ಕುಲಗಾಮ್ (ಕಾಶ್ಮೀರ) : ಎನ್‌ಕೌಂಟರ್‌ನಲ್ಲಿ ೩ ಭಯೋತ್ಪಾದಕರು ಹತ, ೨ ಸೈನಿಕರು ವೀರಮರಣ – Kulgam Terror Attack

ಕುಲಗಾಮ್ (ಜಮ್ಮು-ಕಾಶ್ಮೀರ) – ಇಲ್ಲಿನ ಕುಲಗಾಮ್‌ನ ಅಖಲ ಅರಣ್ಯದಲ್ಲಿ ಭದ್ರತಾ ಪಡೆಗಳು ಇಲ್ಲಿಯವರೆಗೆ ೩ ಭಯೋತ್ಪಾದಕರನ್ನು ಹತ್ಯೆ ಮಾಡಿವೆ. ಆಗಸ್ಟ್ ೧ ರಿಂದ ಪ್ರಾರಂಭವಾದ ‘ಆಪರೇಷನ್ ಅಖಲ್’ ಹೆಸರಿನ ಕಾರ್ಯಾಚರಣೆಯ ಒಂಬತ್ತನೇ ದಿನದವರೆಗೆ ಭಾರತ ೩ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಈ ವೇಳೆ ೨ ಸೈನಿಕರು ಸಹ ವೀರಮರಣವನ್ನಪ್ಪಿದ್ದಾರೆ. ಇದರೊಂದಿಗೆ ೪ ಸೈನಿಕರು ಗಾಯಗೊಂಡಿದ್ದಾರೆ. ವೀರಮರಣವನ್ನಪ್ಪಿದ ಸೈನಿಕರ ಹೆಸರುಗಳು ಲಾನ್ಸ್ ನಾಯಕ ಪ್ರೀತಪಾಲ ಸಿಂಗ್ ಮತ್ತು ಸಿಪಾಯಿ ಹರ್ಮಿ೦ದರ್ ಸಿಂಗ್ ಎಂದಾಗಿದೆ.

ವೀರಮರಣವನ್ನಪ್ಪಿದ ಸೈನಿಕರು ಲಾನ್ಸ್ ನಾಯಕ ಪ್ರೀತಪಾಲ ಸಿಂಗ್ ಮತ್ತು ಸಿಪಾಯಿ ಹರ್ಮಿ೦ದರ್ ಸಿಂಗ್

‘ಆಪರೇಷನ್ ಅಖಲ್’ ಅನ್ನು ವಿಶೇಷ ಕಾರ್ಯಪಡೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳು ಜಂಟಿಯಾಗಿ ನಡೆಸುತ್ತಿವೆ. ಅರಣ್ಯದಲ್ಲಿ ಇನ್ನೂ ಭಯೋತ್ಪಾದಕರು ಅಡಗಿರಬಹುದು ಎಂದು ಶಂಕಿಸಲಾಗಿದೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ.

ಸಂಪಾದಕೀಯ ನಿಲುವು

ಭಯೋತ್ಪಾದನೆಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಭಯೋತ್ಪಾದಕರ ಕಾರ್ಖಾನೆಯಾದ ಪಾಕಿಸ್ತಾನವನ್ನೇ ಭಾರತ ಏಕೆ ನಾಶ ಮಾಡುವುದಿಲ್ಲ? ನಾವು ೩ ಭಯೋತ್ಪಾದಕರನ್ನು ಹತ್ಯೆ ಮಾಡುವಷ್ಟರಲ್ಲಿ ಪಾಕಿಸ್ತಾನದಲ್ಲಿ ೩೦ ಹೊಸ ಭಯೋತ್ಪಾದಕರು ಹುಟ್ಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಬೇಕು!