ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲಿನ ಹಲ್ಲೆ ಪ್ರಕರಣ; ತಹಸೀನ್ ಸೈಯದ್ ಬಂಧನ

ನವದೆಹಲಿ – ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಎರಡನೇ ವ್ಯಕ್ತಿಯ ಬಂಧನವಾಗಿದೆ. ಪ್ರಮುಖ ಆರೋಪಿ ರಾಜೇಶಭಾಯಿ ಸಕಾರಿಯಾ ಅವನ ಸಹಚರ ತಹಸೀನ್ ಸೈಯದ್ ಎಂಬವನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆತನನ್ನು ಆಗಸ್ಟ್ 22ರಂದು ಗುಜರಾತನ ರಾಜಕೋಟದಿಂದ ವಶಕ್ಕೆ ಪಡೆಯಲಾಗಿತ್ತು, ಆದರೆ ಆಗಸ್ಟ್ 24ರಂದು ಬಂಧಿಸಲಾಯಿತು. ಆಗಸ್ಟ್ 20ರಂದು ಗುಪ್ತಾ ಅವರ ಮೇಲೆ ಅವರ ನಿವಾಸದಲ್ಲಿ ಹಲ್ಲೆ ನಡೆಸಲಾಗಿತ್ತು. ಈ ವೇಳೆ, ಆಕಸ್ಮಿಕವಾಗಿ ಅವರ ಕೈಯನ್ನು ಎಳೆದ ಕಾರಣ, ಅವರ ಕೈ, ಭುಜ ಮತ್ತು ತಲೆಗೆ ಗಾಯಗಳಾಗಿದ್ದವು. ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಕಾರಣದಿಂದಾಗಿ ರಾಜೇಶಭಾಯಿ ಸಕಾರಿಯಾ ಈ ದಾಳಿ ಮಾಡಿದ್ದಾನೆ ಎಂದು ಸೈಯದ್ ಹೇಳಿದ್ದನು.