ಪೀಡಿತರಿಗೆ ನ್ಯಾಯ ನೀಡುವ ವಿವಿಧ ಉಚ್ಚ ನ್ಯಾಯಾಲಯಗಳ ಮತ್ತು ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳು !

೧. ಕಥಿತ ಧಾರ್ಮಿಕ ಭಾವನೆಗಳಿಗೆ ನೋಯಿಸಿದ ಆರೋಪದ ಪ್ರಕರಣದಲ್ಲಿ ಮತಾಂಧನಿಂದ ೮೦ ವರ್ಷದ ವ್ಯಕ್ತಿಯ ವಿರುದ್ಧ ದೂರು ದಾಖಲು

ಶ್ರೀ ಹರಿ ನಂದನ ಸಿಂಹ ಎಂಬ ೮೦ ವರ್ಷದ ವೃದ್ಧರು ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಕಾಗದಪತ್ರಗಳನ್ನು ಕೇಳಿದ್ದರು. ಅದರಲ್ಲಿನ ಭಾಷಾಂತರ ಸರಿಯಿಲ್ಲ ಎಂಬ ಕಾರಣಕ್ಕೆ ಕಚೇರಿ ಯಲ್ಲಿದ್ದ ಮತಾಂಧ ಸಿಬ್ಬಂದಿಯೊಂದಿಗೆ ಅವರ ವಾಗ್ವಾದ ನಡೆಯಿತು. ಆ ಸಮಯದಲ್ಲಿ ಶ್ರೀ. ಸಿಂಹ ಅವರು ಆತನಿಗೆ ”ಮಿಯಾ ತಿಯಾ ಪಾಕಿಸ್ತಾನಿ’’ ಇತ್ಯಾದಿ ಎಂದಿದ್ದರು ಎನ್ನಲಾಗಿದೆ. ನಂತರ, ಆ ಮತಾಂಧ ವ್ಯಕ್ತಿ ತಕ್ಷಣ ‘ಸರಕಾರಿ ನೌಕರನ ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದನು. ಪೊಲೀಸ್‌ ಮತ್ತು ಆಡಳಿತವು ಮತಾಂಧರ ಸೇವೆಗಾಗಿ ತಯಾರಾಗಿದೆ ಎಂಬಷ್ಟು ತತ್ಪರತೆಯಿಂದ ಶ್ರೀ. ಸಿಂಹ ಇವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಹರಿ ನಂದನ ಸಿಂಹ ಅವರ ಮೇಲಿನ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ರದ್ದು ಪಡಿಸುವುದು

ಈ ಪ್ರಕರಣವನ್ನು ರದ್ದುಗೊಳಿಸಲು ಶ್ರೀ. ಸಿಂಹರು ಜಾರ್ಖಂಡ್‌ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. ಸಹಜವಾಗಿಯೇ ಅಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಅದರಿಂದ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರು. ಸರ್ವೋಚ್ಚ ನ್ಯಾಯಾಲಯವು ಅವರ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸಿತು ಮತ್ತು ಪ್ರಕರಣವನ್ನು ರದ್ದುಗೊಳಿಸಿತು. ಈ ಪ್ರಕರಣವನ್ನು ರದ್ದುಗೊಳಿಸುವಾಗ, ಸರ್ವೋಚ್ಚ ನ್ಯಾಯಾಲಯವು ‘ಯಾರಾದರೂ ಮುಸಲ್ಮಾನ ವ್ಯಕ್ತಿಯನ್ನು ‘ಮಿಯಾ ತಿಯಾ ಪಾಕಿಸ್ತಾನಿ’ ಎಂದು ಹೇಳಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿತು. ಹೀಗೆ ಅವರು ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿದರು. ಸರ್ವಧರ್ಮ ಸಮಭಾವದ ಮಾತುಗಳನ್ನು ಆಡುವ ಪೊಲೀಸರು ಮೊದಲೇ ಈ ವೃದ್ಧ ಹಿಂದೂ ವ್ಯಕ್ತಿಗೆ ಸಹಾಯ ಮಾಡಿದ್ದರೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ, ಅವರಿಗೆ ಈ ವಯಸ್ಸಿನಲ್ಲಿ ಇಷ್ಟು ಕಷ್ಟ ಅನುಭವಿಸಬೇಕಾಗಿರುತ್ತಿರಲಿಲ್ಲ. ‘ಲವ್‌ ಜಿಹಾದ್‌’ಗೆ ಸಿಲುಕಿದ ನೊಂದ ಕುಟುಂಬಗಳು, ಗೋರಕ್ಷಕರು ಮತ್ತು ಗಲಭೆಗಳಲ್ಲಿ ಗಾಯಗೊಂಡ ಹಿಂದೂಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮತಾಂಧರ ಸಹಾಯಕ್ಕೆ ಧಾವಿಸುವ ಪೊಲೀಸರು ಮತ್ತು ಆಡಳಿತ ಹಿಂದೂಗಳಿಗೆ ಸಹಾಯ ಮಾಡುವಾಗ ಹಿಂದೆ ಸರಿಯುತ್ತಾರೆ.

