಂದು ತಿಳಿದುಬಂದಿದೆ.

೫. ಮಹಾರಾಷ್ಟ್ರ ವೈದ್ಯಕೀಯ ಪ್ರಾಧಿಕಾರದ ಅಧಿಕಾರಿ ಮಹೇಶ್ ಅವ್ಹಾಡ್ ಅವರು ೨೧ ವಿವಿಧ ಬ್ಯಾಚ್‌ಗಳ ಔಷಧಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಮತ್ತು ಕಳಪೆ ಗುಣಮಟ್ಟದ್ದಾಗಿವೆ ಎಂದು ಹೇಳಿದ್ದಾರೆ.

೬. ಮಹಾರಾಷ್ಟ್ರ ವೈದ್ಯಕೀಯ ಔಷಧ ಪ್ರಾಧಿಕಾರಕ್ಕೆ ತನ್ನದೇ ಆದ ಪ್ರಯೋಗಾಲಯವಿಲ್ಲ. ಈ ಕಾರಣದಿಂದಾಗಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ಔಷಧಗಳನ್ನು ತೆಗೆದುಕೊಂಡ ರೋಗಿಗಳ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಆಗಿದೆಯೇ ಎಂದು ತಿಳಿಯುವುದು ಕಷ್ಟವಾಗಿದೆ, ಇದು ಸಹ ಈ ಸಂದರ್ಭದಲ್ಲಿ ಬಹಿರಂಗಗೊಂಡಿದೆ.

ಸಂಪಾದಕೀಯ ನಿಲುವು

ಜನರ ಜೀವದ ಜೊತೆ ಆಟವಾಡುವ ಔಷಧ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವರ ಮೇಲೆ ನಿಷೇಧ ಹೇರಬೇಕು!