ಪಾಕಿಸ್ತಾನದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಇತ್ತೀಚಿನ ವರದಿ!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಈ ಮಕ್ಕಳ ಶೋಷಣೆ ನಡೆಯುತ್ತಿದೆ. ಮತಾಂತರಗೊಳ್ಳದಿದ್ದರೆ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಇತ್ತೀಚಿನ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
೧. ‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಧರ್ಮದ ಮಕ್ಕಳ ಸ್ಥಿತಿ’ ಎಂಬ ಶೀರ್ಷಿಕೆಯ ಈ ವರದಿಯು ವ್ಯವಸ್ಥಿತ ಪಕ್ಷಪಾತ, ಸಾಂಸ್ಥಿಕ ನಿರ್ಲಕ್ಷ್ಯ ಮತ್ತು ಉದ್ದೇಶಿತ ದೌರ್ಜನ್ಯಗಳ ಗಂಭೀರ ಚಿತ್ರಣವನ್ನು ನೀಡುತ್ತದೆ.
೨. ‘ಕ್ರೈಸ್ತ ಡೈಲಿ ಇಂಟರ್‌ನ್ಯಾಷನಲ್’ನ ಪ್ರಕಾರ, ಈ ವರದಿಯು ಸಾವಿರಾರು ಹಿಂದೂ ಮತ್ತು ಕ್ರೈಸ್ತ ಮಕ್ಕಳ ಮೇಲೆ ಬಲವಂತದ ಮತಾಂತರ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಜೀತದಾಳು ಪದ್ಧತಿಯಂತಹ ದೈನಂದಿನ ವಾಸ್ತವತೆಯನ್ನು ಆಧರಿಸಿದೆ ಮತ್ತು ಗಂಭೀರ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಹೆಣ್ಣುಮಕ್ಕಳನ್ನು ಅಪಹರಿಸಿ ಬಲವಂತದ ಮದುವೆ
ಈ ವರದಿಯ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗುತ್ತದೆ ಮತ್ತು ವಯಸ್ಸಿನಲ್ಲಿ ದೊಡ್ಡವರಾದ ಮುಸ್ಲಿಂ ಪುರುಷರೊಂದಿಗೆ ವಿವಾಹ ಮಾಡಲಾಗುತ್ತದೆ. ಇಂತಹ ಘಟನೆಗಳು ಒಂದು ಅಥವಾ ಎರಡು ಬಾರಿ ಅಲ್ಲ, ನಿರಂತರವಾಗಿ ನಡೆಯುತ್ತಿವೆ. ಕಾನೂನಿನ ಅನುಷ್ಠಾನದ ಕೊರತೆ ಮತ್ತು ಜನರ ತೀವ್ರ ಒತ್ತಡದಿಂದಾಗಿ, ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಆಯ್ಕೆಗಳು ತುಂಬಾ ಕಡಿಮೆ ಇವೆ.
ಪಂಜಾಬ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ
ಏಪ್ರಿಲ್ ೨೦೨೩ ರಿಂದ ಡಿಸೆಂಬರ್ ೨೦೨೪ ರ ಅವಧಿಯಲ್ಲಿ, ಕೊಲೆ, ಅಪಹರಣ, ಮತಾಂತರ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ವಿವಾಹಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ೨೭ ಅಧಿಕೃತ ದೂರುಗಳು ಬಂದಿದ್ದವು. ದೇಶದ ಅತಿ ಹೆಚ್ಚು ಜನಸಂಖ್ಯೆ ಇರುವ ಪಂಜಾಬ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದು ತಿಳಿದುಬಂದಿದೆ. ಜನವರಿ ೨೦೨೨ ರಿಂದ ಸೆಪ್ಟೆಂಬರ್ ೨೦೨೪ ರ ಅವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಮೇಲಿನ ಹಿಂಸಾಚಾರದ ಶೇಕಡಾ ೪೦ ರಷ್ಟು ಪ್ರಕರಣಗಳು ಇಲ್ಲಿಯೇ ದಾಖಲಾಗಿವೆ. ಪೊಲೀಸರ ಪ್ರಕಾರ, ಸಂತ್ರಸ್ತರ ಪೈಕಿ ೫೪೭ ಕ್ರೈಸ್ತರು, ೩೨ ಹಿಂದೂಗಳು, ೨ ಅಹ್ಮದೀಯರು ಮತ್ತು ೨ ಸಿಖ್ಖರು ಇದ್ದರು.
ಶಾಲೆಗಳಲ್ಲಿಯೂ ತಾರತಮ್ಯ ಎದುರಿಸುತ್ತಿದ್ದಾರೆ
ಏಕೀಕೃತ ರಾಷ್ಟ್ರೀಯ ಪಠ್ಯಕ್ರಮವನ್ನು ಟೀಕಿಸಿದ ವರದಿಯು, ಅದರಲ್ಲಿ ಧಾರ್ಮಿಕ ಸಮಗ್ರತೆಯ ಕೊರತೆ ಇದೆ ಎಂದು ಹೇಳುತ್ತದೆ. ಕ್ರೈಸ್ತ ಮತ್ತು ಹಿಂದೂ ವಿದ್ಯಾರ್ಥಿಗಳನ್ನು ಅವರ ಶ್ರದ್ಧೆಯ ವಿರುದ್ಧವಾಗಿ ಇಸ್ಲಾಮಿಕ್ ವಿಷಯಗಳನ್ನು ಕಲಿಯಲು ಒತ್ತಾಯಿಸಲಾಗುತ್ತದೆ. ಶಾಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಸಾಮಾಜಿಕ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ತರಗತಿಯಲ್ಲಿ ಮುಂದೆ ಕೂರಲು ಮತ್ತು ಪ್ರಶ್ನೆಗಳನ್ನು ಕೇಳಲು ಸಹ ಅವರು ಹಿಂಜರಿಯುತ್ತಾರೆ. ಅವರ ನಂಬಿಕೆಗಳನ್ನು ಗೇಲಿ ಮಾಡಲಾಗುತ್ತದೆ ಮತ್ತು ಬಹುಮಾನ ಪಡೆಯಲು ಇಸ್ಲಾಂ ಅನ್ನು ಸ್ವೀಕರಿಸಲು ಹೇಳಲಾಗುತ್ತದೆ.
ಜೀತದಾಳು ಪದ್ಧತಿಗೆ ಬಲವಂತ
ಈ ವರದಿಯಲ್ಲಿ ಜೀತದಾಳು ಪದ್ಧತಿಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಮಕ್ಕಳು ಇಟ್ಟಿಗೆ ಭಟ್ಟಿಗಳಲ್ಲಿ ಅಥವಾ ಹೊಲಗಳಲ್ಲಿ ಬಲವಂತದ ದುಡಿಮೆಯ ದುಷ್ಚಕ್ರದಲ್ಲಿ ಸಿಲುಕುತ್ತಾರೆ. ಅವರ ಕುಟುಂಬಗಳು ಈಗಾಗಲೇ ತಲೆಮಾರುಗಳಿಂದ ಬಡತನ ಮತ್ತು ತಾರತಮ್ಯದ ಭಾರದಿಂದ ನರಳುತ್ತಿವೆ. ಅವರಿಗೆ ರಾಜ್ಯದಿಂದ ಯಾವುದೇ ರಕ್ಷಣೆ ಸಿಗುತ್ತಿಲ್ಲ.
ಆಯೋಗದ ಅಧ್ಯಕ್ಷೆ ಆಯೇಷಾ ರಜಾ ಫಾರೂಕ್ ಅವರು, ಮಕ್ಕಳ ಸ್ಥಿತಿಯನ್ನು ಸುಧಾರಿಸುವಲ್ಲಿ ಸೀಮಿತ ಪ್ರಯತ್ನಗಳು, ಸಮನ್ವಯದ ಕೊರತೆ ಮತ್ತು ಸೀಮಿತ ರಾಜಕೀಯ ಇಚ್ಛಾಶಕ್ತಿಯಿಂದ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಹಲವು ವರ್ಷಗಳಿಂದ ಜಗತ್ತಿಗೆ ತಿಳಿದಿದ್ದನ್ನೇ ಈಗ ಪಾಕಿಸ್ತಾನದ ಆಯೋಗ ಹೇಳುತ್ತಿದೆ! ಕಳೆದ ಹಲವು ವರ್ಷಗಳಿಂದ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ ಎಂಬುದು ಕೂಡ ಅಷ್ಟೇ ನಿಜ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!