ಕಾಂಗ್ರೆಸ್ ಕಾರ್ಯಕರ್ತನು ಪ್ರಧಾನ ಮಂತ್ರಿ ಮೋದಿ ಅವರ ದಿವಂಗತ ತಾಯಿಯ ಬಗ್ಗೆ ಕೆಟ್ಟ ಪದಗಳನ್ನು ಬಳಸಿದ ಪ್ರಕರಣ

ನವದೆಹಲಿ – ಕಾಂಗ್ರೆಸ್ ಕಾರ್ಯಕರ್ತನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯ ಬಗ್ಗೆ ಕೆಟ್ಟ ಪದಗಳನ್ನು ಬಳಸಿದ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅನ್ನು ಟೀಕಿಸಿದರು. ಪ್ರಧಾನಿ ಮೋದಿ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಯಾರಾದರೂ ತಾಯಿಗೆ ಬೈಯುವುದು ಭಾರತೀಯ ಸಂಸ್ಕೃತಿ ಅಲ್ಲ ಎಂದು ಹೇಳಿದರು. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಿಹಾರ ರಾಜ್ಯದ ‘ಮತದಾನ ಅಧಿಕಾರ ಯಾತ್ರೆ’ಯ ಸಮಯದಲ್ಲಿ ದರ್ಬಂಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಅವರ ಒಬ್ಬ ಕಾರ್ಯಕರ್ತನು ಪ್ರಧಾನಿಯವರ ತಾಯಿಗೆ ಬೈಯ್ದಿದ್ದನು.
ಇದರ ಬಗ್ಗೆ ಪ್ರಧಾನಿ ಮಾತು ಮುಂದುವರೆಸಿ, ತಾಯಿ ನಮ್ಮ ಪ್ರಪಂಚವಾಗಿದೆ. ಅವರು ನಮ್ಮ ಸ್ವಾಭಿಮಾನವಾಗಿರುತ್ತದೆ. ಬಿಹಾರದ ಈ ಸಮೃದ್ಧ ಸಂಪ್ರದಾಯದಲ್ಲಿ ಕೆಲವು ದಿನಗಳ ಹಿಂದೆ ಏನಾಯಿತು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಈ ನಿಂದನೆಯು ನನ್ನ ತಾಯಿಯ ಅವಮಾನ ಮಾತ್ರವಲ್ಲ, ಇದು ದೇಶದ ತಾಯಂದಿರು ಮತ್ತು ಸಹೋದರಿಯರ ಅವಮಾನವಾಗಿದೆ.
ರಾಜಮನೆತನದ ‘ಯುವರಾಜ’ ತಾಯಂದಿರ ದುಃಖವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ! – ಪ್ರಧಾನ ಮಂತ್ರಿ
ಪ್ರಧಾನಿ ಮಾತು ಮುಂದುವರೆಸಿ, ದೇಶದ ಕೋಟಿಗಟ್ಟಲೆ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಸಲು ಮತ್ತು ಅವರಿಗೆ ಉತ್ತಮ ಮೌಲ್ಯಗಳನ್ನು ನೀಡಲು ಪ್ರತಿದಿನವೂ ಹೋರಾಡುತ್ತಾರೆ. ರಾಹುಲ್ ಗಾಂಧಿ ಅವರ ಹೆಸರನ್ನು ತೆಗೆದುಕೊಳ್ಳದೆ, ರಾಜಮನೆತನದ ‘ಯುವರಾಜ’ರು ತಾಯಂದಿರ ದುಃಖವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎಂದು ಹೇಳಿದರು.
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!