|

ಟೋಕಿಯೋ (ಜಪಾನ್) – ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿರುವುದಷ್ಟೇ ಅಲ್ಲ, ಭಾರತವನ್ನು ನಂಬುತ್ತಿದೆ. ನಾನು ನಿಮ್ಮನ್ನು ಒತ್ತಾಯಿಸುತ್ತೇನೆ, ‘ನೀವು ಬನ್ನಿ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ (ಭಾರತಕ್ಕೆ ಬಂದು ಜಗತ್ತಿಗಾಗಿ ಉತ್ಪನ್ನಗಳನ್ನು ತಯಾರಿಸಿ) ಎಂದು ಪ್ರಧಾನ ಮಂತ್ರಿ ಮೋದಿ ಅವರು ‘ಭಾರತ-ಜಪಾನ್ ಆರ್ಥಿಕ ವೇದಿಕೆ’ಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಈ ಮಹತ್ವದ ಹೇಳಿಕೆಯನ್ನು ನೀಡಿದರು. ಅವರು ಪ್ರಸ್ತುತ ಜಪಾನ್ ಪ್ರವಾಸದಲ್ಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸುಂಕ ಸಮರದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಜಪಾನೀ ಉದ್ಯಮಿಗಳಿಗೆ ನೀಡಿರುವ ಈ ಆಹ್ವಾನವು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮೆಟ್ರೋದಿಂದ ಹಿಡಿದು ‘ಮ್ಯಾನುಫ್ಯಾಕ್ಚರಿಂಗ್’ (ಉತ್ಪಾದನೆ) ವರೆಗೆ, ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ವಿಶ್ವಾಸದ ಸಂಕೇತವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಜಪಾನೀ ಕಂಪನಿಗಳು ಭಾರತದಲ್ಲಿ $40 ಶತಕೋಟಿಗಿಂತಲೂ ಹೆಚ್ಚು (₹3.52 ಲಕ್ಷ ಕೋಟಿಗಿಂತ ಹೆಚ್ಚು) ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ, $13 ಶತಕೋಟಿಗೂ ಹೆಚ್ಚು (₹1.14 ಲಕ್ಷ ಕೋಟಿಗಿಂತ ಹೆಚ್ಚು) ಖಾಸಗಿ ಹೂಡಿಕೆಯೂ ಆಗಿದೆ. ಈ ಸಂದರ್ಭದಲ್ಲಿ, ಜಪಾನ್ ಪ್ರಧಾನ ಮಂತ್ರಿ ಶಿಗೇರು ಇಶಿಬಾ ಅವರು, ಭಾರತದ ಪ್ರತಿಭೆ ಮತ್ತು ಜಪಾನೀ ತಂತ್ರಜ್ಞಾನಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಹೇಳಿದರು.
🇮🇳🤝🇯🇵 PM Modi calls on Japanese businesses:
“Come to India, Make for the World” 🌏📈 Highlights India’s 18% contribution to global development & growing trust in Bharat’s role in world trade.
A landmark visit amid US-India tariff tensions!#ModiInJapan #GlobalIndia pic.twitter.com/tPFsvmWId7
— Sanatan Prabhat (@SanatanPrabhat) August 30, 2025
ಭಾರತದ ಆರ್ಥಿಕತೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿ ಅವರು ಹೇಳಿದ ಪ್ರಮುಖ ಅಂಶಗಳು!
1. ಇಂದು ಭಾರತದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇದೆ. ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
2. ‘ಜಪಾನ್ ಬ್ಯಾಂಕ್’ ಪ್ರಕಾರ, ಭಾರತವು ಅತ್ಯಂತ ಭರವಸೆಯ ತಾಣವಾಗಿದೆ, ಹಾಗೂ ಜಪಾನಿನ ವ್ಯಾಪಾರ ಸಂಸ್ಥೆಯಾದ ‘ಜಪಾನ್ ಎಕ್ಸ್ಟರ್ನಲ್ ಟ್ರೇಡ್ ಆರ್ಗನೈಸೇಶನ್’ ಪ್ರಕಾರ, ವಿಶ್ವದ ಶೇ. 80ರಷ್ಟು ಕಂಪನಿಗಳು ಭಾರತದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತವೆ. ಶೇ. 75ರಷ್ಟು ಅಂತರರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಲಾಭ ಗಳಿಸುತ್ತಿವೆ.
3. ಜಾಗತಿಕ ಅಭಿವೃದ್ಧಿಗೆ ಭಾರತವು ಶೇ. 18ರಷ್ಟು ಕೊಡುಗೆ ನೀಡುತ್ತಿದೆ. ಭಾರತದಲ್ಲಿ ವ್ಯಾಪಾರ ಮಾಡುವ ಸುಲಭತೆಗೆ ಒತ್ತು ನೀಡಲಾಗಿದೆ. ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಸೂಕ್ಷ್ಮ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ.
4. ಜಪಾನ್ ಒಂದು ‘ಟೆಕ್ ಪವರ್‌ಹೌಸ್’ (ತಂತ್ರಜ್ಞಾನದ ಶಕ್ತಿಶಾಲಿ ಕೇಂದ್ರ) ಹಾಗೂ ಭಾರತವು ‘ಟ್ಯಾಲೆಂಟ್ ಪವರ್‌ಹೌಸ್’ (ಪ್ರತಿಭೆಯ ಶಕ್ತಿಶಾಲಿ ಕೇಂದ್ರ)ವಾಗಿದೆ. ಜಪಾನ್‌ನ ತಂತ್ರಜ್ಞಾನ ಮತ್ತು ಭಾರತದ ಪ್ರತಿಭೆ ಒಟ್ಟಾಗಿ ಈ ಶತಮಾನದ ‘ಟೆಕ್ ಕ್ರಾಂತಿ’ಯ (ತಂತ್ರಜ್ಞಾನದ ಕ್ರಾಂತಿ) ನೇತೃತ್ವ ವಹಿಸಬಲ್ಲವು.
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