ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಯಾಗಿ ಬಿಡುಗಡೆಯಾದ ಶ್ರೀ. ಸಮೀರ್ ಕುಲಕರ್ಣಿ ಅವರ ಸಂದರ್ಶನ!

ಚಿಂಚವಾಡ (ಪುಣೆ ಜಿಲ್ಲೆ), ಆಗಸ್ಟ್ 15 (ಸುದ್ದಿ) – 2008ರಲ್ಲಿ ಮಾಲೆಗಾಂವ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಇದಕ್ಕೂ ಮೊದಲು 2006ರಲ್ಲಿಯೂ ಸ್ಫೋಟ ನಡೆದಿತ್ತು. ಇದು ಆಗಿನ ಸರಕಾರದ ವೈಫಲ್ಯವಾಗಿತ್ತು. 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ನಂತರ ಮರುದಿನ ಆಗಿನ ಗೃಹಮಂತ್ರಿಗಳು ಘಟನಾ ಸ್ಥಳಕ್ಕೆ ಹೋದಾಗ, ಅಲ್ಲಿಯೂ 56 ಬಾರಿ ಗುಂಡು ಹಾರಿಸುವ ಘಟನೆ ನಡೆದಿತ್ತು. ಪೊಲೀಸರ ಮೇಲೂ ದೌರ್ಜನ್ಯ ನಡೆದಿತ್ತು. ಒಬ್ಬ ಪೊಲೀಸ್ ಅಧಿಕಾರಿಯ ಕಿವಿಯನ್ನು ಕತ್ತರಿಸಲಾಗಿತ್ತು. ಈ ಘಟನೆ ನಡೆದ ಸ್ಥಳದಲ್ಲೇ ಸಿಮಿಯ (SIMI) ಕಚೇರಿ ಇತ್ತು. ಅದರ ಕುರಿತ ಕೇಸುಗಳು ಇಂದಿಗೂ ಬಾಕಿ ಇವೆ. ಬಾಂಬ್ ಸ್ಫೋಟ ಮಾಡಿದವರನ್ನು ಹಿಡಿಯುವ ಬದಲು, ಆಗಿನ ಸರಕಾರ ಇದಕ್ಕೆ ಹಿಂದೂ-ಮುಸ್ಲಿಂ ಬಣ್ಣ ಹಚ್ಚಿತು ಎಂದು ಹಿಂದೂ ಕಾರ್ಯಕರ್ತ ಶ್ರೀ. ಸಮೀರ್ ಕುಲಕರ್ಣಿ ಹೇಳಿದರು.
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಿಂದ ಇತ್ತೀಚೆಗೆ ನಿರಪರಾಧಿಯಾಗಿ ಬಿಡುಗಡೆಯಾದ ಹಿಂದೂ ಕಾರ್ಯಕರ್ತ ಶ್ರೀ. ಸಮೀರ್ ಕುಲಕರ್ಣಿ ಅವರ ಸಾರ್ವಜನಿಕ ಸಂದರ್ಶನ ಕಾರ್ಯಕ್ರಮವನ್ನು ಆಗಸ್ಟ್ 12ರಂದು ‘ಸಕಲ ಹಿಂದೂ ಸಮಾಜ’ದ ವತಿಯಿಂದ ಚಿಂಚವಾಡದ ‘ರಾಮಕೃಷ್ಣ ಮೋರೆ ನಾಟ್ಯಗೃಹ’ದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಪಿಂಪ್ರಿ-ಚಿಂಚವಾಡದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಸಹ್ಯಾದ್ರಿ ಪ್ರತಿಷ್ಠಾನ ಹಿಂದೂಸ್ತಾನ್’ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶ್ರಮಿಕ್ ಗೊಜಮಗುಂಡೆ ಅವರು ಶ್ರೀ. ಸಮೀರ್ ಕುಲಕರ್ಣಿ ಅವರನ್ನು ಸಂದರ್ಶಿಸಿದರು.
