ಮಹಾರಾಷ್ಟ್ರದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲನಾದ ಕಾರಣ ಸಿಕ್ಕಿಬಿದ್ದ!

ನವದೆಹಲಿ – ನಕಲಿ ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುತ್ತಿದ್ದ ಅಫ್ಘಾನ್ ನುಸುಳುಕೋರನನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಅಫ್ಘಾನ್ ನುಸುಳುಕೋರನ ಹೆಸರು ಮೊಹಮ್ಮದ್ ರಸೂಲ್ ನಜೀಬ್ ಖಾನ್ ಮತ್ತು ಆತ ತನ್ನ ಪಾಸ್‌ಪೋರ್ಟ್‌ನಲ್ಲಿ ‘ನವಿ ಮುಂಬಯಿ, ಮಹಾರಾಷ್ಟ್ರ’ ಎಂಬ ವಿಳಾಸವನ್ನು ನಮೂದಿಸಿದ್ದ. ಆತ ಕಾಬೂಲ್‌ಗೆ ತೆರಳುತ್ತಿದ್ದನು.
೧. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದಾಗ, ಮೊಹಮ್ಮದ್ ಖಾನ್‌ನ ಮಾತುಕತೆಯ ಶೈಲಿಯು ಅಧಿಕಾರಿಗಳ ಗಮನ ಸೆಳೆಯಿತು. ಆತನ ಮಾತಿನಲ್ಲಿ ಮರಾಠಿ ಭಾಷೆಯ ಪ್ರಭಾವ ಕಂಡುಬರಲಿಲ್ಲ.
೨. ಅಧಿಕಾರಿಗಳು ಖಾನ್‌ನನ್ನು ‘ಮಹಾರಾಷ್ಟ್ರದ ರಾಜಧಾನಿ ಯಾವುದು?’, ‘ಮುಂಬಯಿನ ಪ್ರಸಿದ್ಧ ಕಡಲತೀರದ ಹೆಸರನ್ನು ಹೇಳಿ?’, ‘ಗಣೇಶೋತ್ಸವವನ್ನು ಯಾವ ರಾಜ್ಯದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ?’ ಎಂದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು; ಆದರೆ ಆತನಿಗೆ ಈ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.
೩. ಆತನನ್ನು ಇನ್ನಷ್ಟು ವಿಚಾರಣೆ ನಡೆಸಿದಾಗ, ಆತ ಅಫ್ಘಾನಿಸ್ತಾನದವನು ಎಂಬುದು ದೃಢಪಟ್ಟಿತು. ನಂತರ ಆತನನ್ನು ಬಂಧಿಸಿ, ಆತ ನಕಲಿ ಪಾಸ್‌ಪೋರ್ಟ್ ಅನ್ನು ಎಲ್ಲಿಂದ ಪಡೆದನು ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!