ರಾಜಸ್ಥಾನದಲ್ಲಿ ಓರ್ವ ವ್ಯಕ್ತಿಯಿಂದ 25 ಕ್ಕೂ ಹೆಚ್ಚು ನಾಯಿಗಳ ಮೇಲೆ ಗುಂಡಿನ ದಾಳಿ!

ಝುಂಝುನು (ರಾಜಸ್ಥಾನ) – ಜಿಲ್ಲೆಯ ನವಲಗಢದ ಕುಮಾವಸ್ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಆಗಸ್ಟ್ 2 ಮತ್ತು 3 ರಂದು 25 ಕ್ಕೂ ಹೆಚ್ಚು ನಾಯಿಗಳ ಮೇಲೆ ಗುಂಡು ಹಾರಿಸಿ ಸಾಯಿಸಿದ್ದಾನೆ. ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಗುಂಡು ಹಾರಿಸಿದ ನಂತರ ನಾಯಿಗಳ ರಕ್ತಸಿಕ್ತ ಶವಗಳು ಗ್ರಾಮದ ರಸ್ತೆಗಳಲ್ಲಿ ಬಿದ್ದಿದ್ದವು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲು ಸಿದ್ಧತೆ ನಡೆಸಿದ್ದಾರೆ. ತನಿಖೆಯ ವೇಳೆ, ಗುಂಡು ಹಾರಿಸಿದವನ ಹೆಸರು ಶ್ಯೋಕಂದ ಬವಾರಿಯಾ ಎಂದಿದ್ದು, ಅವನು ಡುಮ್ರಾ ಗ್ರಾಮದ ನಿವಾಸಿಯಾಗಿದ್ದಾನೆ. ಗುಂಡಿನ ದಾಳಿ ನಡೆಸಿದ ಹಿಂದಿನ ಉದ್ದೇಶ ತಿಳಿದುಬಂದಿಲ್ಲ ಎನ್ನಲಾಗಿದೆ.