ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡ ಯುವಕ

ಮುಂಬಯಿ – ಒನತ್ ಸಿಯಾಹಾನ್ ಎಂಬ ವ್ಯಕ್ತಿ ಮುಂಬಯಿ ಮತ್ತು ಲಂಡನ್ ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳ ಸುರಕ್ಷತೆಯನ್ನು ಹೋಲಿಸುವ ಒಂದು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬಯಿಗೆ ಹೋಲಿಸಿದರೆ ಲಂಡನ್‌ನಲ್ಲಿ ನನಗೆ ಕಡಿಮೆ ಸುರಕ್ಷಿತ ಎನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ, ವಿಶೇಷವಾಗಿ ಮೊಬೈಲ್ ಫೋನ್‌ಗಳ ಕಳ್ಳತನದ ಘಟನೆಗಳ ಬಗ್ಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
View this post on Instagram
ಒನತ್ ಅವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮುಂಬಯಿ ಮತ್ತು ಲಂಡನ್ ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬಳಸುವ ವಿಧಾನದಲ್ಲಿನ ವ್ಯತ್ಯಾಸವನ್ನು ತೋರಿಸಿದ್ದಾರೆ. ಅವರು, “ಜಗತ್ತಿನ 30ಕ್ಕೂ ಹೆಚ್ಚು ರಾಜಧಾನಿ ನಗರಗಳಲ್ಲಿ ಸುತ್ತಿದ ನಂತರ, ಜಗತ್ತಿನ ಅತ್ಯಂತ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದಾದ ಲಂಡನ್‌ನಲ್ಲಿ ನನ್ನ ಮೊಬೈಲ್ ಅನ್ನು ಮುಕ್ತವಾಗಿ ಬಳಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನಗೆ ಇನ್ನೂ ಆಘಾತಕಾರಿ ಸಂಗತಿಯಾಗಿದೆ. ನಿಜ ಹೇಳಬೇಕೆಂದರೆ, ಈ ಪರಿಸ್ಥಿತಿ ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದೆ” ಎಂದು ಹೇಳಿದ್ದಾರೆ.
ಪೊಲೀಸರೇ ಮೊಬೈಲ್ ಕಳ್ಳತನದ ಬಗ್ಗೆ ಎಚ್ಚರಿಕೆ ನೀಡುತ್ತಾರೆ
ಒನತ್ ಲಂಡನ್‌ನ ಒಂದು ಪ್ರದೇಶದಲ್ಲಿ ವಿಡಿಯೋ ಮಾಡುತ್ತಿರುವಾಗ, ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳು ಅಲ್ಲಿ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಅವರಿಗೆ ಸೂಚಿಸಿದರು. ನೀವು ಬರಿ ಹುಲ್ಲಿನ ಮೇಲೆ ಕುಳಿತು ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದರೂ ಕಳ್ಳರು ನಿಮ್ಮ ಮೊಬೈಲ್ ಕಸಿದುಕೊಂಡು ಹೋಗುತ್ತಾರೆ ಎಂದು ಆ ಪೊಲೀಸ್ ಹೇಳಿದರು.
ಮುಂಬಯಿಯಲ್ಲಿ ನಿರ್ಭಯದಿಂದ ಓಡಾಡಬಹುದು!
ಒನತ್ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿ, ಅದರಲ್ಲಿ ಮುಂಬಯಿ ನಗರವನ್ನು ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ಯಾವುದೇ ಭಯವಿಲ್ಲದೆ ಮೊಬೈಲ್ ಫೋನ್ ಹಿಡಿದುಕೊಂಡು ಓಡಾಡುತ್ತಿರುವುದು ಕಂಡುಬಂದಿದೆ.
ಒನತ್ ಅವರ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಪ್ರತಿಕ್ರಿಯೆಗಳು!
ಸಾಮಾಜಿಕ ಮಾಧ್ಯಮದ್ಲಲಿನ ಓರ್ವ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡಿದ್ದು, “ನನ್ನ ಇಡೀ ಜೀವನದಲ್ಲಿ ನನ್ನ ವ್ಯಾಲೆಟ್ ಕೇವಲ ಒಂದು ಬಾರಿ ಮಾತ್ರ ಕಳುವಾಗಿದೆ, ಅದು ಲಂಡನ್‌ನಲ್ಲಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, “20 ಆಗಸ್ಟ್ 2020 ರಂದು, ಹಗಲು ಹೊತ್ತಿನಲ್ಲಿ ಬ್ರಿಟಿಷ್ ಮ್ಯೂಸಿಯಂ ಎದುರು ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ. ಅದೃಷ್ಟವಶಾತ್, ನನ್ನ ಹಿಡಿತ ಗಟ್ಟಿಯಾಗಿತ್ತು” ಎಂದು ಹೇಳಿಕೊಂಡಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