೩. ವೃದ್ಧ ಮನೆಮಾಲೀಕರಿಗೆ ಕಿರುಕುಳ ನೀಡಿದ ಕಾರಣಕ್ಕೆ ಉತ್ತರಪ್ರದೇಶದ ಉಚ್ಚ ನ್ಯಾಯಾಲಯದಿಂದ ಬಾಡಿಗೆದಾರರಿಗೆ ೧೫ ಲಕ್ಷ ರೂ. ದಂಡ

ಉತ್ತರಪ್ರದೇಶದಲ್ಲಿ ಬಾಡಿಗೆಗೆ ನೀಡಿದ ಮನೆಯನ್ನು ಖಾಲಿ ಮಾಡಿಸಿಕೊಳ್ಳಲು ಒಬ್ಬ ಮನೆಮಾಲೀಕರು ವೊಹ್ರಾ ಸಹೋದರರ ವಿರುದ್ಧ ೧೯೭೦ ರಲ್ಲಿ ದಾವೆ ಹೂಡಿದ್ದರು. ೧೯೭೦ ರಲ್ಲಿ ದಾಖಲಾದ ಈ ಪ್ರಕರಣ ಉತ್ತರಪ್ರದೇಶದ ಉಚ್ಚ ನ್ಯಾಯಾಲಯವನ್ನು ತಲುಪಲು ೪೫ ವರ್ಷಗಳು ಬೇಕಾಯಿತು. ವೊಹ್ರಾ ಸಹೋದರರು ವಿವಿಧ ರೀತಿಯಲ್ಲಿ ದಾವೆಯ ಮಧ್ಯಂತರ ಆದೇಶಗಳನ್ನು ಮೇಲಿನ ನ್ಯಾಯಾಲಯಗಳಿಗೆ ತೆಗೆದುಕೊಂಡು ಹೋದರು. ಈ ಅವಧಿ ಯಲ್ಲಿ ಮನೆಮಾಲೀಕರ ನಿಧನವಾಯಿತು. ಮನೆಮಾಲೀಕರ ಮರಣಾನಂತರ ಉಚ್ಚ ನ್ಯಾಯಾಲಯವು ಅವರ ಪತ್ನಿಯ ವಾದ ಸರಿ ಎಂದು ಅರಿತುಕೊಂಡಿತು. ಆದ್ದರಿಂದ, ಉಚ್ಚ ನ್ಯಾಯಾಲಯವು ವೊಹ್ರಾ ಸಹೋದರರ ‘ಅಪೀಲ್‌ ರಿವಿಜನ್’ (ಪುನರ್‌ಪರಿಶೀಲನಾ ಅರ್ಜಿ) ಅನ್ನು ತಿರಸ್ಕರಿಸಿತು ಮತ್ತು ಒಬ್ಬ ವೃದ್ಧ ವ್ಯಕ್ತಿಗೆ ೪೫ ವರ್ಷಗಳ ಕಾಲ ಕಿರುಕುಳ ನೀಡಿದ ಕಾರಣಕ್ಕೆ ಅವರಿಗೆ ೧೫ ಲಕ್ಷ ರೂಪಾಯಿಗಳ ದಂಡ ವಿಧಿಸಿತು.

