|

ನವದೆಹಲಿ – ಭಾರತ ಸರಕಾರವು ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರಗಳನ್ನು (ಡಿಟೆನ್ಷನ್ ಸೆಂಟರ್) ನಿರ್ಮಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಇನ್ನು ಮುಂದೆ, ನುಸುಳುಕೋರರನ್ನು ಬಂಧಿಸಿದ ನಂತರ, ಅವರನ್ನು ಈ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಮತ್ತು ನಂತರ ಅವರನ್ನು ಸ್ವದೇಶಕ್ಕೆ ಕಳುಹಿಸಲಾಗುವುದು. ಇದಕ್ಕಾಗಿ, ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಹ ಬಂಧನ ಕೇಂದ್ರಗಳನ್ನು ಸ್ಥಾಪಿಸಲು ನಿರ್ದೇಶನ ನೀಡಿದೆ.
🚨 Big Decision by MHA 🚨
🏛️ States told to set up detention centres & ‘Foreigners Tribunals’ for infiltrating Muslims.
✈️ Deportation will be based on tribunal rulings.
🛑 Hindus & other minorities from Pak, Afghanistan & Bangladesh to be exempt.
📊 With an estimated 5 crore… pic.twitter.com/rZ99Iy27R5
— Sanatan Prabhat (@SanatanPrabhat) September 3, 2025
ನೆರೆಹೊರೆಯ ಇಸ್ಲಾಮಿಕ್ ರಾಷ್ಟ್ರಗಳ ಅಲ್ಪಸಂಖ್ಯಾತ ಹಿಂದೂಗಳನ್ನು ಈ ನಿರ್ಧಾರದಿಂದ ಹೊರಗಿಡಲಾಗಿದೆ. ಇದರರ್ಥ, ಈ ಕೇಂದ್ರಗಳಲ್ಲಿ ನುಸುಳುಕೋರ ಮುಸ್ಲಿಮರನ್ನು ಇರಿಸಲಾಗುವುದು. ಈ ಅಧಿಸೂಚನೆಯನ್ನು ಹೊಸ ‘ಇಮಿಗ್ರೇಷನ್ ಅಂಡ್ ಫಾರಿನರ್ಸ್ ಆಕ್ಟ್, 2025’ ಕಾನೂನಿನ ಅಡಿಯಲ್ಲಿ ಹೊರಡಿಸಲಾಗಿದೆ.
ನುಸುಳುಕೋರರನ್ನು ಬಂಧನ ಕೇಂದ್ರಕ್ಕೆ ಕಳುಹಿಸುವ ಪ್ರಕ್ರಿಯೆ ಹೇಗಿರುತ್ತದೆ?
ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಮತ್ತು ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು ಸಾಧ್ಯವಾಗದ ಯಾವುದೇ ವ್ಯಕ್ತಿಯನ್ನು ಈ ಬಂಧನ ಕೇಂದ್ರದಲ್ಲಿ ಇರಿಸಲಾಗುವುದು. ಇದಕ್ಕಾಗಿ ‘ವಿದೇಶಿ ನ್ಯಾಯಾಧಿಕರಣ’ (ಫಾರಿನರ್ಸ್ ಟ್ರಿಬ್ಯೂನಲ್) ಸ್ಥಾಪಿಸಲಾಗುವುದು. ಈ ನ್ಯಾಯಾಧಿಕರಣವು ಒಬ್ಬ ವ್ಯಕ್ತಿ ವಿದೇಶಿಯನೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಈ ನ್ಯಾಯಪೀಠದಲ್ಲಿ ನ್ಯಾಯಾಂಗದ ಅನುಭವ ಇರುವ ಮೂವರು ಸದಸ್ಯರಿರುತ್ತಾರೆ. ಅಕ್ರಮ ವಲಸಿಗನೆಂದು ಸಾಬೀತಾದ ವ್ಯಕ್ತಿಯನ್ನು ಗಡೀಪಾರು ಮಾಡುವವರೆಗೆ ಈ ಬಂಧನ ಕೇಂದ್ರದಲ್ಲಿ ಇರಿಸಲಾಗುವುದು.
ಯಾರಿಗೆ ವಿನಾಯಿತಿ ಇರುತ್ತದೆ?