ಶ್ರೀ. ಸಮೀರ್ ಕುಲಕರ್ಣಿ ಅವರು ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ, ಡೋಲು-ತಾಳಗಳ ಸ್ವಾಗತ ಮತ್ತು ಪುಷ್ಪವೃಷ್ಟಿ ಮಾಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ, ‘ಶ್ರೀ ಕ್ಷೇತ್ರ ದೇಹು ದೇವಸ್ಥಾನ’ದ ಮುಖ್ಯಸ್ಥರಾದ ಶ್ರೀ.ಮಾಣಿಕ್ ಮೋರೆ ಮಹಾರಾಜರು ಮತ್ತು ‘ಶ್ರೀ ಮೊರಯಾ ಗೋಸಾವಿ ಚಿಂಚವಾಡ ದೇವಸ್ಥಾನ’ದ ಮುಖ್ಯಸ್ಥರಾದ ಶ್ರೀ.ಜಿತೇಂದ್ರ ದೇವ ಮಹಾರಾಜರು ಹಾಗೂ ಶ್ರೀ. ಸಮೀರ್ ಕುಲಕರ್ಣಿ ಅವರು ವೇದಿಕೆಯ ಮೇಲಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿದರು. ನಂತರ ಶ್ರೀ. ಮಾಣಿಕ ಮೋರೆ ಮಹಾರಾಜರು ಮತ್ತು ಶ್ರೀ. ಜಿತೇಂದ್ರ ದೇವ ಮಹಾರಾಜರು ಶ್ರೀ. ಸಮೀರ್ ಕುಲಕರ್ಣಿ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇತರ ಗಣ್ಯರಿಗೂ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವು ‘ವಂದೇ ಮಾತರಂ’ ಗೀತೆಯೊಂದಿಗೆ ಮುಕ್ತಾಯಗೊಂಡಿತು.
ಶ್ರೀ. ಸಮೀರ್ ಕುಲಕರ್ಣಿ ಅವರು ಹೇಳಿದ ಘಟನಾವಳಿಗಳು!
1. 2009ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪಿತೂರಿಯನ್ನು ರಚಿಸಲಾಗಿತ್ತು. ಶರದ್ ಪವಾರ್ ಅವರಿಗೆ ಪ್ರಧಾನಿ ಆಗುವ ಕನಸಿತ್ತು. ಹಾಗಾಗಿ ಅವರು ಹಿಂದೂ-ಮುಸ್ಲಿಮರನ್ನು ಓಲೈಸುವ ರಾಜಕೀಯ ಮಾಡಿದರು. ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸಿದರು. ಸುಳ್ಳು ಕೇಸ್ ನಲ್ಲಿ ನನ್ನನ್ನು ಭೋಪಾಲ್ ದಿಂದ ಬಂಧಿಸಲಾಯಿತು. ಅನೇಕ ದ್ವಿಚಕ್ರ ವಾಹನಗಳ ಚಾಸಿ ಮತ್ತು ಎಂಜಿನ್ ನಂಬರ್‌ಗಳನ್ನು ಅಳಿಸಿಹಾಕಲಾಯಿತು. ವಾಹನ ಪರವಾನಗಿ ಇಲ್ಲದ, ವಾಹನ ಚಲಾಯಿಸಲೂ ಬಾರದ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಲಾಯಿತು. ಅವರನ್ನು ಅಮಾನವೀಯವಾಗಿ ಥಳಿಸಲಾಯಿತು. ಇದರ ಪರಿಣಾಮ ಅವರಿಗೆ ಈಗ ನಡೆಯಲೂ ಸಾಧ್ಯವಾಗುತ್ತಿಲ್ಲ.
