|

ಚೆನ್ನೈ (ತಮಿಳುನಾಡು), 16 ಆಗಸ್ಟ್ (ಸುದ್ದಿ) – ಇಲ್ಲಿ ವಿಶ್ವ ವಾರಕರಿ ಸಂಸ್ಥಾನವು ಸಂತ ಜ್ಞಾನೇಶ್ವರ ಮಹಾರಾಜರ 750ನೇ ಜಯಂತಿಯನ್ನು ಭಾವಪೂರ್ಣ ಸಮಾರಂಭದ ಮೂಲಕ ಆಚರಿಸಿತು. ಈ ಸಮಾರಂಭಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಜೊತೆಗೆ, ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ 750 ವಾರಕರಿಗಳು ಮಾವುಲಿ ಅವರ 750ನೇ ಜಯಂತಿಯ ನಿಮಿತ್ತ ಜ್ಞಾನೇಶ್ವರಿಯ ಪಠಣ ಮಾಡಿದರು. ಈ ಸಮಾರಂಭವು ನಗರದ ಆಡ್ಯಾರ್ ಪ್ರದೇಶದಲ್ಲಿರುವ ಶ್ರೀ ಆನಂದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ನಡೆಯಿತು.

ಸಮಾರಂಭದ ಶುಭಾರಂಭವು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಾಗೆಯೇ ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರ ಮಾತೋಶ್ರೀ ಮೀನಾಲೋಚನಿ, ಡಾ. ಶ್ರೀ ರಘುನಾಥದಾಸ ಮಹಾರಾಜ ಮತ್ತು ಅವರ ಪತ್ನಿ ಸೌ. ಶುಭಲಕ್ಷ್ಮಿ ಅವರು ದೀಪ ಬೆಳಗಿಸುವ ಮೂಲಕ ಮಾಡಿದರು. ಈ ಸಂದರ್ಭದಲ್ಲಿ ‘ವಿಶ್ವ ವಾರಕರಿ ಸಂಸ್ಥಾನ’ದ ಉತ್ತರಾಧಿಕಾರಿಗಳಾದ ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರು ರಚಿಸಿರುವ ‘ರಾಜವಿದ್ಯಾ’ (ಜ್ಞಾನೇಶ್ವರಿಯ 9ನೇ ಅಧ್ಯಾಯದ ಭಾಷ್ಯ) ಮತ್ತು ‘ಜ್ಞಾನೋತ್ತರ ಭಕ್ತಿ’ (ಸಂತ ಜ್ಞಾನೇಶ್ವರ ಮಹಾರಾಜರ ಬೋಧನೆಗಳ ರಹಸ್ಯ) ಎಂಬ ಗ್ರಂಥಗಳನ್ನು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಆರ್.ಎನ್. ರವಿ ಅವರು ಬಿಡುಗಡೆ ಮಾಡಿದರು. ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಸಂತ ಜ್ಞಾನೇಶ್ವರ ಮಹಾರಾಜರ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.

‘ವಿಶ್ವ ವಾರಕರಿ ಸಂಸ್ಥಾನ’ದ ಕಾರ್ಯ!
ವಿಶ್ವ ವಾರಕರಿ ಸಂಸ್ಥಾನವು ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದ ಭಕ್ತಿ ಪರಂಪರೆಯನ್ನು ವಿಶ್ವಾದ್ಯಂತ ಪ್ರಚಾರ ಮಾಡುತ್ತಿದೆ. ಇದರ ಅಡಿಯಲ್ಲಿ, ಸಂಸ್ಥಾನವು ತಮಿಳುನಾಡು ರಾಜ್ಯದ 15 ಸಾವಿರ ಜನರಿಗೆ ಅಭಂಗ ಮತ್ತು ಜ್ಞಾನೇಶ್ವರಿಯ ಪಠಣದ ತರಬೇತಿ ನೀಡಿದೆ. ವಿಶ್ವಾದ್ಯಂತ 5 ಲಕ್ಷ ತಮಿಳು ಭಕ್ತರು ಈ ಸಂಸ್ಥಾನದ ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”