ಶ್ರೀ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಬಂಡೆ ಕುಸಿತ; 31 ಜನರು ಸಾವು, 23 ಜನರಿಗೆ ಗಾಯ

ಜಮ್ಮು – ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರಿ ಮಳೆಯಿಂದಾಗಿ, ಕತ್ರಾದ ಶ್ರೀ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಆಗಸ್ಟ್ 27 ರಂದು ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ 31 ಜನರು ಸಾವನ್ನಪ್ಪಿದ್ದು, 23 ಜನರು ಗಾಯಗೊಂಡಿದ್ದಾರೆ. ಬೃಹತ್ ಬಂಡೆಗಳು ಕುಸಿದಿದ್ದರಿಂದ ಜಮ್ಮು-ಕತ್ರಾ ಹೆದ್ದಾರಿ ಸೇರಿದಂತೆ ಹಲವು ಸಣ್ಣ ರಸ್ತೆಗಳು ಬಂದ್ ಆಗಿವೆ. ಮತ್ತೊಂದೆಡೆ, ಉತ್ತರ ರೈಲ್ವೇ ತನ್ನ 22 ರೈಲುಗಳನ್ನು ರದ್ದುಗೊಳಿಸಿದ್ದು, 27 ರೈಲುಗಳನ್ನು ಅರ್ಧದಾರಿಯಲ್ಲಿ ನಿಲ್ಲಿಸಿದೆ.