2. ಆಗಿನ ಕಾಂಗ್ರೆಸ್ ಸರಕಾರವು ಸುಳ್ಳು ಹೇಳಲು ಒತ್ತಾಯಿಸುತ್ತಿತ್ತು. ನಾವು ಎಲ್ಲರೂ ಸಸ್ಯಾಹಾರಿಗಳಾಗಿದ್ದರೂ ನಮ್ಮ ಬಾಯಿಗೆ ಮಾಂಸದ ತುಂಡುಗಳನ್ನು ಹಾಕಲಾಗುತ್ತಿತ್ತು. ನಾವು ಕೇವಲ ಸಾಕ್ಷಿಗಳಾಗಬೇಕು ಮತ್ತು ನಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬದವರ ಮತ್ತು ಇತರ ಹಿಂದೂ ಸಂಘಟನೆಗಳ ಹೆಸರುಗಳನ್ನು ಹೇಳಬೇಕೆಂದು ನಮ್ಮನ್ನು ಅಮಾನವೀಯವಾಗಿ ಥಳಿಸಿ ಒತ್ತಡ ಹೇರಲಾಗುತ್ತಿತ್ತು; ಆದರೆ ನಾವು ಎಂದಿಗೂ ಇದಕ್ಕೆ ಬಲಿಯಾಗಲಿಲ್ಲ.
ಹಿಂದೂ ಸಂಸ್ಕೃತಿಯ ಪುರುಷಾರ್ಥದ ವಿಜಯ!ಆರ್ಥಿಕ ತೊಂದರೆಗಳಿಂದಾಗಿ ನಾನು ಈ ಪ್ರಕರಣಕ್ಕಾಗಿ ನನ್ನದೇ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈಲಿನಲ್ಲಿ ಕಾಗದ ಮತ್ತು ಪೆನ್ ಇಲ್ಲದಿದ್ದಾಗಲೂ ಕಾನೂನಿನ ಅಧ್ಯಯನ ಮಾಡಿ, ನನ್ನ ಪರವಾಗಿ ನಾನೇ ನ್ಯಾಯಾಲಯದ ಮುಂದೆ ವಾದ ಮಂಡಿಸಿದೆ. ಈ 17 ವರ್ಷಗಳ ಕರಾಳ ಅವಧಿಯಿಂದ ಹೊರಬಂದಾಗ ಸರ್ವಶಕ್ತಿಶಾಲಿ ಪರಮಾತ್ಮನ ಅಸ್ತಿತ್ವದ ಅನುಭವವಾಯಿತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನನ್ನ ಧರ್ಮ, ಮಾತೃಭೂಮಿ ಮತ್ತು ಕುಟುಂಬದ ಸಂಸ್ಕಾರಗಳಿಂದಾಗಿ ಇದು ಸಾಧ್ಯವಾಯಿತು ಎಂದು ತಿಳಿಯಿತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಅಷ್ಟು ತೊಂದರೆ ಕೊಟ್ಟರೂ ಎಲ್ಲರೂ ನಿರಪರಾಧಿ ಎಂದು ಸಾಬೀತಾದರು. ಇದು ಯಾವುದೇ ವ್ಯಕ್ತಿ, ವೈಯಕ್ತಿಕ ಅಥವಾ ಸಂಘಟನೆಗಳ ವಿಜಯವಲ್ಲ. ಇದು ಹಿಂದೂ ಸಂಸ್ಕೃತಿಯ ಪುರುಷಾರ್ಥದ ವಿಜಯವಾಗಿದೆ. ಇನ್ನು ಮುಂದೆ ನಿರಪರಾಧಿ ಹಿಂದೂ ಕಾರ್ಯಕರ್ತರಿಗೆ ಇಂತಹ ತೊಂದರೆ ಕೊಡಲು ಯಾರಿಗೂ ಧೈರ್ಯ ಬರುವುದಿಲ್ಲ. |
