ಭಾರತ-ಕೆನಡಾ ಸಂಬಂಧಗಳಲ್ಲಿ ಸುಧಾರಣೆ: ಹೊಸ ಹೈಕಮೀಷನರ್ ನೇಮಕ – India Canada High Commissioners Appointed

ನವದೆಹಲಿ – ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಮತ್ತು ಸದ್ಯಕ್ಕೆ ಸ್ಪೇನ್‌ ನಲ್ಲಿ ರಾಯಭಾರಿಯಾಗಿರುವ ದಿನೇಶ ಕೆ.ಪಟ್ನಾಯಕ್ ಅವರನ್ನು ಕೆನಡಾಗೆ ಹೊಸ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದ. ಕೆನಡಾ ಕೂಡ ಅನುಭವಿ ರಾಯಭಾರಿ ಕ್ರಿಸ್ಟೋಫರ ಕುಟರ್ ಅವರನ್ನು ಭಾರತಕ್ಕೆ ಹೈಕಮಿಷನರ್ ಆಗಿ ನೇಮಕ ಮಾಡಿದೆ. ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಇದರಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದರಿಂದಾಗಿ ಭಾರತವು ತನ್ನ ಹೈಕಮಿಷನರ್ ಅನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ‘ಈಗ ಕೆನಡಾದಲ್ಲಿ ಭಾರತವು ಹೈಕಮಿಷನರ್ ಅನ್ನು ನೇಮಕ ಮಾಡಿದ್ದರಿಂದ, ಎರಡೂ ದೇಶಗಳ ನಡುವಿನ ಸಂಬಂಧಗಳು ಸುಧಾರಿಸುತ್ತಿವೆ’ ಎಂದು ಹೇಳಲಾಗುತ್ತಿದೆ.

1. ಕೆನಡಾದಲ್ಲಿ ಹೈಕಮಿಷನರ್ ಹುದ್ದೆ ಅಕ್ಟೋಬರ್ 2024 ರಿಂದ ಖಾಲಿ ಇತ್ತು. ಹೆಚ್ಚಿದ ಉದ್ವಿಗ್ನತೆಯಿಂದಾಗಿ ಭಾರತದ ಕೆನಡಾದಲ್ಲಿನ ಹಿಂದಿನ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ಒಟ್ಟಾವಾದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು.

2. ಭಾರತದಲ್ಲಿನ ಕೆನಡಾದ ಹೈಕಮಿಷನರ್ ಕ್ಯಾಮೆರೂನ್ ಮ್ಯಾಕೆ ಅವರ ಅಧಿಕಾರಾವಧಿ ಮಾರ್ಚ್ 2022 ರಲ್ಲಿ ಕೊನೆಗೊಂಡಿತ್ತು. ಅಂದಿನಿಂದ ಈ ಹುದ್ದೆ ಖಾಲಿಯಿತ್ತು.

3. ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಎರಡೂ ದೇಶಗಳ ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ತರುವ ಮೊದಲ ಹೆಜ್ಜೆಯಾಗಿ ಹೈಕಮಿಷನರ್‌ಗಳನ್ನು ಮರುನೇಮಕ ಮಾಡುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದರು.

4. ಎರಡೂ ದೇಶಗಳು ಈಗ ಕ್ರಮೇಣ ನಿಯಮಿತ ವ್ಯವಹಾರ ಸೇವೆ ಮತ್ತು ರಾಜಕೀಯ ಸಂವಾದವನ್ನು ಪುನರಾರಂಭಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.