ಛತ್ರಪತಿ ಶಿವಾಜಿ ಮಹಾರಾಜರ “ವಾಗ್ ನಖೆ”(ಹುಲಿಯುಗುರು?) ಭಾರತದಲ್ಲಿ ಇಡುವ ಕಾಲಾವಧಿ ಹೆಚ್ಚಿಸಲಾಗಿದೆ. : Chhatrapati Shivaji’s Tiger claws

 ಲಂಡನ್‌ ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಸಕಾರಾತ್ಮಕವಾಗಿದೆ

ಮುಂಬಯಿ – ಲಂಡನ್‌ ನಲ್ಲಿರುವ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಛತ್ರಪತಿ ಶಿವಾಜಿ ಮಹಾರಾಜರ “ವಾಗ್ ನಖ”ವನ್ನು (ಹುಲಿಯುಗುರು) ಮಹಾರಾಷ್ಟ್ರ ಸರಕಾರವು ಮೂರು ವರ್ಷಗಳ ಒಪ್ಪಂದದ ಮೇಲೆ ಭಾರತಕ್ಕೆ ತಂದಿದೆ. ಮೂರು ವರ್ಷಗಳ ಒಪ್ಪಂದ ಮುಗಿದ ನಂತರವೂ “ವಾಗ್ ನಖ”ವನ್ನು ಭಾರತದಲ್ಲಿ ಅಧಿಕ ಕಾಲದ ವರೆಗೆ ಇರಿಸಲು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಸಕಾರಾತ್ಮಕವಾಗಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೆಲಾರ ತಿಳಿಸಿದ್ದಾರೆ.

1. ಧೈರ್ಯಶಾಲಿ ಮರಾಠಾ ಸರದಾರ್ ರಘೋಜಿರಾಜೇ ಭೋಸ್ಲೆ ಅವರ ಐತಿಹಾಸಿಕ ಕತ್ತಿಯನ್ನು ವಶಪಡಿಸಿಕೊಳ್ಳಲು ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೆಲಾರ್ ಅವರು ಪ್ರಸ್ತುತ ಲಂಡನ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ 12 ರಂದು, ಅವರು ಲಂಡನ್‌ನ ಪ್ರಾಚೀನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಭೇಟಿ ನೀಡಿದರು. ವಸ್ತುಸಂಗ್ರಹಾಲಯದ ನಿರ್ದೇಶಕ ಡಾ. ಹಂಟ್ ಅವರೊಂದಿಗೆ ನಡೆದ ಚರ್ಚೆಯ ಸಮಯದಲ್ಲಿ, ಅವರು ಛತ್ರಪತಿ ಶಿವಾಜಿ ಮಹಾರಾಜರ “ವಾಗ್ ನಖ”ದ(ಹುಲಿಯುಗುರು) ಅವಧಿಯನ್ನು ವಿಸ್ತರಿಸುವ ಬಗ್ಗೆ ತಮ್ಮ ಸಕಾರಾತ್ಮಕತೆಯನ್ನು ವ್ಯಕ್ತಪಡಿಸಿದರು.

2. ಈ ಭೇಟಿಯ ಸಮಯದಲ್ಲಿ, ಮಹಾರಾಷ್ಟ್ರದ ಪೈಠಣಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲು ಆಶಿಶ ಶೆಲಾರ್ ಅವರು ಕೋರಿದರು, ಇದಕ್ಕೆ ಮ್ಯೂಸಿಯಂ ಒಪ್ಪಿಕೊಂಡಿದೆ.

3. “ಮಹಾರಾಷ್ಟ್ರದ ಸಾಂಪ್ರದಾಯಿಕ ವಸ್ತ್ರ ಮತ್ತು ಸುಂದರ ನೇಯ್ಗೆಗೆ ಹೆಸರುವಾಸಿಯಾದ ಸೀರೆಗಳ ರಾಣಿಯೆಂದು ಗುರುತಿಸಲ್ಪಡುವ ಮಹಾರಾಷ್ಟ್ರದ ಪೈಠಣಿಯನ್ನು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು” ಎಂದು ಆಶಿಶ ಶೆಲಾರ ಹೇಳಿದರು.