ಪಂಜಾಬ್‌ನಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ 3 ಭಯೋತ್ಪಾದಕರ ಬಂಧನ : Punjab Terrorists Arrest

ಮೊಹಾಲಿ (ಪಂಜಾಬ್) – ಪೊಲೀಸರು ಇಲ್ಲಿನ ಜೈಷ್-ಎ-ಮೊಹಮ್ಮದ್ ಸಂಘಟನೆಯ ಸಹೀಲ್ ಬಷೀರ್, ಐಜಾಜ್ ಅಹ್ಮದ್ ಮತ್ತು ಮುನೀಶ್ ಸಿಂಗ್, ಈ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಒಂದು ಕಾರು ಚಾಲಕನ ಹತ್ಯೆ ಪ್ರಕರಣದಲ್ಲಿ ಪೊಲೀಸರು ಈ ಮೂವರನ್ನು ಹುಡುಕುತ್ತಿದ್ದರು. ಬಷೀರ್ ಕಲಮಾಬಾದ್‌ನಲ್ಲಿ ನಡೆದ ಇನ್ನೊಂದು ಭಯೋತ್ಪಾದನಾ ಕೃತ್ಯಕ್ಕಾಗಿ ಪೊಲೀಸರಿಗೆ ಬೇಕಾಗಿದ್ದನು. ಆ ಪ್ರಕರಣದಲ್ಲಿ ಅವನ ಮೇಲೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ‘ಈ ಮೂವರನ್ನು ಬಂಧಿಸಿ, ‘ಜೈಷ್’ನ ಭಯೋತ್ಪಾದಕರ ನೆಲೆಯನ್ನು ನಾಶಪಡಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಈ ಮೂವರು ಭಯೋತ್ಪಾದಕರು ಜಮ್ಮು- ಕಾಶ್ಮೀರದವರಾಗಿದ್ದಾರೆ. ಇವರು ಮೂವರು ಪಂಜಾಬ್‌ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದರು. (ಪಂಜಾಬ್ ಭಯೋತ್ಪಾದಕರ ನೆಲೆಯಾಗಿ ಮಾರ್ಪಡುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ. ಇಲ್ಲಿನ ಜಿಹಾದಿ ಮತ್ತು ಖಲಿಸ್ತಾನಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ! – ಸಂಪಾದಕರು)

ಕಾರು ಚಾಲಕ ಅನಿಲ ಕುಮಾರ ಆಗಸ್ಟ್ 28 ರಿಂದ ನಾಪತ್ತೆಯಾಗಿದ್ದನು. ಈ ಮೂವರು ಭಯೋತ್ಪಾದಕರು ಅವನ ಕಾರನ್ನು ಬಾಡಿಗೆಗೆ ಪಡೆದಿದ್ದರು. ಈ ಭಯೋತ್ಪಾದಕರು ಅನಿಲ ಕುಮಾರ್ ಅವನಿಗೆ ಯೋಜಿತ (ನಿಗದಿತ) ಸ್ಥಳಕ್ಕಿಂತ ಬೇರೆ ಕಡೆಗೆ ಹೋಗುವಂತೆ ಹೇಳಿದಾಗ ಅವರ ನಡುವೆ ಜಗಳವಾಗಿದೆ. ಆನಂತರ ಈ ಭಯೋತ್ಪಾದಕರು ಅವನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.