
ಮುಂಬಯಿ – ಈ ವರ್ಷ ಗಣೇಶೋತ್ಸವವನ್ನು ‘ರಾಜ್ಯೋತ್ಸವ’ವನ್ನಾಗಿ ಆಚರಿಸಲು ಸರಕಾರದ ವ್ಯವಸ್ಥೆ ಸಿದ್ಧವಾಗಿದೆ. ಇದರ ಅಡಿಯಲ್ಲಿ, ಗಣೇಶೋತ್ಸವ ಮಂಡಳಿಗಳು ಮತ್ತು ಮನೆಯ ‘ಗಣೇಶ ಅಲಂಕಾರ ಸ್ಪರ್ಧೆ’, ವಿವಿಧ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ, ಡ್ರೋನ್ ಪ್ರದರ್ಶನಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ 11 ಕೋಟಿ ರೂಪಾಯಿಗಳ ನಿಧಿಯನ್ನು ಒದಗಿಸಲಾಗಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೇಲಾರ್ ತಿಳಿಸಿದರು.
“ಮುಂಬಯಿ ಮತ್ತು ದೊಡ್ಡ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಗಣಪತಿಯ ಸಂಪ್ರದಾಯ ಅಥವಾ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಚಲನಚಿತ್ರಗಳಿಗೆ ವಿಶೇಷ ಗೌರವವನ್ನು ನೀಡಲಾಗುವುದು” ಎಂದು ಅವರು ಹೇಳಿದರು. ಪು.ಲ. ದೇಶಪಾಂಡೆ ಕಲಾ ಅಕಾಡೆಮಿ ಮತ್ತು ಸಾಂಸ್ಕೃತಿಕ ನಿರ್ದೇಶನಾಲಯದ ವತಿಯಿಂದ ಉತ್ಸವವನ್ನು ಯೋಜಿಸಲಾಗುವುದು. ಉತ್ಸವದ ಲೋಗೋವನ್ನು ಸಹ ಅನಾವರಣಗೊಳಿಸಲಾಗುವುದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!