ಆಗಸ್ಟ್ 15 ರಂದು ಮಸೀದಿ, ದರ್ಗಾ ಮತ್ತು ಮದರಸಾಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಆದೇಶಕ್ಕೆ ಕಾಂಗ್ರೆಸ್‌ನ ಮುಸ್ಲಿಂ ಸಂಸದರ ವಿರೋಧ

ನವದೆಹಲಿ – ಛತ್ತೀಸಗಢ ರಾಜ್ಯ ವಕ್ಫ್ ಮಂಡಳಿಯು ಎಲ್ಲಾ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜವನ್ನು ಹಾರಿಸುವಂತೆ ಆದೇಶ ನೀಡಿತ್ತು. ರಾಷ್ಟ್ರಧ್ವಜವನ್ನು ಹಾರಿಸದವರನ್ನು ‘ಪಾಕಿಸ್ತಾನಿ’ ಎಂದು ಪರಿಗಣಿಸಲಾಗುವುದು ಎಂದು ಸಹ ಅದರಲ್ಲಿ ಹೇಳಲಾಗಿತ್ತು.
ಈ ಆದೇಶವನ್ನು ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಟೀಕಿಸಿದ್ದು, “ಇದು ಅನಗತ್ಯವಾದದ್ದು. ನಮ್ಮ ದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂಪ್ರದಾಯವಿಲ್ಲ. ಜನರು ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜ ಹಾರಿಸುತ್ತಾರೆ. ಯಾರ ಮೇಲೂ ಒತ್ತಡ ಹೇರಿ ಅಥವಾ ನಿರ್ಬಂಧ ಹೇರಿ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಿಲ್ಲ. ರಾಷ್ಟ್ರಧ್ವಜ ಹಾರಿಸುವುದು ಮನಸ್ಸಿನ ಭಾವನೆ ಮತ್ತು ದೇಶಪ್ರೇಮದಿಂದ ಆಗಬೇಕು. ಈ ರೀತಿಯ ಒತ್ತಡ ಅಥವಾ ನಿರ್ಬಂಧಗಳನ್ನು ಹೇರುವುದು ತಪ್ಪು,” ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಇಷ್ಟಪಡದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾ ಸರಿ ದಾರಿಗೆ ತರಲು ಇಂತಹ ಆದೇಶಗಳನ್ನು ಹೊರಡಿಸುವುದು ಅಗತ್ಯವಾಗಿದೆ. ಇದನ್ನು ಯಾರು ವಿರೋಧಿಸುತ್ತಾರೆ ಅವರ ಮೇಲೂ ಕ್ರಮ ಕೈಗೊಳ್ಳಲು ಆದೇಶಿಸಬೇಕು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!