ಯೋಜನಾ ಆಯೋಗದ ಮಾಜಿ ಸದಸ್ಯೆ ಸೈಯದಾ ಹಮೀದ್ ಅವರ ಹೇಳಿಕೆ

ನವದೆಹಲಿ – ಆಸ್ಸಾಂ ಸರಕಾರವು ಮುಸ್ಲಿಮರನ್ನು ‘ಬಾಂಗ್ಲಾದೇಶಿಯರು’ ಎಂದು ಕರೆಯುವ ಮೂಲಕ ಅವರಿಗೆ ಅನ್ಯಾಯ ಮಾಡುತ್ತಿದೆ. ಅವರು ಬಾಂಗ್ಲಾದೇಶಿಯರಾಗಿದ್ದರೆ ಅದರಲ್ಲಿ ತಪ್ಪೇನಿದೆ? ಅವರೂ ಮನುಷ್ಯರೇ ಆಗಿದ್ದಾರೆ. ಭೂಮಿ ಇಷ್ಟು ದೊಡ್ಡದಿದೆ, ಹಾಗಾಗಿ ಬಾಂಗ್ಲಾದೇಶಿಯರು ಇಲ್ಲಿಯೂ ಇರಬಹುದು. ‘ನುಸುಳುಕೋರರು ಮೂಲ ನಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹೇಳುವುದು ಭ್ರಮೆ ಮತ್ತು ಮಾನವೀಯತೆಯ ವಿರುದ್ಧವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸೈಯದಾ ಹಮೀದ್ ಗೌಹಾಟಿಯಲ್ಲಿ ಹೇಳಿದ್ದಾರೆ. ಸೈಯದಾ ಅವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಯೋಜನಾ ಆಯೋಗದ ಸದಸ್ಯರಾಗಿದ್ದರು. ಪ್ರಸ್ತುತ ಆಸ್ಸಾಂ ಸರಕಾರವು ಸರಕಾರಿ ಭೂಮಿಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಮತ್ತು ಬಾಂಗ್ಲಾದೇಶದಿಂದ ಬಂದ ನುಸುಳುಕೋರರನ್ನು ಹಿಂತಿರುಗಿಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸೈಯದಾ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ಆಸ್ಸಾಂ ಪ್ರವಾಸದಲ್ಲಿದ್ದಾರೆ. ಅವರ ಜೊತೆಗೆ ನ್ಯಾಯವಾದಿ ಪ್ರಶಾಂತ ಭೂಷಣ, ಹರ್ಷ ಮಂದರ, ಜವಾಹರ ಸರಕಾರ ಮುಂತಾದವರು ಇದ್ದರು. (ಇವರೆಲ್ಲರೂ ಕೇವಲ ಹೆಸರಿಗೆ ಹಿಂದೂಗಳಾಗಿದ್ದು, ವಾಸ್ತವದಲ್ಲಿ ಅವರ ಕೆಲಸ ಹಿಂದೂ ಮತ್ತು ದೇಶ ವಿರೋಧಿಯಾಗಿ ಕಂಡುಬಂದಿದೆ! – ಸಂಪಾದಕರು)
ಅಲ್ಲಾಹನು ಈ ಭೂಮಿಯನ್ನು ಮನುಷ್ಯರಿಗಾಗಿ ಸೃಷ್ಟಿಸಿದ್ದಾನೆ!
ಸೈಯದಾ ಹಮೀದ್ ಅವರು ಮಾತು ಮುಂದುವರೆಸಿ, ಅಲ್ಲಾಹನು ಈ ಭೂಮಿಯನ್ನು ಮನುಷ್ಯರಿಗಾಗಿ ಸೃಷ್ಟಿಸಿದ್ದಾನೆ, ಪ್ರಾಣಿಗಳಿಗಲ್ಲ ಎಂದು ಹೇಳಿದರು. ಒಬ್ಬ ಮನುಷ್ಯ ಭೂಮಿಯ ಮೇಲೆ ನಿಂತಿರುವಾಗ ಅವನನ್ನು ಹೊರಹಾಕುವುದು ಮುಸ್ಲಿಮರಿಗೆ ವಿನಾಶದಂತಿದೆ. ಭಾರತದ ಏಕೀಕೃತ ಸಂಸ್ಕೃತಿಗಾಗಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು, ಎಂದು ಹೇಳಿದರು.
