ನಾನು ೨,೮೦೦ ಬೀದಿ ನಾಯಿಗಳ ಹತ್ಯೆ ಮಾಡಿ ಮರದ ಕೆಳಗೆ ಹೂತಿದ್ದೇನೆ ! – ಶಾಸಕ ಎಸ್.ಎಲ್. ಭೋಜೇಗೌಡ

  • ವಿಧಾನ ಪರಿಷತ್ತಿನಲ್ಲಿ ಮಾಹಿತಿ

  • ಮಕ್ಕಳ ಸುರಕ್ಷೆಗಾಗಿ ಮಾಡಿದ ಕೃತ್ಯ

ಬೆಂಗಳೂರು – ಜೆಡಿಎಸ್ ಜಾತ್ಯಾತೀತ ಪಕ್ಷದ ನಾಯಕ ಮತ್ತು ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ತಾವು ಸುಮಾರು 2,800 ಬೀದಿ ನಾಯಿಗಳನ್ನು ಕೊಲ್ಲಿಸಿರುವುದಾಗಿ ಹೇಳಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ಈ ಕೆಲಸ ಮಾಡಿದ್ದು, ಈ ಕೃತ್ಯಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದ್ದಾರೆ. “ನಮಗೂ ಪ್ರಾಣಿಗಳ ಬಗ್ಗೆ ಕಾಳಜಿ ಇದೆ, ಆದರೆ ಪ್ರಾಣಿಪ್ರಿಯರು ಅತ್ಯಂತ ಅಪಾಯಕಾರಿಯಾಗಿದ್ದಾರೆ” ಎಂದು ಭೋಜೇಗೌಡ ಹೇಳಿದ್ದಾರೆ. ಭೋಜೇಗೌಡ ಅವರು ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

1. ಭೋಜೇಗೌಡ ಅವರು ಒಂದು ಹಳೆಯ ಘಟನೆಯನ್ನು ಉಲ್ಲೇಖಿಸುತ್ತಾ, ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷರಾಗಿದ್ದಾಗ, ಮಾಂಸಕ್ಕೆ ವಿಷ ಬೆರೆಸಿ ನಾಯಿಗಳಿಗೆ ತಿನ್ನಿಸಿದ್ದರು. ನಂತರ ಅವುಗಳನ್ನು ತೆಂಗಿನ ಮರದ ಕೆಳಗೆ ಹೂಳಲಾಯಿತು ಎಂದು ಹೇಳಿದರು.

2.ನ್ಯಾಯಾಧೀಶರು, ಮಂತ್ರಿಗಳು ಮತ್ತು ಶಾಸಕರ ಮಕ್ಕಳು ಕಾರಿನಲ್ಲಿ ಪ್ರಯಾಣಿಸುವುದರಿಂದ ಅವರಿಗೆ ನಾಯಿಗಳಿಂದ ಯಾವುದೇ ತೊಂದರೆ ಇಲ್ಲ. ಆದರೆ, ಶಾಲೆಗೆ ನಡೆದುಕೊಂಡು ಹೋಗುವ ಬಡ ಕುಟುಂಬಗಳ ಮಕ್ಕಳ ಮೇಲೆ ಮಾತ್ರ ನಾಯಿಗಳು ದಾಳಿ ಮಾಡುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
(ಪ್ರಾಣಿ ಪ್ರೇಮಿ ಪೇಟಾ ಮತ್ತು ಮೇನಕಾ ಗಾಂಧಿ ಅವರು ಈ ಬಗ್ಗೆ ಏನಾದರೂ ಹೇಳುವರೆ? – ಸಂಪಾದಕರು).