ರಿಯಾಸಿ (ಜಮ್ಮು)ಯಲ್ಲಿ ಭೂಕುಸಿತ: ಒಂದೇ ಕುಟುಂಬದಲ್ಲಿನ 7 ಜನರ ದುರ್ಮರಣ!

​ಜಮ್ಮು (ಜಮ್ಮು- ಕಾಶ್ಮೀರ) – ಜಮ್ಮುವಿನ ರಿಯಾಸಿ ಜಿಲ್ಲೆಯ ಮಾಹೋರ್ ತಾಲ್ಲೂಕಿನಲ್ಲಿನ ಬದ್ದಾರ್ ಗ್ರಾಮದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಭೀಕರ ಮಳೆಯ ವೇಳೆ ಆ ಮನೆಯಲ್ಲಿ ಒಂದೇ ಕುಟುಂಬದ ಅನೇಕ ಸದಸ್ಯರಿದ್ದರು. ಅವರಲ್ಲಿನ ಏಳು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ, ಆಗಸ್ಟ್ 30ರ ಮುಂಜಾನೆ ಬೆಟ್ಟದ ಇಳಿಜಾರಿನಲ್ಲಿದ್ದ ಈ ಮನೆಯ ಬಳಿ ಭೂಕುಸಿತ ಸಂಭವಿಸಿದ್ದು, ಅವಶೇಷಗಳಡಿ ಅನೇಕರು ಸಿಕ್ಕಿಬಿದ್ದಿದ್ದಾರೆ. ಸದ್ಯ ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ.

​ಧಾರಾಕಾರ ಮಳೆ ಬಂದಾಗ ಅಪಾಯಕಾರಿ ಕಟ್ಟಡಗಳಿಂದ ಹೊರಗೆಬನ್ನಿ! – ಸರಕಾರ

ಜಿಲ್ಲಾಡಳಿತವು ಗುಡ್ಡಗಾಡು ಪ್ರದೇಶಗಳಲ್ಲಿ, ಹಾಗೆಯೇ ಭೂಕುಸಿತದ ಸಾಧ್ಯತೆಯಿರುವ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಭಾರೀ ಮಳೆಯ ಸಮಯದಲ್ಲಿ ಅಪಾಯಕಾರಿ ಕಟ್ಟಡಗಳಲ್ಲಿ ಇರಬೇಡಿ ಎಂದು ಮನವಿ ಮಾಡಿದೆ.