ಮಹಾರಾಷ್ಟ್ರದಲ್ಲಿ ಆಗಸ್ಟ್ 21 ರವರೆಗೆ ಧಾರಾಕಾರ ಮಳೆಯ ಎಚ್ಚರಿಕೆ! – IMD Maharashtra Rain Alert

ಮುಂಬಯಿ, ಕೊಲ್ಲಾಪುರ ಸೇರಿದಂತೆ 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಸೂಕ್ಷ್ಮ ಪ್ರದೇಶಗಳಲ್ಲಿ ‘ಎನ್‌ಡಿಆರ್‌ಎಫ್’ ಸಿದ್ಧ!

(ರೆಡ್ ಅಲರ್ಟ್ ಎಂದರೆ ಅತಿ ಜಾಗರೂಕತೆಯ ಎಚ್ಚರಿಕೆ, ಮತ್ತು ಆರೆಂಜ್ ಅಲರ್ಟ್ ಎಂದರೆ ಯಾವುದೇ ಕ್ಷಣದಲ್ಲಿ ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆ ಇರುವುದು)

ಮುಂಬಯಿ – ಭಾರತೀಯ ಹವಾಮಾನ ಇಲಾಖೆಯು ಆಗಸ್ಟ್ 21 ರವರೆಗೆ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ. ಮುಂಬಯಿ, ರಾಯಗಡ, ಪುಣೆ ಘಾಟ್, ಸಾತಾರಾ ಘಾಟ್, ರತ್ನಾಗಿರಿ ಮತ್ತು ಕೊಲ್ಲಾಪುರ ಘಾಟ್ ಪ್ರದೇಶಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಪಾಲಘರ್, ಠಾಣೆ, ಸಿಂಧುದುರ್ಗ, ಜಳಗಾಂವ್, ಛತ್ರಪತಿ ಸಂಭಾಜಿನಗರ, ಜಾಲನಾ, ಬೀಡ್, ಲಾತೂರ್, ಅಮರಾವತಿ, ಚಂದ್ರಪುರ ಮತ್ತು ಗಡಚಿರೋಲಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ‘ರೆಡ್ ಅಲರ್ಟ್’ ಘೋಷಿಸಲಾದ ಪ್ರದೇಶಗಳಲ್ಲಿ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್.) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌.ಡಿ.ಆರ್.ಎಫ್.) ನಿಯೋಜಿಸಲಾಗಿತ್ತು.

ಆಗಸ್ಟ್ 18 ರಂದು ಬೆಳಿಗ್ಗೆ 11 ಗಂಟೆಯಿಂದ ಕಳೆದ 24 ಗಂಟೆಗಳಲ್ಲಿ, ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿರುವ ಪ್ರಮಾಣ: ರತ್ನಾಗಿರಿಯಲ್ಲಿ 128.9 ಮಿ.ಮೀ., ಸಿಂಧುದುರ್ಗದಲ್ಲಿ 101 ಮಿ.ಮೀ., ಮುಂಬಯಿ ಉಪನಗರದಲ್ಲಿ 99.4 ಮಿ.ಮೀ., ರಾಯಗಡದಲ್ಲಿ 43.5 ಮಿ.ಮೀ. ಮತ್ತು ಮುಂಬಯಿ ನಗರದಲ್ಲಿ 38.4 ಮಿ.ಮೀ. ಆಗಿದೆ.