ಸಮಾಜ ಸುಧಾರಣೆ ಮತ್ತು ಬದಲಾವಣೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ! – : RSS Chief Mohan Bhagwat

ನವದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಎಷ್ಟು ಪುರುಷ ಸ್ವಯಂಸೇವಕರಿದ್ದಾರೋ ಅಷ್ಟೇ ಮಹಿಳಾ ಸ್ವಯಂಸೇವಕರೂ ಇದ್ದಾರೆ. ಅವರಲ್ಲಿ ಕೆಲವರು ಸ್ವಯಂಸೇವಕರ ತಾಯಂದಿರು, ಕೆಲವರು ಪತ್ನಿಯರು ಮತ್ತು ಕೆಲವರು ಸಹೋದರಿಯರು ಆಗಿದ್ದಾರೆ. ಸ್ವಯಂಸೇವಕರು ತಮ್ಮ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಏಕೆಂದರೆ ಅವರ ಕುಟುಂಬದ ಮಹಿಳೆಯರು ಈ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕು ಎಂದು ಬಯಸುತ್ತಾರೆ. ಸಮಾಜವನ್ನು ಬದಲಾಯಿಸಬೇಕಾದರೆ, ಜನಸಂಖ್ಯೆಯ ಅರ್ಧ ಭಾಗವನ್ನು ಹೊರಗಿಡಲು ಸಾಧ್ಯವಿಲ್ಲ. ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆ ತರಲು ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಹೇಳಿದ್ದಾರೆ. ಅವರು ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಸೇವಿಕಾ ಸಮಿತಿ ಜೊತೆ ಮಾತನಾಡಿದ ನಂತರ ನಾವು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ!

ಪ. ಪೂ. ಸರಸಂಘಚಾಲಕರು ಮಾತು ಮುಂದುವರೆಸುತ್ತಾ, ಸಂಘವು ಮಹಿಳಾ ಸಂಘಟನೆ ‘ರಾಷ್ಟ್ರೀಯ ಸೇವಿಕಾ ಸಮಿತಿ’ಯೊಂದಿಗೆ ಸಮಾಲೋಚನೆ ಮತ್ತು ಸಮನ್ವಯದ ನಂತರ ಅನೇಕ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಈ ಸಮಿತಿಯನ್ನು 1936 ರಲ್ಲಿ ಮಹಿಳೆಯರಿಗಾಗಿ ಸ್ಥಾಪಿಸಲಾಗಿದ್ದು, ಅವರು ಪುರುಷರಿಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾನಾಂತರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.