‘ಆಸ್ಸಾಂ ಸರಕಾರವು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದೆ!’ – ನ್ಯಾಯವಾದಿ ಪ್ರಶಾಂತ ಭೂಷಣ

ಪ್ರಶಾಂತ ಭೂಷಣ ಅವರು, ಭಾರತದ ಮುಸ್ಲಿಮರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ನೇತೃತ್ವದ ಆಸ್ಸಾಂ ಸರಕಾರವು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಜನರನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ ಮತ್ತು ಮನೆಗಳನ್ನು ಕೆಡವುತ್ತಿದೆ. (ಪ್ರಶಾಂತ ಭೂಷಣ್ ಅವರಿಗೆ ಬಾಂಗ್ಲಾದೇಶಿ ಒಳನುಸುಳುಕೋರರ ಬಗ್ಗೆ ಇಷ್ಟೊಂದು ಕಾಳಜಿ ಇದ್ದರೆ, ಅವರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸಾಕಬೇಕು! – ಸಂಪಾದಕರು)
ಅತಿಕ್ರಮಣದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಈ ಗುಂಪಿನ ಪ್ರವಾಸದ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ದೆಹಲಿಯಿಂದ ಬಂದಿರುವ ಈ ಗುಂಪು ಕಾನೂನುಬದ್ಧವಾಗಿ ಅತಿಕ್ರಮಣಕಾರರನ್ನು ತೆಗೆದುಹಾಕುವ ಕಾರ್ಯಾಚರಣೆಯನ್ನು ‘ಮಾನವ ಸಂಕಷ್ಟ’ ಎಂದು ಬಿಂಬಿಸಿ, ಅದನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿದೆ. ಅತಿಕ್ರಮಣದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ಯಾವುದೇ ಪ್ರಚಾರ ಅಥವಾ ಒತ್ತಡ ನಮ್ಮ ಭೂಮಿ ಮತ್ತು ಸಂಸ್ಕೃತಿಯ ರಕ್ಷಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಶ್ಮೀರದಿಂದ ಸಾವಿರಾರು ಹಿಂದೂಗಳನ್ನು ಅವರ ಸ್ವಂತ ಮನೆಯಿಂದ, ರಾಜ್ಯದಿಂದ ಒಂದೇ ರಾತ್ರಿಯಲ್ಲಿ ಮುಸ್ಲಿಮರು ಹೊರಹಾಕಿದರು. ಮಸೀದಿಗಳಲ್ಲಿನ ಧ್ವನಿವರ್ಧಕಗಳ ಮೂಲಕ ಬೆದರಿಕೆ ಹಾಕಿ ಹಿಂದೂಗಳನ್ನು ಪಲಾಯನ ಮಾಡುವಂತೆ ಒತ್ತಾಯಿಸಲಾಯಿತು. ಉಳಿದವರನ್ನು ಜಿಹಾದಿ ಮುಸ್ಲಿಮರು ಕೊಂದು ಹಾಕಿದರು. ಆಗ ಸೈಯದಾ ಹಮೀದ್ ಹೇಳಿದ ಈ ವಾಕ್ಯ ಅವರಿಗೆ ತಿಳಿದಿರಲಿಲ್ಲವೇ? ಈಗಲೂ ಅವರು ಹಿಂದೂಗಳನ್ನು ಅಲ್ಲಿ ಇರಲು ಬಿಡುತ್ತಿಲ್ಲ. ಅದರ ಬಗ್ಗೆ ಸೈಯದಾ ಕಾಶ್ಮೀರಕ್ಕೆ ಹೋಗಿ ಇಂತಹ ಹೇಳಿಕೆ ಏಕೆ ನೀಡುವುದಿಲ್ಲ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!