ಸಾವಿರಾರು ದೂರುಗಳು ಬಂದ ನಂತರ ಕೇಂದ್ರದ 3 ಸಚಿವಾಲಯಗಳಿಂದ ರೂಪರೇಷೆ ಸಿದ್ಧ!

ನವ ದೆಹಲಿ – ದೆಹಲಿಯಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪಂಚಾಯತ್ ರಾಜ್ ಸಚಿವಾಲಯ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಗಳು ದೇಶದಾದ್ಯಂತ ಅಂತಹ ಪ್ರಾಣಿಗಳನ್ನು ನಿಯಂತ್ರಿಸಲು ಒಂದು ಯೋಜನೆಯನ್ನು ರೂಪಿಸಿವೆ. ಬೀದಿ ನಾಯಿಗಳ ಕಡಿತ ಹಾಗೂ ಇತರೆ ಬೀದಿ ಪ್ರಾಣಿಗಳಿಂದ ಸಂಭವಿಸುವ ಅಪಘಾತಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಸಾವಿರಾರು ದೂರುಗಳು ಬಂದ ನಂತರ ಈ ಮೂರು ಸಚಿವಾಲಯಗಳು ಈ ಕ್ರಮ ಕೈಗೊಂಡಿವೆ. ದೇಶದಲ್ಲಿ 1 ಕೋಟಿ 53 ಲಕ್ಷ ಬೀದಿ ನಾಯಿಗಳಿವೆ. ಈ ಯೋಜನೆಯ ಅಡಿಯಲ್ಲಿ, ಒಂದು ವರ್ಷದೊಳಗೆ ಅವುಗಳಲ್ಲಿ ಶೇ. 70ರಷ್ಟು ನಾಯಿಗಳಿಗೆ ಲಸಿಕೆ ಮತ್ತು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಗುರಿ ನಿಗದಿಪಡಿಸಲಾಗಿದೆ.
2019ರ ಪ್ರಾಣಿ ಗಣತಿಯ ಪ್ರಕಾರ, ದೇಶದಲ್ಲಿ 50 ಲಕ್ಷ ಬೀದಿ ಪ್ರಾಣಿಗಳಿವೆ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತಿಗಳು ಕೂಡ ಈ ಅಭಿಯಾನದಲ್ಲಿ ಭಾಗವಹಿಸಲಿವೆ. ಈ ಅಭಿಯಾನಕ್ಕೆ ರಾಜ್ಯಗಳು ಪ್ರಾಣಿ ಕಲ್ಯಾಣ ಮಂಡಳಿಯ ಸಹಾಯ ಪಡೆಯುವಂತೆ ಸೂಚಿಸಲಾಗಿದೆ. ಬೀದಿ ನಾಯಿಗಳಿಗೆ ಹಸಿರು ‘ಕಾಲರ್ ಟ್ಯಾಗ್’ ಹಾಕಲಾಗುತ್ತದೆ. ಇದರಲ್ಲಿ ಅವುಗಳ ಲಸಿಕೆ ಮತ್ತು ಸಂತಾನಹರಣದ ಮಾಹಿತಿ ಇರುತ್ತದೆ. ಈ ಮಾಹಿತಿಯನ್ನು ಜಾನುವಾರು ಪೋರ್ಟಲ್‌ನಲ್ಲಿಯೂ (ವೆಬ್‌ಸೈಟ್) ಸಹ ದಾಖಲಿಸಬೇಕಾಗುತ್ತದೆ. ಇದರಿಂದ ಪಾಲಿಕೆ (ನಗರಸಭೆ) ಸಿಬ್ಬಂದಿಗೆ ಯಾವ ಪ್ರಾಣಿಯನ್ನು ಹಿಡಿಯಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದು ತಿಳಿಯಲಿದೆ.
ಸಂಪಾದಕೀಯ ನಿಲುವುದೂರುಗಳು ಬಂದ ನಂತರ ಎಚ್ಚರಗೊಳ್ಳುವ ಸಚಿವಾಲಯಗಳು ಜನವಿರೋಧಿಗಳೇ ಆಗಿವೆ! ಇಂತಹ ಸಚಿವಾಲಯಗಳು ಇತರ ಸಮಯದಲ್ಲಿ ಏನು ಮಾಡುತ್ತಿರುತ್ತವೆ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!