‘ಡ್ರೀಮ್ 11’ ಕಂಪನಿಯೊಂದಿಗಿನ ಭಾರತೀಯ ಕ್ರಿಕೆಟ್ ತಂಡದ ಒಪ್ಪಂದ ರದ್ದು! – ಬಿಸಿಸಿಐ

(ಬಿಸಿಸಿಐ ಎಂದರೆ ‘ದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ’, ಅಂದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)

ನವದೆಹಲಿ – ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ‘ಡ್ರೀಮ್ 11’ ಅಧಿಕೃತವಾಗಿ ಬೇರ್ಪಟ್ಟಿವೆ. ‘ಡ್ರೀಮ್ 11’ ಕಂಪನಿಯೊಂದಿಗಿನ ನಮ್ಮ ಪ್ರಾಯೋಜಕತ್ವವು ಕೊನೆಗೊಂಡಿದೆ ಎಂದು ಬಿಸಿಸಿಐ ತಿಳಿಸಿದೆ. ‘ಆನ್‌ಲೈನ್ ಗೇಮಿಂಗ್ ಪ್ರಮೋಷನ್ ಅಂಡ್ ರೆಗ್ಯುಲೇಶನ್ ಬಿಲ್, 2025’ ಅಂಗೀಕಾರಗೊಂಡ ನಂತರ ನಾವು ‘ಡ್ರೀಮ್ 11’ ನೊಂದಿಗಿನ ಸಂಬಂಧವನ್ನು ಕಡಿತಗೊಳಿಸುತ್ತಿದ್ದೇವೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದರು. ಬಿಸಿಸಿಐ ಭವಿಷ್ಯದಲ್ಲಿ ಇಂತಹ ಯಾವುದೇ ಸಂಸ್ಥೆಗಳೊಂದಿಗೆ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಿದೆ.

ಸಂಪಾದಕೀಯ ನಿಲುವು

‘ಆನ್‌ಲೈನ್ ಮನಿ ಗೇಮಿಂಗ್’ (ಆನ್‌ಲೈನ್ ಜೂಜಾಟ) ಕಾರಣದಿಂದ ಯುವ ಪೀಳಿಗೆಯ ಜೀವನ ಹಾಳಾಗುತ್ತಿರುವುದರಿಂದ ಸರಕಾರ ನಿಷೇಧ ಹೇರುವ ಕಾನೂನನ್ನು ಮಾಡಿದ ನಂತರ ‘ಬಿಸಿಸಿಐ’ ಎಚ್ಚೆತ್ತಿದೆ. ಮೂಲತಃ, ಇಂತಹ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬಿಸಿಸಿಐ ಒಂದು ರೀತಿಯಲ್ಲಿ ಈ ಗೇಮಿಂಗ್ ಅನ್ನು ಹಲವು ವರ್ಷಗಳಿಂದ ಪ್ರೋತ್ಸಾಹಿಸಿದೆ. ಹಾಗಾಗಿ, ಬಿಸಿಸಿಐ ಮೇಲೂ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.