ಅಸ್ಸಾಂನ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಂದ ಕುರಾನ್ ಪಠಣ ಮಾಡಿಸುತ್ತಿರುವ ಘಟನೆ – Quran Teacher Dismissed

ಮುಖ್ಯೋಪಾಧ್ಯಾಯ ಜಹೆರುಲ್ ಇಸ್ಲಾಮ್ ಅಮಾನತು

ಬೊಂಗಾಯಿಗಾಂವ್ (ಅಸ್ಸಾಂ) – ಬೊಂಗಾಯಿಗಾಂವ್ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಹಿಂದೂ ಮಕ್ಕಳಿಂದ ಕುರಾನ್ ಪಠಣ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ವೈರಲ್ ಆದ ನಂತರ ಶಾಲೆಯ ಮುಖ್ಯೋಪಾಧ್ಯಾಯ ಜಹೆರುಲ್ ಇಸ್ಲಾಮ್ ಮತ್ತು ಶಾಲೆಯ ಮತ್ತೊಬ್ಬ ಸಿಬ್ಬಂದಿ ನಿರ್ಮಲ್ ಕುಮಾರ್ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ‘ಎಕ್ಸ್’ ಮೂಲಕ ಸ್ವತಃ ಮಾಹಿತಿ ನೀಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ. ನಮ್ಮ ಶಾಲೆಗಳಲ್ಲಿ ಯಾವುದೇ ರೀತಿಯ ಕಟ್ಟರತೆಯನ್ನು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ವಿಡಿಯೋದಲ್ಲಿ ವಿದ್ಯಾರ್ಥಿಗಳು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಕುರಾನ್ ಪಠಣ ಮಾಡುತ್ತಿರುವುದು ಕಾಣಿಸುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಈ ವಿಡಿಯೋ ವೈರಲ್ ಆದ ನಂತರ, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ತನಿಖೆಯಿಂದ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆಯ ಬದಲು ಕುರಾನ್ ಪಠಣ ಮಾಡಿರುವುದು ಕಂಡುಬಂದಿದೆ; ಆದರೆ, ನಂತರ ಇದು ಆಗಸ್ಟ್ 8 ರ ಘಟನೆ ಎಂದು ತಿಳಿದುಬಂದಿದೆ. ಯಾವುದೇ ಸರಕಾರಿ ಶಾಲೆಯ ಪ್ರಾರ್ಥನಾ ಸಭೆಯಲ್ಲಿ ಧಾರ್ಮಿಕ ಗ್ರಂಥಗಳ ಪಠಣಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಪಲ್ಲವಿ ಮೇಧಿ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರನ್ನು ಬಂಧಿಸಿ ಜೈಲಿಗೆ ಹಾಕಬೇಕು, ಆಗ ಮಾತ್ರ ಇತರಿಗೆ ಭಯ ಹುಟ್ಟುವುದು !