ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಕೊಡುಗೆಯನ್ನು ಪದೇ-ಪದೇ ಪ್ರಶ್ನಿಸುತ್ತಿರುವ ಕಾಂಗ್ರೆಸ್‌ಗೆ ತಪರಾಕಿ !

ಕರ್ಣಾವತಿ (ಗುಜರಾತ್) – ‘ಭಾರತ್ ಛೋಡೋ’ ಆಂದೋಲನದ ಸಮಯದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಉಮಾಕಾಂತ್ ಕಾಡಿಯಾ ಅವರು ಮೊದಲ ಹುತಾತ್ಮರು. ‘ಭಾರತ್ ಛೋಡೋ’ ಚಳುವಳಿ ಪ್ರಾರಂಭವಾದ ಮರುದಿನ, ಕರ್ಣಾವತಿಯಲ್ಲಿ ನಡೆದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ 21 ವರ್ಷದ ಉಮಾಕಾಂತ್ ಕಾಡಿಯಾ ಅವರ ಮೇಲೆ ಬ್ರಿಟಿಷರು ಗುಂಡುಗಳು ಹಾರಿಸಿದ್ದರು.
1.ಆಗಸ್ಟ್ 15 ರಂದು ಭಾರತವು 79 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಕೆಲವು ಕ್ರಾಂತಿಕಾರಿಗಳ ಹೆಸರುಗಳನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ, ಆದರೆ ಅನೇಕರನ್ನು ಜನರು ಮರೆತಿದ್ದಾರೆ. ಇವರಲ್ಲಿ ಉಮಾಕಾಂತ್ ಕಾಡಿಯಾ ಕೂಡ ಒಬ್ಬರಾಗಿದ್ದಾರೆ.

2.’ಭಾರತ್ ಛೋಡೋ’ ಚಳುವಳಿ ಆಗಸ್ಟ್ 8, 1942 ರಂದು ಪ್ರಾರಂಭವಾಯಿತು. ಆಗಸ್ಟ್ 9 ರಂದು ಕರ್ಣಾವತಿಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಈ ಚಳುವಳಿಯ ಮೊದಲ ನಾಯಕರು ಕರ್ಣಾವತಿಯ ಉಮಾಕಾಂತ್ ಕಾಡಿಯಾ. ಅವರು ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದರು.
3. ಆಗಸ್ಟ್ 9 ರಂದು ಪ್ರತಿಭಟನೆಗಳು ಪ್ರಾರಂಭವಾದಾಗ, ಉಮಾಕಾಂತ್ ಕಾಡಿಯಾ ಮುಂಚೂಣಿಯಲ್ಲಿದ್ದರು. ಗುಂಪಿನಲ್ಲಿದ್ದವರು ಅವರಿಗೆ ಹಿಂತಿರುಗುವಂತೆ ಹೇಳಿದರು, ಆದರೆ ಅವರು ದೃಢವಾಗಿ ನಿಂತರು. ಯುವಕನ ಈ ನಿರ್ಭೀತತೆಯನ್ನು ಕಂಡು, ಓರ್ವ ಬ್ರಿಟಿಷ್ ಅಧಿಕಾರಿ ಅವನ ಮೇಲೆ ಗುಂಡು ಹಾರಿಸಿದನು ಮತ್ತು ಅವರು ಅಲ್ಲಿಯೇ ನಿಧನರಾದನು.
4. ಈ ಘಟನೆ ಕರ್ಣಾವತಿಯ ಕಾಡಿಯಾ ಪ್ರದೇಶದಲ್ಲಿ ನಡೆದಿದ್ದು ನಂತರ ಉಮಾಕಾಂತ್ ಮೋತಿರಾಮ್ ಕಾಡಿಯಾ ಅವರ ಸ್ಮಾರಕವನ್ನು ನಿರ್ಮಿಸಲಾಯಿತು. ಉಮಾಕಾಂತ್ ಅವರು ಈ ಚಳುವಳಿಯ ಮೊದಲ ಹುತಾತ್ಮರಾಗಿದ್ದರು.

5. ಉಮಾಕಾಂತ್ ಕಾಡಿಯಾ ಅವರು ಕರ್ಣಾವತಿಯ ದರಿಯಾಪುರ ಪ್ರದೇಶದ ನಿವಾಸಿಗಳಾಗಿದ್ದರು. ‘ಭಾರತ್ ಛೋಡೋ’ ಚಳುವಳಿಯ ಸಮಯದಲ್ಲಿ, ಅವರು ಕೇವಲ 21 ವರ್ಷ ವಯಸ್ಸಿನವರಾಗಿದ್ದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದು ಮಾತ್ರವಲ್ಲದೆ, ಸಂಘದ ಶಾಖೆಯ ಮುಖ್ಯ ಶಿಕ್ಷಕರೂ ಆಗಿದ್ದರು.
6. ಉಮಾಕಾಂತ್ ಕಾಡಿಯಾ ಅವರಂತಹ ಸ್ವಯಂಸೇವಕರ ತ್ಯಾಗವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಪ್ರಮುಖ ಪಾತ್ರವನ್ನು ಹೊಂದಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!