Bihar SIR : ಪೌರತ್ವದ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಹಕ್ಕು ಚುನಾವಣಾ ಆಯೋಗಕ್ಕೇ ಇದೆ!

  • ಸರ್ವೋಚ್ಚ ನ್ಯಾಯಾಲಯದ ತೀರ್ಪು

  • ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆ!

ನವದೆಹಲಿ – ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು, ಮತದಾರರ ಪಟ್ಟಿಯಲ್ಲಿ ನಾಗರಿಕರನ್ನು ಸೇರಿಸುವ ಮತ್ತು ನಾಗರಿಕರಲ್ಲದವರನ್ನು ಹೊರಗಿಡುವ ಹಕ್ಕು ಚುನಾವಣಾ ಆಯೋಗಕ್ಕೇ ಇದೆ ಎಂದು ಹೇಳಿದೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್. ಅಂದರೆ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’) ಯಲ್ಲಿ, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸದಿರುವ ಚುನಾವಣಾ ಆಯೋಗದ ನಿಲುವು ಸಹ ಸರಿಯಾಗಿದೆ. ಇದರಿಂದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ನ್ಯಾಯಾಲಯದಿಂದಲೇ ಹಿನ್ನಡೆಯಾಗಿದೆ.

ಇದಕ್ಕೂ ಮೊದಲು, ಬಿಹಾರದ 7 ಕೋಟಿ 90 ಲಕ್ಷ ಮತದಾರರಲ್ಲಿ, 2003ರ ಮತದಾರರ ಪಟ್ಟಿಯಲ್ಲಿದ್ದ ಸುಮಾರು ಆರೂವರೆ ಕೋಟಿ ಮತದಾರರು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು.

ಅರ್ಜಿದಾರರ ವಾದವೇನು?

ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಚುನಾವಣಾ ಆಯೋಗವು ನೀಡಿದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿರಲಿಲ್ಲ. ಆದ್ದರಿಂದ, ‘ಮತದಾರರ ಪೌರತ್ವವನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ’ ಎಂದು ಅರ್ಜಿದಾರರ ನ್ಯಾಯವಾದಿಗಳು ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.

ಸರ್ವೋಚ್ಚ ನ್ಯಾಯಾಲಯದ ಅವಲೋಕನ

ಈ ಸಂದರ್ಭದಲ್ಲಿ ನ್ಯಾಯಾಲಯವು,

1. ‘ಎಸ್.ಐ.ಆರ್.’ ವಿವಾದವು ಮುಖ್ಯವಾಗಿ ಅಪನಂಬಿಕೆಯಿಂದ ಹುಟ್ಟಿಕೊಂಡಿದೆ.

2. ಆಧಾರ್ ಕಾರ್ಡ್ ಸಂಖ್ಯೆಯು ಪೌರತ್ವದ ಪುರಾವೆಯಲ್ಲ ಎಂದು ‘ಆಧಾರ್ ಕಾನೂನಿ’ನಲ್ಲಿಯೇ ನಮೂದಿಸಲಾಗಿದೆ.

3. ಸಂಭಾವ್ಯ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಅವರು ಕೇವಲ ನಾಗರಿಕರು ಎಂದು ಅಫಿಡವಿಟ್ ಸಲ್ಲಿಸಬೇಕಾದ ನಿಯಮದಿಂದ ಕಾನೂನು ತೊಡಕುಗಳು ಸೃಷ್ಟಿಯಾಗಬಹುದು.