1. ನೇಪಾಳ ಮತ್ತು ಭೂತಾನ್ ನಾಗರಿಕರಿಗೆ ಪಾಸ್ಪೋರ್ಟ್ ಮತ್ತು ವೀಸಾ ಅವಶ್ಯಕತೆಗಳಿಂದ ವಿನಾಯಿತಿ ನೀಡಲಾಗುವುದು. ಅವರು ಚೀನಾ, ಮಕಾವು, ಹಾಂಗ್ ಕಾಂಗ್ ಅಥವಾ ಪಾಕಿಸ್ತಾನದಿಂದ ಬರದಿದ್ದರೆ ಮಾತ್ರ ಅವರು ಭೂಮಿ ಅಥವಾ ವಿಮಾನದ ಮೂಲಕ ಭಾರತವನ್ನು ಪ್ರವೇಶಿಸಬಹುದು..
2. ಇದರ ಜೊತೆಗೆ, ಧಾರ್ಮಿಕ ಕಾರಣಗಳಿಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬರುವ ಅಲ್ಪಸಂಖ್ಯಾತರಿಗೂ ಡಿಸೆಂಬರ್ 31, 2024 ರವರೆಗೆ ವಿಶೇಷ ವಿನಾಯಿತಿ ನೀಡಲಾಗುವುದು.
3. ಈ ಹೊಸ ನಿಯಮಗಳು ‘ಇಮಿಗ್ರೇಷನ್ ಅಂಡ್ ಫಾರಿನರ್ಸ್ (ಎಕ್ಸೆಂಪ್ಷನ್) ಆರ್ಡರ್, 2025’ ಅಡಿಯಲ್ಲಿ ಜಾರಿಗೆ ಬಂದಿವೆ.
| ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ನೆಮ್ಮದಿ!
ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2024 ರವರೆಗೆ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳ ಜನರಿಗೆ ವೀಸಾ (ಒಂದು ದೇಶಕ್ಕೆ ಪ್ರವೇಶಿಸಲು ಅಧಿಕೃತ ದಾಖಲೆ ಅಥವಾ ಸ್ಟಾಂಪ್) ಅಥವಾ ಪಾಸ್‌ಪೋರ್ಟ್ ಅಗತ್ಯದಿಂದ ವಿನಾಯಿತಿ ನೀಡಲಾಗಿದೆ. ಇದರರ್ಥ, ಈ ಸಮುದಾಯದವರು ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿಲ್ಲದಿದ್ದರೂ ಅಥವಾ ದಾಖಲೆಗಳ ಮಾನ್ಯತೆ ಅವಧಿ ಮುಗಿದಿದ್ದರೂ, ಅವರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಲಾಗುವುದು. ಈ ನಿಯಮವು ಪೌರತ್ವ ತಿದ್ದುಪಡಿ ಕಾಯ್ದೆಗೂ ಸಹ ಸಂಬಂಧ ಹೊಂದಿರಬಹುದು. ಈ ಕಾನೂನಿನಲ್ಲಿ, ಡಿಸೆಂಬರ್ 31, 2014 ರವರೆಗೆ ಬಂದ ನಿರಾಶ್ರಿತರಿಗೆ ಪೌರತ್ವ ನೀಡುವ ಬಗ್ಗೆ ಮೊದಲು ಮಾತನಾಡಲಾಗಿತ್ತು. ಈಗ ಈ ಗಡುವನ್ನು ಡಿಸೆಂಬರ್ 31, 2024 ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ, ಈ ಅಧಿಸೂಚನೆಯು ವಾಸಿಸುವ ಅನುಮತಿಗೆ ಮಾತ್ರ ಸಂಬಂಧಿಸಿದ್ದು, ನೇರವಾಗಿ ಪೌರತ್ವಕ್ಕೆ ಸಂಬಂಧಿಸಿಲ್ಲ. |
ಸಂಪಾದಕೀಯ ನಿಲುವುಕೇಂದ್ರ ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ 5 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ವಾಸಿಸುತ್ತಿದ್ದಾರೆ. ಆದ್ದರಿಂದ, ಇವರೆಲ್ಲರನ್ನೂ ಭಾರತದಿಂದ ಹೊರಹಾಕಲು ನ್ಯಾಯಾಧಿಕರಣಗಳು ವೇಗವಾಗಿ ಕಾರ್ಯನಿರ್ವಹಿಸುವುದು ಆವಶ್ಯಕವಾಗಿದೆ! |

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!