‘ವಿಭಜನೆ ಭೀಕರತೆಯ ಸ್ಮೃತಿದಿನ’ ದ ಆಚರಣೆ

ನವದೆಹಲಿ – ವಿಭಜನೆಯು ಲಕ್ಷಾಂತರ ಭಾರತೀಯರ ತ್ಯಾಗ, ನೋವು ಮತ್ತು ಧೈರ್ಯವನ್ನು ಸ್ಮರಿಸುವ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ವಿಭಜನೆಯ ಭೀಕರತೆಯ ಸ್ಮೃತಿ ದಿನ’ದ ನಿಮಿತ್ತ ‘ಎಕ್ಸ್’ ಮೂಲಕ ಹೇಳಿಕೆ ನೀಡಿದ್ದಾರೆ. ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಮೋದಿ ಸರಕಾರವು 2021 ರಿಂದ ಆಗಸ್ಟ್ 14 ಅನ್ನು ‘ವಿಭಜನೆಯ ಭೀಕರತೆಯ ಸ್ಮೃತಿದಿನ’ ಎಂದು ಆಚರಿಸುತ್ತಿದೆ.
ಪ್ರಧಾನಿ ಮೋದಿ ಇವರು ಮಾತು ಮುಂದುವರೆಸಿ, “ಭಾರತವು ಈ ದಿನವನ್ನು ‘ವಿಭಜನೆಯ ಭೀಕರತೆಯ ಸ್ಮೃತಿ ದಿನ’ ಎಂದು ಆಚರಿಸುತ್ತಿದೆ. ಇತಿಹಾಸದ ಈ ದುಃಖದ ಅಧ್ಯಾಯದಲ್ಲಿ ಲಕ್ಷಾಂತರ ಜನರ ನೋವು ಇಂದಿಗೂ ನೆನಪಿನಲ್ಲಿದೆ. ಈ ದಿನವು ಅವರ ಧೈರ್ಯ ಮತ್ತು ಕಲ್ಪನೆಗೂ ನಿಲುಕದಷ್ಟು ಹಾನಿಯನ್ನು ಎದುರಿಸಿ ಮತ್ತೆ ನಿಲ್ಲುವ ಅವರ ಸಾಮರ್ಥ್ಯವನ್ನು ಗೌರವಿಸಲು ಸಹ ನೆರವಾಗುತ್ತದೆ. ಈ ದಿನವು ನಮ್ಮ ದೇಶದಲ್ಲಿ ಸಾಮರಸ್ಯದ ಬಂಧಗಳನ್ನು ಬಲಪಡಿಸುವ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ,” ಎಂದು ಹೇಳಿದರು.
ಕಾಂಗ್ರೆಸ್ ದೇಶವನ್ನು ವಿಭಜಿಸಿ ಭಾರತ ಮಾತೆಯ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ! – ಅಮಿತ್ ಶಹಾ

‘ವಿಭಜನೆಯ ಭೀಕರತೆಯ ಸ್ಮೃತಿ ದಿನ’ದಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರು ‘ಎಕ್ಸ್’ನಲ್ಲಿ, “ಇದು ದೇಶದ ವಿಭಜನೆಯ ಬಲಿಯ ನೋವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಈ ದಿನದಂದು ಕಾಂಗ್ರೆಸ್ ದೇಶವನ್ನು ವಿಭಜಿಸಿ ಭಾರತ ಮಾತೆಯ ಸ್ವಾಭಿಮಾನಕ್ಕೆ ಧಕ್ಕೆ ತಂದಿತು. ವಿಭಜನೆಯು ಹಿಂಸಾಚಾರ, ಶೋಷಣೆ ಮತ್ತು ದೌರ್ಜನ್ಯಕ್ಕೆ ಕಾರಣವಾಯಿತು. ಕೋಟ್ಯಂತರ ಜನರು ನಿರಾಶ್ರಿತರಾಗಬೇಕಾಯಿತು. ದೇಶವು ವಿಭಜನೆಯ ಈ ಇತಿಹಾಸ ಮತ್ತು ನೋವನ್ನು ಎಂದಿಗೂ ಮರೆಯುವುದಿಲ್ಲ. ವಿಭಜನೆಯ ಈ ಭಯಾನಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ,” ಎಂದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