ದೇಶದ ಹಲವು ಚಲನ ಚಿತ್ರಮಂದಿರಗಳಲ್ಲಿ ‘ಉದಯಪುರ ಫೈಲ್ಸ್’ ಚಲನ ಚಿತ್ರ ಪ್ರದರ್ಶನಗೊಂಡಿಲ್ಲ! – HJS Urges Screening

ಗೋವಾ ರಾಜ್ಯದಲ್ಲಿ ಚಲನ ಚಿತ್ರ ಪ್ರದರ್ಶನಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

ಮುಂಬಯಿ – ‘ಉದಯಪುರ ಫೈಲ್ಸ್’ ಚಲನ ಚಿತ್ರವು ಆಗಸ್ಟ್ 8 ರಿಂದ ದೇಶಾದ್ಯಂತ 4 ಸಾವಿರದ 500 ಚಲನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಅನೇಕ ಚಲನ ಚಿತ್ರಮಂದಿರಗಳಲ್ಲಿ ಇದನ್ನು ಪ್ರದರ್ಶಿಸಲಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಗೋವಾ ರಾಜ್ಯದಲ್ಲಿ ಈ ಚಲನ ಚಿತ್ರ ಬಿಡುಗಡೆಯಾಗಿಲ್ಲ. ಹಾಗಾಗಿ, ಹಿಂದೂ ಜನಜಾಗೃತಿ ಸಮಿತಿಯು ‘ಐನಾಕ್ಸ್’ ಮತ್ತು ಮಡಗಾಂವ್‌ನ ‘ಓಶಿಯಾ ಮಲ್ಟಿಪ್ಲೆಕ್ಸ್’ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಿ, ಈ ಚಲನ ಚಿತ್ರವನ್ನು ತಕ್ಷಣವೇ ಪ್ರದರ್ಶಿಸುವಂತೆ ಆಗ್ರಹಿಸಿದೆ.

1. ಈ ಚಲನ ಚಿತ್ರವನ್ನು ನೋಡಲು ಹಲವರು ಕುತೂಹಲ ಹೊಂದಿದ್ದಾರೆ. ಕೆಲವರು ವಿವಿಧ ಆ್ಯಪ್‌ಗಳ ಮೂಲಕ ಚಲನ ಚಿತ್ರದ ಟಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಿದರು. ಆದರೆ, ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರಾ, ಸೊಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಚಲನ ಚಿತ್ರಮಂದಿರಗಳಲ್ಲಿ ಈ ಚಲನ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ. ಸ್ಥಳೀಯ ಹಿಂದುತ್ವವಾದಿ ಸಂಘಟನೆಗಳು ಚಲನ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಇಡಲಿವೆ.

2. ನವಿ ಮುಂಬಯಿಯ ಕೆಲವು ಚಲನ ಚಿತ್ರಮಂದಿರಗಳು ಸಹ ಈ ಚಲನ ಚಿತ್ರದ ಪ್ರದರ್ಶನವನ್ನು ಇಟ್ಟಿಲ್ಲ ಎಂಬುದು ‘ಬುಕ್ ಮೈ ಶೋ’ ಆ್ಯಪ್‌ನಲ್ಲಿ ಹುಡುಕಿದಾಗ ಗಮನಕ್ಕೆ ಬಂದಿದೆ.

ಸಂಪಾದಕೀಯ ನಿಲುವು

  • ಸಾಮಾನ್ಯವಾಗಿ ಅಶ್ಲೀಲ ಮತ್ತು ಹಿಂಸಾತ್ಮಕ ವಿಷಯಗಳನ್ನು ಹೊಂದಿರುವ ಚಲನ ಚಿತ್ರಗಳನ್ನು ಪ್ರದರ್ಶಿಸಲು ಮುಂದಾಗುವ ಚಲನ ಚಿತ್ರಮಂದಿರಗಳು, ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಬಯಲು ಮಾಡುವ ಈ ಚಲನ ಚಿತ್ರವನ್ನು ಪ್ರದರ್ಶಿಸುತ್ತಿಲ್ಲ ಎಂಬುದನ್ನು ಗಮನಿಸಿ! ಇದು ಹಿಂದುತ್ವದ ಧ್ವನಿಯನ್ನು ಅಡಗಿಸುವ ಒಂದು ಪ್ರಯತ್ನವಾಗಿದೆ!
  • ‘ಉದಯಪುರ ಫೈಲ್ಸ್’ ಚಲನ ಚಿತ್ರವು ಪ್ರತಿಯೊಬ್ಬ ಹಿಂದೂವನ್ನು ತಲುಪಲು, ಹಿಂದೂಗಳು ಚಲನ ಚಿತ್ರಮಂದಿರಗಳ ವ್ಯವಸ್ಥಾಪಕರ ಮೇಲೆ ಕಾನೂನುಬದ್ಧ ಮಾರ್ಗಗಳ ಮೂಲಕ ಒತ್ತಡ ಹೇರಿ ಚಲನ ಚಿತ್ರ ಪ್ರದರ್ಶಿಸುವಂತೆ ಮಾಡಬೇಕು!