ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಲ್ಲಿ ಟೈಪಿಂಗ್ ನಲ್ಲಿ ಆಗಿರುವ ತಪ್ಪು

ಇಂದೋರ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಒಂದು ಗಂಭೀರ ತಪ್ಪು ನಡೆದಿದೆ. ಟೈಪಿಂಗ್ ನಲ್ಲಿ ತಪ್ಪು ಆಗಿರುವುದರಿಂದ ಯಾವ ಆರೋಪಿಗೆ ಜಾಮೀನು ಸಿಗಬಾರದಿತ್ತು, ಅವನಿಗೆ ಜಾಮೀನು ನೀಡಲಾಗಿದೆ. ಹಾಗೂ ಯಾವ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಬೇಕಾಗಿತ್ತು, ಅವನು ಜೈಲಿನಲ್ಲಿಯೇ ಉಳಿಯಬೇಕಾಯಿತು. ಈ ತಪ್ಪು ತಕ್ಷಣ ಗಮನಕ್ಕೆ ಬಂದಿರುವುದರಿಂದ ಅದನ್ನು ತಿದ್ದುಪಡಿ ಮಾಡಲಾಯಿತು.
ಖಂಡ ಪೀಠದಿಂದ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆದೇಶದಲ್ಲಿ ಯಾವ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಮತ್ತು ಯಾವ ಆರೋಪಿಯ ಅರ್ಜಿ ಸ್ವೀಕರಿಸಲಾಗಿತ್ತು, ಅವರ ಹೆಸರುಗಳು ಅದಲು ಬದಲು ಆಗಿದ್ದವು. ಕಳೆದ ವರ್ಷ ಜುಲೈ ೫ ರಂದು ವಿದಿಶಾ ಇಲ್ಲಿಯ ತೊಂಡ ಇಲ್ಲಿ ಅಂಗಡಿಯ ಮಾಲೀಕ ಪ್ರಕಾಶ ಪಾಲ ಇವರಿಗೆ ಹೊಡೆದು ಅವರ ಹತ್ಯೆ ಮಾಡಿರುವ ಸಂದೇಹದಿಂದ ತಂದೆ ಹಲಕೆ ಮತ್ತು ಮಗ ಅಶೋಕ ಇವರನ್ನು ಬಂಧಿಸಲಾಗಿತ್ತು. ಜಾಮೀನಿನ ವಿಚಾರಣೆಯ ವೇಳೆ ಪ್ರತ್ಯಕ್ಷದಲ್ಲಿ ಅಶೋಕ್ ಇವರಿಗೆ ಜಾಮೀನು ನೀಡಲಾಗಿತ್ತು, ಹಾಗೂ ತಂದೆ ಹಲಕೆ ಇವರಿಗೆ ನಿರಾಕರಿಸಲಾಗಿತ್ತು . ಹೀಗಿರುವಾಗ ಟೈಪಿಂಗ್ ನಲ್ಲಿ ಆಗಿರುವ ತಪ್ಪಿನಿಂದ ತಂದೆಗೆ ಜಾಮೀನು ನೀಡಲಾಯಿತು. ಈ ತಪ್ಪು ಗಮನಕ್ಕೆ ಬಂದ ನಂತರ ಅದನ್ನು ತಿದ್ದುಪಡಿ ಮಾಡಿ ಆದೇಶ ಸರಿಪಡಿಸಲಾಯಿತು.
ಸಂಪಾದಕೀಯ ನಿಲುವುಇಷ್ಟು ಮಹತ್ವದ ತೀರ್ಪಿನಲ್ಲಿ ಈ ರೀತಿಯ ತಪ್ಪಾಗುವುದು ಜನರ ಹಿತದ ದೃಷ್ಟಿಯಿಂದ ಗಂಭೀರವಾಗಿದೆ. ಇದರ ಕುರಿತು ಶಾಶ್ವತವಾದ ಉಪಾಯ ಯೋಜನೆ ರೂಪಿಸುವುದು ಆವಶ್ಯಕವಾಗಿದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!