೪. ವಕ್ಫ್ ಬೋರ್ಡ್ ವಿರುದ್ಧ ಗುರುದ್ವಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಮಾಧಾನಕರ ತೀರ್ಪು

ಈ ಪ್ರಕರಣ ೧೯೮೦ ರ ದಶಕದ್ದಾಗಿದೆ. ಗುರುದ್ವಾರದ ಆಸ್ತಿ ಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ವಿಷಯವನ್ನು ಗುರುದ್ವಾರ ಮಂಡಳಿಯು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆ ಸಮಯದಲ್ಲಿ ಉಚ್ಚ ನ್ಯಾಯಾಲಯವು ವಕ್ಫ್ ಬೋರ್ಡಿನ ವಾದವನ್ನು ಒಪ್ಪಿಕೊಂಡಿತ್ತು. ದೆಹಲಿ ವಕ್ಫ್ ಬೋರ್ಡ್ ಶಾಹದರಾದ ಓಲ್ಡನಪುರದಲ್ಲಿರುವ ಮಸೀದಿಯ ಆಸ್ತಿಯನ್ನು ವಶಪಡಿಸಿಕೊಳ್ಳಲು ಪ್ರತಿವಾದಿ ಹೀರಾ ಸಿಂಹ (ಈಗ ದಿವಂಗತ) ವಿರುದ್ಧ ದಾವೆ ಹೂಡಿತ್ತು. ವಕ್ಫ್ ಬೋರ್ಡ್ ಇದು ತನ್ನ ಆಸ್ತಿ ಮತ್ತು ಇದು ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ ಎಂದು ವಾದಿಸಿತ್ತು. ಇದನ್ನು ಪ್ರತಿವಾದಿಯು ಪ್ರಶ್ನಿಸಿದನು. ಆತನು ‘ಟ್ರಯಲ್‌ ಕೋರ್ಟ್‌’ಗೆ ಈ ಆಸ್ತಿಯನ್ನು ಅವನ ಮಾಲೀಕ (ಮಹಮ್ಮದ್‌ ಅಹಸಾನ) ೧೯೫೩ ರಲ್ಲಿ ಮಾರಾಟ ಮಾಡಿದ್ದರು ಮತ್ತು ಆ ಆಸ್ತಿಯನ್ನು ಗುರುದ್ವಾರ ನಿರ್ವಹಣಾ ಸಮಿತಿಯಿಂದ ನಿರ್ವಹಿಸಲ್ಪಟ್ಟ ಗುರುದ್ವಾರವಾಗಿ ಬಳಸಲಾಗುತ್ತಿತ್ತು ಎಂದು ಹೇಳಿದನು. ಬೋರ್ಡ್ ಸಲ್ಲಿಸಿದ್ದ ಹಿಂದಿನ ಎರಡು ದಾವೆಗಳನ್ನು ಕ್ರಮವಾಗಿ ೨೩.೧.೧೯೭೦ ಮತ್ತು ೨೨.೮.೧೯೭೮ ರಂದು ಹಿಂಪಡೆಯಲಾಗಿತ್ತು; ಆದರೆ ‘ಟ್ರಯಲ್‌ ಕೋರ್ಟ್‌’ ವಕ್ಫ್ ಬೋರ್ಡ್ ಪರವಾಗಿ ತೀರ್ಪು ನೀಡಿತು. ಮೊದಲ ಮೇಲ್ಮನವಿ ನ್ಯಾಯಾಲಯವು ೧೯೮೯ ರಲ್ಲಿ ಅವರ ತೀರ್ಮಾನಗಳನ್ನು ಅನುಮೋದಿಸಿತು. ಗುರುದ್ವಾರವು ಉಚ್ಚ ನ್ಯಾಯಾಲಯದಲ್ಲಿ ಎರಡನೇ ಮೇಲ್ಮನವಿ ಸಲ್ಲಿಸಿದಾಗ, ಆ ದಾವೆಯನ್ನು ತಿರಸ್ಕರಿಸಲಾಯಿತು; ಏಕೆಂದರೆ ಬೋರ್ಡ್ ಈ ಆಸ್ತಿಯು ವಕ್ಫ್ ಆಸ್ತಿ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿತ್ತು.

