1946 ರಲ್ಲಿ ಬಂಗಾಳದಲ್ಲಿ ನಡೆದ ಹಿಂದೂಗಳ ನರಮೇಧ ಕುರಿತಾದ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಬಂಗಾಳ ಫೈಲ್ಸ್ ‘ ಚಲನ ಚಿತ್ರದ ನಿರ್ಮಾಣ

  • ಚಲನ ಚಿತ್ರ ಬಿಡುಗಡೆಯಾಗದಂತೆ ತಡೆಯಲು ತೃಣಮೂಲ ಕಾಂಗ್ರೆಸ್ ಸರಕಾರದ ಪ್ರಯತ್ನ

  • ಅಗ್ನಿಹೋತ್ರಿ ವಿರುದ್ಧ ಹಲವು ಪ್ರಕರಣಗಳು ದಾಖಲು

  • ಚಲನ ಚಿತ್ರವನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ

ಮುಂಬಯಿ – ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯಗಳ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ ಚಲನ ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅವರು, 1946 ರಲ್ಲಿ ಬಂಗಾಳದಲ್ಲಿ ನಡೆದ ಹಿಂದೂಗಳ ನರಮೇಧದ ಕುರಿತು ‘ದಿ ಬಂಗಾಳ ಫೈಲ್ಸ್’ ಎಂಬ ಚಲನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ನರಮೇಧವು ‘ಡೈರೆಕ್ಟ್ ಆಕ್ಷನ್ ಡೇ’ ಎಂಬ ಹೆಸರಿನಿಂದಲೂ ಪರಿಚಿತವಾಗಿದೆ. ಚಲನ ಚಿತ್ರವನ್ನು ತಡೆಯಲು ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಗ್ನಿಹೋತ್ರಿ ಆರೋಪಿಸಿದ್ದಾರೆ. ಬಂಗಾಳದ ಹಲವು ನಗರಗಳಲ್ಲಿ ವಿವೇಕ ಅಗ್ನಿಹೋತ್ರಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಕೋಲಕಾತಾ ಉಚ್ಚ ನ್ಯಾಯಾಲಯವು ಈ ಪ್ರಕರಣಗಳ ದಾಖಲಾತಿಗೆ ತಡೆಯಾಜ್ಞೆ ನೀಡಿದೆ. ಇದರ ನಂತರ, ಅಗ್ನಿಹೋತ್ರಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ, ಚಲನ ಚಿತ್ರದ ಟ್ರೈಲರ್ ಅನ್ನು ಬಂಗಾಳದಿಂದಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಚಲನ ಚಿತ್ರವು ಸೆಪ್ಟೆಂಬರ್ 5, 2025 ರಂದು ಬಿಡುಗಡೆಯಾಗಲಿದೆ. ‘ಈ ಚಲನ ಚಿತ್ರವನ್ನು ಯಾವುದೇ ಕಾನೂನು ಸಂಕಷ್ಟಕ್ಕೆ ಸಿಲುಕಿಸಿ, ಅದು ಬಿಡುಗಡೆಯಾಗದಂತೆ ನೋಡಿಕೊಳ್ಳುವುದು ತೃಣಮೂಲ ಕಾಂಗ್ರೆಸ್ ಸರಕಾರದ ಕಾರ್ಯತಂತ್ರವಾಗಿದೆ’ ಎಂದು ಅಗ್ನಿಹೋತ್ರಿ ಹೇಳಿದರು.

ತೃಣಮೂಲಕ್ಕೆ ಚಲನ ಚಿತ್ರದ ಭಯವೇ ಅಥವಾ ಸತ್ಯದ ಭಯವೇ?

ಅಗ್ನಿಹೋತ್ರಿ ಅವರು ಮಾತು ಮುಂದುವರಿಸಿ, ‘ನಮ್ಮ ಧ್ವನಿಯನ್ನು ಏಕೆ ಅಡಗಿಸುತ್ತೀರಿ? ಬಂಗಾಳದ ಇತಿಹಾಸದ ಕರಾಳ ಅಧ್ಯಾಯವನ್ನು ಬಂಗಾಳ ಸರಕಾರ ಏಕೆ ಮುಚ್ಚಿಡಲು ಬಯಸಿದೆ? ಮುರ್ಷಿದಾಬಾದ್ ಜನರಿಗೆ ಅವರ ಇತಿಹಾಸ ತಿಳಿಯಬೇಕು. ಸತ್ಯವನ್ನು ಜನರ ವರೆಗೆ ತಲುಪಲು ಏಕೆ ಅವಕಾಶ ನೀಡುತ್ತಿಲ್ಲ? ಅವರಿಗೆ ಚಲನ ಚಿತ್ರದ ಭಯವೇ ಅಥವಾ ಸತ್ಯದ ಭಯವೇ? ನಾವು ಚಲನ ಚಿತ್ರದ ಟ್ರೈಲರ್ ಅನ್ನು ಬಂಗಾಳದಲ್ಲಿಯೇ ಬಿಡುಗಡೆ ಮಾಡುತ್ತೇವೆ. ನನ್ನನ್ನು ಯಾರಿಂದಲೂ ಸುಮ್ಮನಿರಿಸಲು ಸಾಧ್ಯವಿಲ್ಲ, ಏಕೆಂದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬಂಗಾಳದಲ್ಲಿ ಚಲನಚಲನ ಚಿತ್ರದ ಚಲನ ಚಿತ್ರೀಕರಣವನ್ನು ತಡೆದರು

