ಮಲೇಷ್ಯಾದಲ್ಲಿ ನಮಾಜಪಠಣ ಮಾಡದಿದ್ದರೆ 2 ವರ್ಷ ಜೈಲುಶಿಕ್ಷೆ! Malaysia Friday Namaz Jail Fine

ಕುವಾಲಾಲಂಪುರ (ಮಲೇಷ್ಯಾ) – ಇಲ್ಲಿನ ತೆರೆಂಗಾನೂ ರಾಜ್ಯದಲ್ಲಿ ಕಟ್ಟರ ‘ಪ್ಯಾನ್-ಮಲೇಷ್ಯನ್ ಇಸ್ಲಾಮಿಕ್ ಪಾರ್ಟಿ’ಯ (ಅಖಿಲ ಮಲೇಷ್ಯಾ ಇಸ್ಲಾಮಿಕ್ ಪಕ್ಷ – ‘ಪಿ.ಎ.ಎಸ್‌.’ನ) ಸರಕಾರವಿದೆ. ಇಲ್ಲಿ ವಿರೋಧ ಪಕ್ಷವೇ ಅಸ್ತಿತ್ವದಲ್ಲಿ ಇಲ್ಲ; ಏಕೆಂದರೆ ಎಲ್ಲ 32 ಶಾಸಕರು ಇದೇ ಪಕ್ಷದವರು ಆಗಿದ್ದಾರೆ. ಶರೀಯತ್ ಅನ್ನು ಜಾರಿಗೆ ತರಲು ಆಗ್ರಹಿಸುವ ಈ ಪಕ್ಷವು ನಾಗರಿಕರು ಶುಕ್ರವಾರದ ನಮಾಜ್ ಮಾಡುವುದನ್ನು ಮರೆತರೆ ಅಥವಾ ಮಾಡದಿದ್ದರೆ ಅವರಿಗೆ 2 ವರ್ಷ ಜೈಲು ಅಥವಾ 3 ಸಾವಿರ ರಿಂಗಿಟ್ (62 ಸಾವಿರ ರೂಪಾಯಿ) ದಂಡ ಅಥವಾ ಎರಡನ್ನೂ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಈ ಕಾನೂನಿನ ಅನುಷ್ಠಾನದ ಅಧಿಕಾರ ಸಾರ್ವಜನಿಕ ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ಇರುತ್ತದೆ ಎಂದು ಸರಕಾರ ಹೇಳಿದೆ.

ತೆರೆಂಗಾನೂ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದು, ಇಲ್ಲಿನ 12 ಲಕ್ಷ ಜನಸಂಖ್ಯೆಯಲ್ಲಿ ಶೇ.97 ಕ್ಕಿಂತ ಹೆಚ್ಚು ಜನರು ಮುಸಲ್ಮಾನರಾಗಿದ್ದಾರೆ. ಇದರ ಮೊದಲು ಕೂಡ ನಮಾಜ್ ಮಾಡದವರಿಗೆ ಶಿಕ್ಷೆ ವಿಧಿಸುವ ಕಾನೂನು ಇತ್ತು. ಸತತ 3 ಶುಕ್ರವಾರಗಳ ನಮಾಜ್‌ ಗೆ ಹಾಜರಾಗದವರಿಗೆ ಗರಿಷ್ಠ 6 ತಿಂಗಳು ಜೈಲು ಅಥವಾ 1 ಸಾವಿರ ರಿಂಗಿಟ್ (ಸುಮಾರು 20,606 ರೂಪಾಯಿ) ದಂಡ ಒಳಗೊಂಡಿತ್ತು. ಮಲೇಷ್ಯಾದ 13 ರಾಜ್ಯಗಳಲ್ಲಿ 4 ರಾಜ್ಯಗಳಲ್ಲಿ ‘ಪಿ.ಎ.ಎಸ್‌.’ ಸರಕಾರವಿದೆ.

ಇಸ್ಲಾಂ ಅನ್ನು ಉಳಿಸಲು ಕಠಿಣ ಶಿಕ್ಷೆಯ ನಿಯಮ!

ತೆರೆಂಗಾನೂ ರಾಜ್ಯ ವಿಧಾನಸಭೆಯ ಸದಸ್ಯ ಮಹಮ್ಮದ್ ಖಲೀಲ್ ಹಾದಿ ಮಾತನಾಡಿ, ಇಸ್ಲಾಂ ಧರ್ಮವನ್ನು ಉಳಿಸಲು ಕೊನೆಯ ಉಪಾಯವಾಗಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು. ಶುಕ್ರವಾರದ ನಮಾಜ್ ಮುಸಲ್ಮಾನರಲ್ಲಿ ಒಂದು ಧಾರ್ಮಿಕ ಸಂಕೇತವಾಗಿದೆ ಎಂದು ಹೇಳಿದರು.