೪ ಅ. ಗುರುದ್ವಾರ ಬೋರ್ಡ್ ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಜಯ

‘ಪ್ರಾಚೀನ ಕಾಲದಿಂದಲೂ ವಕ್ಫ್ ಆಸ್ತಿಯಾಗಿ ಶಾಶ್ವತ ಸಮರ್ಪಣೆ/ಬಳಕೆದಾರ ಎಂದು ಸಾಬೀತಾಗಿಲ್ಲ ಮತ್ತು ಅದಕ್ಕೆ ದಾಖಲೆ ಸಹ ಸಿಗುವುದಿಲ್ಲ. ಗುರುದ್ವಾರವು ೧೯೪೭-೪೮ ರಿಂದ ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಒಪ್ಪಿತವಾಗಿದೆ,’ ಎಂದು ದೆಹಲಿ ಉಚ್ಚ ನ್ಯಾಯಾಲಯವು ಗಮನಿಸಿದೆ. ಈ ಆದೇಶದಿಂದ ಗುರುದ್ವಾರ ಮಂಡಳಿಯು ೨೦೧೨ ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಯಿತು. ಸರ್ವೋಚ್ಚ ನ್ಯಾಯಾಲಯವು ಮೂಲ ಮಾಲೀಕರು ಸ್ವತಃ ಈ ಭೂಮಿಯನ್ನು ಒಬ್ಬ ಸಿಖ್‌ ವ್ಯಕ್ತಿಗೆ ಮಾರಾಟ ಪತ್ರದ ಮೂಲಕ ಮಾರಾಟ ಮಾಡಿದ್ದರು ಎಂದು ಗಮನಿಸಿತು. ಅದನ್ನು ಅವರು ಗುರುದ್ವಾರಕ್ಕಾಗಿ ಬಳಸಲು ನಿರ್ಧರಿಸಿದರು. ಅದನ್ನು ಆಕ್ಷೇಪಿಸುವ ವಕ್ಫ್ ಬೋರ್ಡಿನ ಎರಡು-ಮೂರು ದಾವೆಗಳನ್ನು ತಿರಸ್ಕರಿಸಲಾಯಿತು. ಹಾಗಾದರೆ, ಹೊಸದಾಗಿ ಅಂತಹ ದಾವೆ ಹೇಗೆ ಬರಲು ಸಾಧ್ಯ ? ಈ ವಿಷಯವು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆಯಾಯಿತು ಮತ್ತು ಗುರುದ್ವಾರ ಮಂಡಳಿಯ ವಾದವನ್ನು ಒಪ್ಪಲಾಯಿತು. ೭೭ ವರ್ಷಗಳ ಹಿಂದೆ ಗುರುದ್ವಾರ ಮಂಡಳಿಯ ಪರವಾಗಿ ಖರೀದಿ ಪತ್ರವಿದ್ದರೂ ಅದು ಇಷ್ಟು ಕಷ್ಟ ಸಹಿಸಬೇಕಾಯಿತು. ಅದರ ಪರಿಹಾರವಾಗಿ ವಕ್ಫ್ ಬೋರ್ಡನಿಂದ ೨೫ ಲಕ್ಷ ರೂಪಾಯಿಗಳ ದಂಡ ವಿಧಿಸುವುದು ನಿರೀಕ್ಷಿತವಾಗಿತ್ತು. ಈ ರೀತಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮಾಡಿದ ಕಾನೂನು ತಿದ್ದುಪಡಿಗಳು ಮುಸ್ಲಿಮೇತರ ಧರ್ಮ ಅಥವಾ ಪಂಥಗಳಿಗೆ ಬಾಧಕವಾಗುತ್ತಿವೆ ಎನ್ನುವುದು ಖಚಿತ !