ವಿವೇಕ ಅಗ್ನಿಹೋತ್ರಿ ಅವರು, ‘ದಿ ಬಂಗಾಳ ಫೈಲ್ಸ್’ ಚಲನ ಚಿತ್ರೀಕರಣವನ್ನು ಬಂಗಾಳದಲ್ಲಿ ನಡೆಸಲು ಬಿಡಲಿಲ್ಲ. ಆದ್ದರಿಂದ ಇಡೀ ಚಲನ ಚಿತ್ರವನ್ನು ಮುಂಬಯಿಯಲ್ಲಿಯೇ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಇದು ಜನರ ಚಲನಚಲನ ಚಿತ್ರವಾಗಿದ್ದು, ಜನರೇ ನಮ್ಮ ಶಕ್ತಿ. ‘ದಿ ಬಂಗಾಳ ಫೈಲ್ಸ್’ ಚಲನ ಚಿತ್ರದ ಕಥೆಯನ್ನು ವಿವೇಕ್ ಅಗ್ನಿಹೋತ್ರಿ ಅವರೇ ಬರೆದಿದ್ದಾರೆ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಲನ ಚಿತ್ರದಲ್ಲಿ ನಟಿ ಪಲ್ಲವಿ ಜೋಶಿ, ನಟ ಮಿಥುನ್ ಚಕ್ರವರ್ತಿ, ಅನುಪಮ ಖೇರ್ ಮತ್ತು ದರ್ಶನ ಕುಮಾರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಡೈರೆಕ್ಟ್ ಆಕ್ಷನ್ ಡೇ’ ಎಂದರೇನು?

ಈ ಚಲನ ಚಿತ್ರದಲ್ಲಿ 1946 ರಲ್ಲಿ ಅವಿಭಜಿತ ಬಂಗಾಳದಲ್ಲಿ ನಡೆದ ಹಿಂದೂಗಳ ನರಮೇಧದ ಚಿತ್ರಣವಿದೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್‌ ನ 1946 ರ ‘ಡೈರೆಕ್ಟ್ ಆಕ್ಷನ್ ಡೇ’ (ಹಿಂದೂಗಳ ವಿರುದ್ಧದ ಕೃತ್ಯ) ಮತ್ತು ನೋವಾಖಾಲಿ ಗಲಭೆಗಳು ಸೇರಿವೆ. ಈ ನರಮೇಧವು 5 ದಿನಗಳ ಕಾಲ ನಡೆಯಿತು. ಕೇವಲ ಕೋಲಕಾತಾದಲ್ಲಿ 72 ಗಂಟೆಗಳಲ್ಲಿ ಸುಮಾರು 6 ಸಾವಿರ ಹಿಂದೂಗಳನ್ನು ಕೊಲ್ಲಲಾಯಿತು. 20 ಸಾವಿರಕ್ಕೂ ಹೆಚ್ಚು ಹಿಂದೂಗಳು ಗಂಭೀರವಾಗಿ ಗಾಯಗೊಂಡರು. 1 ಲಕ್ಷ ಜನರು ತಮ್ಮ ಎಲ್ಲ ಆಸ್ತಿಪಾಸ್ತಿಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು.

ಹಿಂದೂಗಳನ್ನು ಹೆಕ್ಕಿ ಕೊಲ್ಲಲಾಯಿತು, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡಲಾಯಿತು, ಹಿಂದೂಗಳ ಆಸ್ತಿಪಾಸ್ತಿಗಳನ್ನು ಸುಟ್ಟುಹಾಕಲಾಯಿತು. ಪೂರ್ವ ಬಂಗಾಳದ ನೋವಾಖಾಲಿ ಭಾಗದಲ್ಲಿ ನಡೆದ ಹಿಂದೂಗಳ ಸಾಮೂಹಿಕ ಹತ್ಯೆಯನ್ನು ಇತಿಹಾಸದಲ್ಲಿ ಕರಾಳ ಅಧ್ಯಾಯವೆಂದು ಬರೆಯಲಾಗಿದೆ. ಇದು ಹಲವು ತಿಂಗಳುಗಳ ಕಾಲ ನಡೆಯಿತು. ಸಾವಿರಾರು ಹಿಂದೂಗಳನ್ನು ಕೊಲ್ಲಲಾಯಿತು. ಅಂದಾಜು 75 ಸಾವಿರ ಹಿಂದೂಗಳು ಕೇವಲ ನೋವಾಖಾಲಿಯಿಂದ ಪಲಾಯನ ಮಾಡಬೇಕಾಯಿತು, ಹಾಗೂ ಟಿಪ್ಪರಾದಿಂದ 20 ಸಾವಿರಕ್ಕೂ ಹೆಚ್ಚು ಹಿಂದೂಗಳು ಪಲಾಯನ ಮಾಡಿದರು.

 

ಸಂಪಾದಕೀಯ ನಿಲುವು

  • ಮುಸ್ಲಿಮರು ಹಿಂದೂಗಳ ನರಮೇಧ ಮಾಡಿದ ಇತಿಹಾಸವನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿದಾಗ, ವೈಚಾರಿಕ ಸುನ್ನತಿ ಮಾಡಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ವಿರೋಧಿಸದೇ ಇರಲು ಸಾಧ್ಯವೇ?
  • ಬಂಗಾಳದ ನಿದ್ರಿಸ್ತ ಹಿಂದೂಗಳು 79 ವರ್ಷಗಳ ಹಿಂದೆ ಮತ್ತು ನಂತರವೂ ನಡೆದ ನರಮೇಧದ ಬಗ್ಗೆ ಇನ್ನೂ ನಿಷ್ಕ್ರಿಯರಾಗಿದ್ದರೆ, ಅವರನ್ನು ಯಾರು ಯಾವ ಕಾರಣಕ್ಕಾಗಿ ರಕ್ಷಿಸುತ್ತಾರೆ?