ಮುಂದಿನ ಜೀವನವನ್ನು ಹಿಂದೂ ಧರ್ಮದ ಸೇವೆಗೆ ಮೀಸಲಿಡುವ ಸಂಕಲ್ಪ!ನನ್ನ ರಕ್ತದ ಗುಂಪು ಅಪರೂಪದ ವರ್ಗಕ್ಕೆ ಸೇರಿರುವುದರಿಂದ, ಜೈಲಿನಲ್ಲಿ ಆ ಸ್ಥಿತಿಯಲ್ಲಿಯೂ ನಾನು 27 ಬಾರಿ ರಕ್ತದಾನ ಮಾಡಿ, “ನಾವು ರಕ್ತ ಕೊಡುವವರೇ ಹೊರತು ರಕ್ತ ಹೀರುವವರಲ್ಲ” ಎಂಬುದನ್ನು ನಮ್ಮ ಕೃತಿಯಿಂದ ತೋರಿಸಿದ್ದೇವೆ. ಮುಂದಿನ ಜೀವನವನ್ನು ಹಿಂದೂ ಧರ್ಮದ ಸೇವೆ ಮತ್ತು ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ನಾಶಪಡಿಸುವ ಗುರಿ ಇಟ್ಟುಕೊಂಡಿರುವ ಸಂಕಲ್ಪವನ್ನು ಶ್ರೀ. ಕುಲಕರ್ಣಿ ವ್ಯಕ್ತಪಡಿಸಿದರು. ಹಾಗೆಯೇ ಹಿಂದೂಗಳು ಇನ್ನು ಮುಂದೆ ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವಾಗ ರಾಷ್ಟ್ರದ್ವೇಷಿ, ಧರ್ಮದ್ವೇಷಿ ಕಾಂಗ್ರೆಸ್‌ನವರಿಗೆ ಮತ ಹಾಕಬಾರದು ಎಂದು ಕರೆ ನೀಡಿದರು. ಈ ಎಲ್ಲಾ ಅನುಭವಗಳನ್ನು ಹೇಳುವಾಗ ಶ್ರೀ. ಸಮೀರ್ ಕುಲಕರ್ಣಿ ಭಾವನಾತ್ಮಕವಾಗಿದ್ದರು. |
ನನಗೆ ತುಂಬು ಸಹಾಯ ಮಾಡಿದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ.ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ಧೇನೆ. ಇಂದಿಗೂ ನಾನು ಚಿಂಚವಾಡದ ನನ್ನ ಪ್ರದೇಶದ ಅನೇಕ ಜನರನ್ನು ಗುರುತಿಸುವುದಿಲ್ಲ; ಆದರೆ ನನ್ನನ್ನು ನಿರಪರಾಧಿಯೆಂದು ಬಿಡುಗಡೆ ಮಾಡಿದಾಗ ಎಲ್ಲರೂ ನನಗೆ ಬೆಂಬಲ ನೀಡಿದರು. ನನ್ನ ತಾಯಿಗೆ ತುಂಬಾ ವಯಸ್ಸಾಗಿದೆ. ಅವರು ಕೂಡಾ ತುಂಬಾ ಕಷ್ಟದಲ್ಲಿ ದಿನಗಳನ್ನು ಕಳೆದಿದ್ದಾರೆ; ಆದರೆ ಇಂದು ಎಲ್ಲಾ ಹಿಂದೂ ಸಹೋದರರು ನನ್ನ ಮೇಲೆ ಪ್ರೀತಿ ತೋರಿಸಿ, ನನ್ನನ್ನು ಸನ್ಮಾನಿಸಿದರು, ತುಂಬು ಸಹಾಯ ಮಾಡಿ ಎಲ್ಲರ ಮುಂದೆ ನನ್ನನ್ನು ಗೌರವಿಸಿದ ಕಾರಣ ನಾನು ಎಲ್ಲರಿಗೂ ಋಣಿ ಎಂದು ಕುಲಕರ್ಣಿ ಅವರು ಕೊನೆಯಲ್ಲಿ ಹೇಳಿದರು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