ಶ್ರೀಕೃಶಾರ್ಪಣಮಸ್ತು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೫.೬.೨೦೨೫)

ನ್ಯಾಯದಾನದ ವಿಳಂಬದ ಬಗ್ಗೆ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಖೇದ

ಪ್ರಕರಣಗಳ ತೀರ್ಪು ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮುಂಬಯಿ ಉಚ್ಚ ನ್ಯಾಯಾಲಯದ ವಿದ್ಯಮಾನ ನ್ಯಾಯಮೂರ್ತಿಗಳು ಇತ್ತೀಚೆಗೆ ವಿಷದ ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ಮಾತನಾಡುತ್ತಾ, ಅವರು ‘ನಾನು ೧೨-೧೫ ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನ್ಯಾಯಾಲಯಕ್ಕೆ ಹೋಗುವ ಮೊದಲು ಮತ್ತು ನ್ಯಾಯಾಲಯದಿಂದ ಮನೆಗೆ ಬಂದ ನಂತರ ನಿವಾಸದಲ್ಲಿಯೂ ೩-೪ ಗಂಟೆಗಳ ಕಾಲ ಗೃಹಪಾಠ ಮಾಡಬೇಕಾಗುತ್ತದೆ. ತೀರ್ಪುಗಳನ್ನು ಪರಿಶೀಲಿಸುವುದು, ಮರುದಿನ ಬರಲಿರುವ ಪ್ರಕರಣಗಳನ್ನು ಓದುವುದು, ಅದಕ್ಕೆ ಸಂಬಂಧಿಸಿದ ನಿಯಮಗಳು, ಅಧಿನಿಯಮಗಳು, ಸುತ್ತೋಲೆಗಳನ್ನು ಓದುವುದು, ಹಾಗೆಯೇ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಓದುವುದು ಇತ್ಯಾದಿಗಳಲ್ಲಿ ಬಹಳಷ್ಟು ಸಮಯ ಹೋಗುತ್ತದೆ. ಆದ್ದರಿಂದ, ನ್ಯಾಯದಾನದಲ್ಲಿ ವಿಳಂಬವಾಗುತ್ತದೆ’ ಎಂದು ಹೇಳಿದರು. ವಾಸ್ತವದಲ್ಲಿ, ಸರಕಾರ, ಪೊಲೀಸರು, ಸ್ಥಳೀಯ ಸ್ವಾಯತ್ತ ಸಂಸ್ಥೆಗಳು, ಸರಕಾರಿ ಇಲಾಖೆಗಳಿಂದ ನಾಗರಿಕರ ಮೇಲೆ ಅನ್ಯಾಯವಾಗುತ್ತದೆ. ಆದ್ದರಿಂದ, ಪ್ರತಿ ಸಣ್ಣ ಕಾರಣಕ್ಕೂ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಶಾಲಾ ಪ್ರವೇಶದಿಂದ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಪ್ರವೇಶದವರೆಗೆ, ಜನನ- ಮರಣ ಪ್ರಮಾಣಪತ್ರದಿಂದ, ಅದರಲ್ಲಿನ ತಿದ್ದುಪಡಿಗಳಿಗೂ ನ್ಯಾಯಾಲಯವನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ. ಅನೇಕ ಬಾರಿ ಸುಳ್ಳು ಅಪರಾಧಗಳಲ್ಲಿ ಸಿಲುಕಿಕೊಂಡಾಗ ಅದರಿಂದ ಮುಕ್ತರಾಗಲು ನ್ಯಾಯಾಲಯಕ್ಕೇ ಹೋಗಬೇಕಾಗುತ್ತದೆ. ಇದರಿಂದನ್ಯಾಯವ್ಯವಸ್ಥೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಬೀಳುತ್ತದೆ. ಇದರಲ್ಲಿ ಪ್ರಕರಣಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ಬಿಡದ ನ್ಯಾಯವಾದಿಗಳೂ ಜವಾಬ್ದಾರರಾಗಿದ್ದಾರೆ. ಆದ್ದರಿಂದ, ಪ್ರಕರಣಗಳ ತೀರ್ಪುಗಳು ಬೇಗ ಬರಲು ವ್ಯವಸ್ಥೆಯಲ್ಲಿ ಬದಲಾವಣೆ ಆಗುವುದು ಅವಶ್ಯಕವಾಗಿದೆ.