‘ದಿ ಬಂಗಾಲ್ ಫೈಲ್ಸ್’ ಚಲನಚಿತ್ರದ ಟ್ರೈಲರ್ (ಜಾಹೀರಾತು) ಬಿಡುಗಡೆ – The Bengal Files Trailer Release

ಕೋಲಕಾತಾ (ಬಂಗಾಳ) – ‘ದಿ ತಾಷ್ಕಂದ್ ಫೈಲ್ಸ್ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರಗಳ ನಂತರ, ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅವರ ಹೊಸ ಚಿತ್ರ ‘ದಿ ಬಂಗಾಲ್ ಫೈಲ್ಸ್’ ನ ಟ್ರೈಲರ್(ಜಾಹೀರಾತು) ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ 1946 ರಲ್ಲಿ ಬಂಗಾಳದಲ್ಲಿ ಮುಸಲ್ಮಾನರು ನಡೆಸಿದ ಗಲಭೆಯ ಭೀಕರ ಚಿತ್ರಣವನ್ನು ತೋರಿಸಲಾಗಿದೆ. ಈ ಚಲನಚಿತ್ರವು ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ.

ರಕ್ತರಂಜಿತ ದೃಶ್ಯಗಳಿಂದ ತುಂಬಿದ ಟ್ರೈಲರ್!(ಜಾಹೀರಾತು)

3 ನಿಮಿಷ 32 ಸೆಕೆಂಡುಗಳ ಈ ಟ್ರೈಲರ್ ಗಲಭೆಗಳು ಮತ್ತು ಹತ್ಯೆಗಳ ಭೀಕರ ದೃಶ್ಯಗಳಿಂದ ತುಂಬಿದೆ. ಈ ಚಿತ್ರದಲ್ಲಿಯೂ ವಿವೇಕ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಬಳಸಿದ ವಿಧಾನವನ್ನೇ ಬಳಸಿದ್ದಾರೆ. ಒಂದು ಕಡೆ ಸ್ವಾತಂತ್ರ್ಯ ಪೂರ್ವದ 1946 ರ ಗಲಭೆಯ ಘಟನೆಯನ್ನು ತೋರಿಸಿದರೆ, ಇನ್ನೊಂದು ಕಡೆ ಪ್ರಸ್ತುತ ಕಾಲದಲ್ಲಿ ಆ ಘಟನೆಗಳ ತನಿಖೆ ಮತ್ತು ಪರಿಶೀಲನೆಯನ್ನು ತೋರಿಸಲಾಗಿದೆ. ಟ್ರೈಲರ್‌ನಲ್ಲಿ ಮೋಹನದಾಸ ಗಾಂಧಿ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಪಾತ್ರಗಳೂ ಕಾಣಿಸಿಕೊಳ್ಳುತ್ತವೆ. ನಟ ಅನುಪಮ್ ಖೇರ್ ಅವರು ಗಾಂಧಿಯವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಕೋಲಕಾತಾ ಮತ್ತು ನೋಆಖಾಲಿ (ಈಗ ಬಾಂಗ್ಲಾದೇಶದಲ್ಲಿ ಇರುವ ಭಾಗ) ನಲ್ಲಿ ನಡೆದ ಹಿಂದೂಗಳ ನರಮೇಧದ ಚಿತ್ರಣ!

ಈ ಚಿತ್ರದಲ್ಲಿ 1946 ರಲ್ಲಿ ನಡೆದ ಕೋಲಕಾತಾ ಮತ್ತು ನೋಆಖಾಲಿ (ಈಗಿನ ಬಾಂಗ್ಲಾದೇಶದ ಭಾಗ) ನರಮೇಧದಂತಹ ಘಟನೆಗಳನ್ನು ಚಿತ್ರಿಸಲಾಗಿದೆ. ಚಲನಚಿತ್ರ ಘೋಷಣೆಯಾದಾಗಿನಿಂದಲೂ ಅವರಿಗೆ ಬೆದರಿಕೆಗಳು ಬರುತ್ತಿವೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ.