ಭಾರತವು ಅಮೇರಿಕಾದಿಂದ ಶಸ್ತ್ರಾಸ್ತ್ರ ಖರೀದಿಸುವುದನ್ನು ಸ್ಥಗಿತಗೊಳಿಸಿದೆ ಎಂಬ ಸುದ್ದಿ ಸುಳ್ಳು!

ನವದೆಹಲಿ – ‘ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 50%ರಷ್ಟು ಆಮದು ಸುಂಕ ವಿಧಿಸುವುದಾಗಿ ಘೋಷಿಸಿದ ನಂತರ, ಭಾರತವು ಅಮೇರಿಕಾದಿಂದ ಶಸ್ತ್ರಾಸ್ತ್ರ ಮತ್ತು ವಿಮಾನ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ರಾಜನಾಥ್ ಸಿಂಗ್ ಅವರ ಅಮೇರಿಕಾ ಪ್ರವಾಸವನ್ನು ರದ್ದುಗೊಳಿಸಲಾಗಿದೆ,’ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತ ಸಿದ್ಧಾಂತ್ ಸಿಬಲ್, ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ, ಅಮೇರಿಕಾದಿಂದ ರಕ್ಷಣಾ ಖರೀದಿಗಳನ್ನು ತಡೆಹಿಡಿಯುವ ಕುರಿತು ರಾಯಿಟರ್ಸ್ ಪ್ರಕಟಿಸಿರುವ ಸುದ್ದಿ ಸುಳ್ಳು ಮತ್ತು ಕಾಲ್ಪನಿಕ ಎಂದು ಸ್ಪಷ್ಟಪಡಿಸಿದರು. (ಹಾಗಿದ್ದರೆ, ರಕ್ಷಣಾ ಸಚಿವಾಲಯ ಈ ಬಗ್ಗೆ ಬಹಿರಂಗವಾಗಿ ಏಕೆ ಹೇಳುತ್ತಿಲ್ಲ? ವಾಸ್ತವವಾಗಿ ಅಮೇರಿಕಾದ ದಾದಾಗಿರಿಯನ್ನು ನೋಡಿದರೆ, ಭಾರತವು ಈ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಭಾರತೀಯರಿಗೆ ಅನ್ನಿಸುತ್ತದೆ ! – ಸಂಪಾದಕರು).